ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ಹೊಸ ನಾರ್ಟನ್ ಬೈಕ್‌ಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆಯೇ ಎಂಬ ಕುತೂಹಲಕ್ಕೆ ಕಂಪನಿಯ ಹೊಸ ಮಾಲೀಕನಾದ ಟಿವಿಎಸ್ ಮೋಟಾರ್ ಕಂಪನಿ ಪ್ರತಿಕ್ರಿಯೆ ನೀಡಿದೆ. ಈ ವಿಷಯವು ಭಾರತೀಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಟಿವಿಎಸ್ ಮೋಟಾರ್ಸ್ ಕಂಪನಿಯು ಯುಕೆ ಮೂಲದ ನಾರ್ಟನ್ ಮೋಟರ್ ಸೈಕಲ್ಸ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಟಿವಿಎಸ್ ಮೋಟಾರ್ ಕಂಪನಿಯು ತನ್ನ ಅಂಗಸಂಸ್ಥೆಯಾದ ನಾರ್ಟನ್ ಕಂಪನಿಯನ್ನು ರೂ.153 ಕೋಟಿ ನೀಡಿ ಸ್ವಾಧೀನಪಡಿಸಿಕೊಂಡಿದೆ.

ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ಈ ಬೆಳವಣಿಗೆಗಳನ್ನು ಗಮನಿಸಿದರೆ, ಎನ್‌ವಿಟಿ ಬೈಕ್‌ಗಳನ್ನು ಟಿವಿಎಸ್‌ಗೆ ಮಾರಾಟ ಮಾಡುವುದು ಖಚಿತ. ನಾರ್ಟನ್ ಬೈಕುಗಳನ್ನು ಭಾರತದಲ್ಲಿ ಉತ್ಪಾದಿಸಿ, ವಿದೇಶಕ್ಕೆ ರಫ್ತು ಮಾಡಲಾಗುವುದೆಂದು ವರದಿಗಳಾಗಿದ್ದವು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ಟಿವಿಎಸ್‌ ಕಂಪನಿಯ ಹೊಸೂರು ಉತ್ಪಾದನಾ ಘಟಕದಲ್ಲಿ ಬಿಎಂಡಬ್ಲ್ಯು ಜಿ 310 ಬೈಕುಗಳನ್ನು ತಯಾರಿಸಿದ ರೀತಿಯಲ್ಲಿಯೇ ನಾರ್ಟನ್ ಬೈಕ್‌ಗಳನ್ನು ತಯಾರಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ಈ ಬಗ್ಗೆ ಕಾರ್ ಅಂಡ್ ಬೈಕ್ ಜೊತೆ ಮಾತನಾಡಿರುವ ಟಿವಿಎಸ್‌ ಕಂಪನಿಯ ಸಹ-ವ್ಯವಸ್ಥಾಪಕ ನಿರ್ದೇಶಕರಾದ ಸುದರ್ಶನ್ ವೇಣುರವರು ನಾರ್ಟನ್ ಬೈಕುಗಳನ್ನು ಭಾರತದಲ್ಲಿ ಮಾರಾಟ ಮಾಡುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ನಾರ್ಟನ್ ಬೈಕ್‌ಗಳನ್ನು ಭಾರತದಲ್ಲಿ ಉತ್ಪಾದಿಸುವ ಯಾವುದೇ ಯೋಜನೆಗಳಿಲ್ಲವೆಂದು ಅವರು ಹೇಳಿದ್ದಾರೆ. ಇದರಿಂದ ಭಾರತದಲ್ಲಿ ನಾರ್ಟನ್ ಬೈಕ್‌ಗಳ ಉತ್ಪಾದನೆಯಾಗುವುದಿಲ್ಲವೆಂಬುದು ಖಚಿತವಾಗಿದೆ.

ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ಸದ್ಯಕ್ಕೆ ನಾರ್ಟನ್ ಬೈಕುಗಳನ್ನು ಇಂಗ್ಲೆಂಡ್‌ನಲ್ಲಿರುವ ಡೊನಿಂಗ್ಟನ್ ಹಾಲ್ ನಗರದ ಡರ್ಬಿಯಲ್ಲಿರುವ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಟಿವಿಎಸ್ ಗ್ರೂಪ್ ಈ ಘಟಕದಿಂದ ಅದೇ ಪ್ರದೇಶದಲ್ಲಿರುವ ಮತ್ತೊಂದು ಘಟಕಕ್ಕೆ ಸ್ಥಳಾಂತರಿಸಲು ಯೋಜಿಸಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ಇದರ ಜೊತೆಗೆ ಟಿವಿಎಸ್ ಗ್ರೂಪ್ ನಾರ್ಟನ್‌ನಲ್ಲಿರುವ ಹೆಚ್ಚಿನ ಉದ್ಯೋಗಿಗಳನ್ನು ಉಳಿಸಿಕೊಳ್ಳಲಿದ್ದು, ಕೆಲವು ಉದ್ಯೋಗಿಗಳನ್ನು ಮಾತ್ರ ಕೆಲಸದಿಂದ ತೆಗೆಯುವುದಾಗಿ ತಿಳಿಸಿದೆ.

ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ನಾರ್ಟನ್ ಈ ಶತಮಾನದ ಅತ್ಯಂತ ಹಳೆಯ ಬೈಕು ಕಂಪನಿಯಾಗಿದೆ. ಟಿವಿಎಸ್ ಗ್ರೂಪ್, ನಾರ್ಟನ್‌ ಕಂಪನಿಯ ಪರಂಪರೆಯನ್ನು ಗೌರವಿಸಿ, ಮುಂದುವರೆಸುವುದಾಗಿ ತಿಳಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಭಾರತದಲ್ಲಿ ಉತ್ಪಾದನೆಯಾಗಲಿವೆಯೇ ನಾರ್ಟನ್ ಬೈಕ್‌ಗಳು?

ನಾರ್ಟನ್ ಕಂಪನಿಯು ಪ್ರೀಮಿಯಂ ಬೈಕ್‌ಗಳಾದ ಡೊಮಿನೇಟರ್, ಕಮಾಂಡೋ 961 ಕೆಫೆ ರೇಸರ್, ಅಟ್ಲಾಸ್, ಸೂಪರ್ ಲೈಟ್ ಹಾಗೂ ವಿ4 ಆರ್‌ ಆರ್‌ಗಳನ್ನು ಸಹ ಮಾರಾಟ ಮಾಡುತ್ತದೆ. ಟಿವಿಎಸ್ ಕಂಪನಿಯು ಹೆಚ್ಚಿನ ಸಂಖ್ಯೆಯ ಪ್ರೀಮಿಯಂ ಬೈಕ್‌ಗಳನ್ನು ನಾರ್ಟನ್ ಬ್ರಾಂಡ್‌‌ನಡಿ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ.

Most Read Articles

Kannada
English summary
TVS clarifies about Norton bike manufacture in India. Read in Kannada.
Story first published: Thursday, April 23, 2020, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X