ಎಕ್ಸ್‌ಪರ್ಟ್ ಆನ್ ವ್ಹೀಲ್ ಆರಂಭಿಸಿದ ಟಿವಿಎಸ್ ಮೋಟಾರ್

ಸರ್ವೀಸ್ ಸೆಂಟರ್ ಗಳಲ್ಲಿನ ದಟ್ಟಣೆಯನ್ನು ಕಡಿಮೆಗೊಳಿಸಲು ಹಾಗೂ ಮಾರಕ ಕರೋನಾ ವೈರಸ್ ಸೋಂಕು ಹರಡದಂತೆ ತಡೆಯಲು ಖ್ಯಾತ ಬೈಕ್ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ಇಂಡಿಯಾ ಭಾರತದಾದ್ಯಂತ ಟಿವಿಎಸ್ ಎಕ್ಸ್‌ಪರ್ಟ್ ಆನ್ ವ್ಹೀಲ್ ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ.

ಎಕ್ಸ್‌ಪರ್ಟ್ ಆನ್ ವ್ಹೀಲ್ ಆರಂಭಿಸಿದ ಟಿವಿಎಸ್ ಮೋಟಾರ್

ಈ ಯೋಜನೆಯಡಿ, ಟಿವಿಎಸ್ ಗ್ರಾಹಕರು ತಮ್ಮ ಟಿವಿಎಸ್ ಬೈಕ್ ಅಥವಾ ಸ್ಕೂಟರ್‌ಗಳನ್ನು ತಮ್ಮ ಮನೆಗಳಲ್ಲಿಯೇ ಸರ್ವೀಸ್ ಮಾಡಿಸಿಕೊಳ್ಳಬಹುದು. ಈ ಯೋಜನೆಯು ದೇಶಾದ್ಯಂತವಿರುವ ಕಂಪನಿಯ 300ಕ್ಕೂ ಹೆಚ್ಚು ಡೀಲರ್ ಗಳ ಬಳಿ ಲಭ್ಯವಿರಲಿದೆ ಎಂದು ಕಂಪನಿ ಹೇಳಿದೆ.

ಎಕ್ಸ್‌ಪರ್ಟ್ ಆನ್ ವ್ಹೀಲ್ ಆರಂಭಿಸಿದ ಟಿವಿಎಸ್ ಮೋಟಾರ್

ಈ ಯೋಜನೆಯಡಿಯಲ್ಲಿ, ಟಿವಿಎಸ್ ಮೋಟಾರ್ ಕಂಪನಿ ತನ್ನ ಗ್ರಾಹಕರ ವಾಹನಗಳ ಮೆಂಟೆನೆನ್ಸ್ ಸರ್ವೀಸ್ ಅನ್ನು ಅವರ ಮನೆಗಳಲ್ಲಿಯೇ ನೀಡಲಿದೆ. ಈ ಸೇವೆಯನ್ನು ಪಡೆಯಲು ಗ್ರಾಹಕರು ತಮ್ಮ ಹತ್ತಿರದಲ್ಲಿರುವ ಟಿವಿಎಸ್ ಮಾರಾಟಗಾರರ ಬಳಿ ಬುಕ್ಕಿಂಗ್ ಮಾಡಬೇಕಾಗುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಎಕ್ಸ್‌ಪರ್ಟ್ ಆನ್ ವ್ಹೀಲ್ ಆರಂಭಿಸಿದ ಟಿವಿಎಸ್ ಮೋಟಾರ್

ಬುಕ್ಕಿಂಗ್ ಮಾಡಿದ ನಂತರ, ಟಿವಿಎಸ್ ಟೆಕ್ನಿಶಿಯನ್ ಗಳು ಗ್ರಾಹಕರ ಮನೆಗೆ ಭೇಟಿ ನೀಡಿ ವಾಹನಗಳ ಸರ್ವೀಸ್ ಮಾಡುತ್ತಾರೆ. ಸರ್ವೀಸ್ ನೀಡಲು ಬರುವ ಟೆಕ್ನಿಶಿಯನ್ ಗಳಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ ಎಂದು ಟಿವಿಎಸ್ ಮೋಟಾರ್ ಹೇಳಿಕೊಂಡಿದೆ.

ಎಕ್ಸ್‌ಪರ್ಟ್ ಆನ್ ವ್ಹೀಲ್ ಆರಂಭಿಸಿದ ಟಿವಿಎಸ್ ಮೋಟಾರ್

ಎಲ್ಲಾ ಟೆಕ್ನಿಶಿಯನ್ ಗಳು ಗ್ರಾಹಕರ ಮನೆಯಲ್ಲಿ ಸ್ಯಾನಿಟೈಜರ್, ಸಾಮಾಜಿಕ ಅಂತರ ಹಾಗೂ ಪಿಪಿಇ ಕಿಟ್‌ ಬಳಕೆ ಸೇರಿದಂತೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಾರೆ. ಆದರೆ ಈ ವ್ಹೀಲ್ ಆನ್ ಸರ್ವೀಸ್ ಪಡೆಯಲು ಟೆಕ್ನಿಶಿಯನ್ ರವರನ್ನು ಹೇಗೆ ಬುಕ್ ಮಾಡುವುದು ಎಂಬ ಬಗ್ಗೆ ಕಂಪನಿಯು ಇನ್ನೂ ಮಾಹಿತಿ ನೀಡಿಲ್ಲ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಎಕ್ಸ್‌ಪರ್ಟ್ ಆನ್ ವ್ಹೀಲ್ ಆರಂಭಿಸಿದ ಟಿವಿಎಸ್ ಮೋಟಾರ್

ಈ ಸೇವೆಯನ್ನು ಬುಕ್ಕಿಂಗ್ ಮಾಡಲು ಗ್ರಾಹಕರು ತಮ್ಮ ಹತ್ತಿರದ ಡೀಲರ್ ಗಳನ್ನು ಸಂಪರ್ಕಿಸಬೇಕೆಂದು ಹೇಳಲಾಗಿದೆ. ಇದರ ಜೊತೆಗೆ ಟಿವಿಎಸ್ ಮೋಟಾರ್ ಕಂಪನಿಯು ಈ ಸೇವೆಯನ್ನು ಯಾವ ಯಾವ ನಗರಗಳಲ್ಲಿ ಆರಂಭಿಸಿದೆ ಎಂದು ಸಹ ತಿಳಿಸಿಲ್ಲ.

ಎಕ್ಸ್‌ಪರ್ಟ್ ಆನ್ ವ್ಹೀಲ್ ಆರಂಭಿಸಿದ ಟಿವಿಎಸ್ ಮೋಟಾರ್

ವ್ಹೀಲ್ ಆನ್ ಸರ್ವೀಸ್ ಪಡೆಯಲು ಬಯಸುವ ಗ್ರಾಹಕರು, ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಸಹ ತನ್ನ ಗ್ರಾಹಕರಿಗಾಗಿ ಡೋರ್ ಸರ್ವೀಸ್ ಆರಂಭಿಸಿದೆ.

Most Read Articles

Kannada
English summary
TVS company technicians to provide service at door step. Read in Kannada.
Story first published: Thursday, August 6, 2020, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X