ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದ ಟಿವಿಎಸ್ ಮೋಟಾರ್

ದೇಶಾದ್ಯಂತ ಕರೋನಾ ವೈರಸ್ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ವೈರಸ್ ತಡೆಗಾಗಿ ವಿವಿಧ ರಾಜ್ಯಗಳಲ್ಲಿ ಇದೀಗ ಎರಡನೇ ಬಾರಿಗೆ ಭಾಗಶಃ ಲೌಕ್‌ಡೌನ್ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ತನ್ನ ಗ್ರಾಹಕರಿಗೆ ಕೆಲವು ವಿನಾಯ್ತಿಗಳನ್ನು ಘೋಷಿಸಿರುವ ಟಿವಿಎಸ್ ಕಂಪನಿಯು ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದೆ.

ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದ ಟಿವಿಎಸ್

ಲಾಕ್‌ಡೌನ್ ಅವಧಿಯಲ್ಲಿ ಕೊನೆಗೊಂಡಿದ್ದ ದ್ವಿಚಕ್ರ ವಾರಂಟಿ ಅವಧಿಯನ್ನು ಈ ಮೊದಲು ಜೂನ್ 30ರ ತನಕ ವಿಸ್ತರಣೆ ಮಾಡಿದ್ದ ಟಿವಿಎಸ್ ಕಂಪನಿಯು ಇದೀಗ ವೈರಸ್ ಹೆಚ್ಚಳ ಪರಿಣಾಮ ಸೇವಾ ಕೇಂದ್ರಗಳಿಗೆ ಬರುವ ವಾಹನಗಳನ್ನು ಸಂಖ್ಯೆಯನ್ನು ತಗ್ಗಿಸಲು ಮತ್ತೊಮ್ಮೆ ವಾರಂಟಿ ಅವಧಿ ವಿಸ್ತರಿಸಿದೆ. ವಿಸ್ತರಿತ ವಾರಂಟಿ ಅವಧಿಯು ಜುಲೈ 31ರ ತನಕ ಅನ್ವಯವಾಗಲಿದ್ದು, ಕರೋನಾ ವೈರಸ್‌ ಹೆಚ್ಚಳವಾಗಿರುವಾಗ ಉಚಿತ ಸರ್ವೀಸ್ ಪಡೆಯಲು ಸಾಧ್ಯವಾಗದ ಗ್ರಾಹಕರಿಗೆ ಇದು ಸಹಕಾರಿಯಾಗಲಿದೆ.

ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದ ಟಿವಿಎಸ್

ಇನ್ನು ಕರೋನಾ ವೈರಸ್‌ನಿಂದಾಗಿ ಭಾರೀ ನಷ್ಟ ಅನುಭವಿಸುತ್ತಿರುವ ಆಟೋ ಕಂಪನಿಗಳು ಸುರಕ್ಷಿತ ವಹಿವಾಟು ನಡೆಸಲು ಹರಸಾಹಸ ಪಡುತ್ತಿದ್ದು, ಸೋಂಕು ಹರಡುವ ಭೀತಿಯಿಂದಾಗಿ ಗ್ರಾಹಕರ ಸೇವೆಗಳನ್ನು ಸಾಧ್ಯವಷ್ಟು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿವೆ.

ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದ ಟಿವಿಎಸ್

ವಾಹನ ಮಾರಾಟ ಮಳಿಗೆಗಳಿಗೆ ಗ್ರಾಹಕರ ಭೇಟಿಯನ್ನು ತಪ್ಪಿಸುವುದಕ್ಕಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳನ್ನು ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಸುರಕ್ಷಿತ ಕ್ರಮಗಳೊಂದಿಗೆ ಗ್ರಾಹಕರ ಮನೆ ಬಾಲಿಗೆ ಸೇವೆಗಳನ್ನು ನೀಡಲಾಗುತ್ತಿದೆ.

ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದ ಟಿವಿಎಸ್

ಟಿವಿಎಸ್ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಆನ್‌ಲೈನ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಂಕಷ್ಟಕ ಪರಿಸ್ಥಿತಿಯಲ್ಲಿ ಆರೋಗ್ಯಕರ ವ್ಯಾಪಾರ ವಹಿವಾಟು ಇದೀಗ ಒಂದು ಹೊಸ ಸವಾಲಾಗಿ ಪರಿಣಮಿಸಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದ ಟಿವಿಎಸ್

ಗ್ರಾಹಕರು ಕೂಡಾ ವೈರಸ್ ಭಯದಿಂದಾಗಿ ಹೊಸ ವಾಹನ ಖರೀದಿ ಮತ್ತು ಗ್ರಾಹಕರ ಸೇವೆಗಳಿಗಾಗಿ ಆನ್‌ಲೈನ್ ಪ್ಲ್ಯಾಟ್‌‌‌ಫಾರ್ಮ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಆನ್‌ಲೈನ್ ಮೂಲಕವೇ ಪತ್ರವ್ಯವಹಾರ ಕೈಗೊಳ್ಳುವ ಮೂಲಕ ಅಂತಿಮವಾಗಿ ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಲಾಗುತ್ತಿದೆ.

ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದ ಟಿವಿಎಸ್

ಗ್ರಾಹಕರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸುವಾಗಲು ವಾಹನಗಳಿಗೆ ನಂಜು ನಿರೋಧಕ ರಸಾಯನಿಕಗಳ ಸಿಂಪರಣೆ ಮಾಡಿದ ನಂತರವೇ ವಾಹನ ವಿತರಣೆ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದ್ದು, ಇದರಿಂದ ವಾಹನ ಮಾರಾಟ ಕಂಪನಿಗಳಿಗೆ ಮಾತ್ರವಲ್ಲ ಗ್ರಾಹಕರಿಗೂ ಅನುಕೂಲಕರವಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ದ್ವಿಚಕ್ರ ವಾಹನಗಳ ವಾರಂಟಿ ಅವಧಿಯನ್ನು ವಿಸ್ತರಣೆ ಮಾಡಿದ ಟಿವಿಎಸ್

ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ವಾಹನ ಖರೀದಿ ಪ್ರಕ್ರಿಯೆಯೂ ವೈರಸ್ ಭೀತಿ ನಡುವೆ ಉತ್ತಮ ಬೆಳವಣಿಯಾಗಿದ್ದು, ಹಲವು ವಾಹನ ಕಂಪನಿಗಳು ಪ್ರತ್ಯೇಕ ಆನ್‌ಲೈನ್ ಮಾರಾಟ ಮಳಿಗೆಗಳನ್ನು ತೆರೆದಿವೆ.

Most Read Articles

Kannada
English summary
TVS Extends Warranty And Service. Read in Kannada.
Story first published: Thursday, July 9, 2020, 16:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X