ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಇತ್ತೀಚಿಗೆ ಬಜಾಜ್ ಕಂಪನಿಯು ತನ್ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈಗ ಭಾರತದ ಮತ್ತೊಂದು ಜನಪ್ರಿಯ ದ್ವಿಚಕ್ರ ವಾಹನ ಕಂಪನಿಯಾದ ಟಿವಿ‍ಎಸ್ ಮೋಟಾರ್ಸ್ ಸಹ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಟಿವಿ‍ಎಸ್ ಕಂಪನಿಯು ಜನವರಿ 25ರಂದು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಆದ ಐಕ್ಯೂಬ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಟಿ‍ವಿ‍ಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಮುನ್ನ ಹಲವಾರು ಸಂಗತಿಗಳನ್ನು ತಿಳಿದುಕೊಳ್ಳಬೇಕಿದೆ. ಆ ಸಂಗತಿಗಳನ್ನು ಈ ಲೇಖನದಲ್ಲಿ ನೋಡೋಣ.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಬೆಲೆ

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.15 ಲಕ್ಷಗಳಾಗಿದೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.19 ಲಕ್ಷಗಳಾಗಿದೆ.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುವ ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.13 ಲಕ್ಷಗಳಾಗಿದೆ. ಬೆಲೆಗಳು ಹೆಚ್ಚು ಕಡಿಮೆ ಒಂದೇ ಆಗಿದ್ದರೂ, ಅಥೆರ್ ಸ್ಕೂಟರ್ ಹೆಚ್ಚು ಫೀಚರ್‍‍ಗಳನ್ನು ಹೊಂದಿದೆ.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಪರ್ಫಾಮೆನ್ಸ್

ಟಿವಿ‍‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 4.4 ವ್ಯಾಟ್‍‍ನ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗಿದೆ. ಈ ಮೋಟರ್ 140 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 4.2 ಸೆಕೆಂಡುಗಳಲ್ಲಿ 0-40 ಕಿ.ಮೀ ವೇಗವನ್ನು ಕ್ರಮಿಸುತ್ತದೆ ಎಂದು ಟಿವಿ‍ಎಸ್ ಕಂಪನಿ ಹೇಳಿದೆ.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಅಥೆರ್ 450 ಎಲೆಕ್ಟ್ರಿಕ್ ಸ್ಕೂಟರ್ 3.84 ಸೆಕೆಂಡುಗಳಲ್ಲಿ 0-40 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಸ್ಪೋರ್ಟ್ ಮೋಡ್‍‍ನಲ್ಲಿ 78 ಕಿ.ಮೀ ವೇಗದಲ್ಲಿ ಚಲಿಸಿದರೆ, ಇಕೋ ಮೋಡ್‍‍ನಲ್ಲಿ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ದೂರ ಹಾಗೂ ಚಾರ್ಜಿಂಗ್ ಬಗ್ಗೆ

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 2.25 ಕಿ.ವ್ಯಾ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಐಕ್ಯೂಬ್ 75 ಕಿ.ಮೀ ದೂರದವರೆಗೂ ಚಲಿಸುತ್ತದೆ ಎಂದು ಟಿವಿ‍ಎಸ್ ಕಂಪನಿಯು ಹೇಳಿದೆ.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಈ ಬ್ಯಾಟರಿಯನ್ನು ಚಾರ್ಜ್ ಮಾಡಲು 5 ಆಂಪಿಯರ್ ಚಾರ್ಜರ್‍ ನೀಡಲಾಗಿದೆ. ಈ ಚಾರ್ಜರ್‍ ಅನ್ನು ಕಂಪನಿಯು ಉಚಿತವಾಗಿ ಅಳವಡಿಸಲಿದೆ. ಚೇತಕ್ ಸ್ಕೂಟರಿನಂತೆ ಈ ಸ್ಕೂಟರ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 5 ಗಂಟೆಗಳು ಬೇಕಾಗುತ್ತವೆ.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಫೀಚರ್ಸ್ ಹಾಗೂ ಸ್ಪೆಸಿಫಿಕೇಷನ್

ಟಿವಿ‍ಎಸ್ ಐಕ್ಯೂಬ್ ಸ್ಕೂಟರ್‍‍ನಲ್ಲಿ ನೀಡಲಾಗುವ ಟಿ‍ಎಫ್‍‍ಟಿ ಸ್ಕ್ರೀನ್ ಅನ್ನು ಐಕ್ಯೂಬ್ ಆ್ಯಪ್ ಮೂಲಕ ಸ್ಮಾರ್ಟ್‍‍ಫೋನಿಗೆ ಕನೆಕ್ಟ್ ಮಾಡಬಹುದು. ಇದರಿಂದಾಗಿ ಜಿಯೊ ಫೆನ್ಸಿಂಗ್, ರಿಮೋಟ್ ಬ್ಯಾಟರಿ ಚಾರ್ಜ್ ಸ್ಟೇಟಸ್, ನ್ಯಾವಿಗೇಶನ್ ಅಸಿಸ್ಟ್ ಗಳನ್ನು ಬಳಸಬಹುದು.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಇದರ ಜೊತೆಗೆ ಲಾಸ್ಟ್ ಪಾರ್ಕ್ ಲೊಕೇಶನ್, ಇನ್‍‍ಕಮಿಂಗ್ ಕಾಲ್ ಅಲರ್ಟ್/ ಎಸ್‍ಎಂ‍ಎಸ್ ಅಲರ್ಟ್, ರೈಡ್ ಹಾಗೂ ರೇಂಜ್ ಬಗೆಗಿನ ಮಾಹಿತಿಯನ್ನು ಪಡೆಯಬಹುದು. ಮೊದಲ ಕೆಲವು ಗ್ರಾಹಕರಿಗೆ ಕನೆಕ್ಟಿವಿಟಿಯನ್ನು ಉಚಿತವಾಗಿ ನೀಡುವುದಾಗಿ ತಿಳಿಸಿರುವ ಟಿವಿ‍ಎಸ್ ಕಂಪನಿಯು ನಂತರದ ಗ್ರಾಹಕರು ಮಾಸಿಕವಾಗಿ ಪಾವತಿಸಬೇಕೆಂದು ತಿಳಿಸಿದೆ. ಈ ಸ್ಕೂಟರಿನಲ್ಲಿ ಪ್ರಿಲೋಡೆಡ್ ಅಡ್ಜಸ್ಟಬಲ್ ಶಾಕ್ ಅಬ್ಸರ್ವರ್‍‍ಗಳನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಟಿವಿ‍ಎಸ್ ಕಂಪನಿಯ ಎರಡನೇ ಎಲೆಕ್ಟ್ರಿಕ್ ಸ್ಕೂಟರ್

ಟಿವಿ‍ಎಸ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಸೆಗ್‍‍‍ಮೆಂಟಿನಲ್ಲಿ ಎರಡನೇ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸುತ್ತಿದೆ. ಸಾಕಷ್ಟು ಜನರಿಗೆ ಟಿವಿ‍ಎಸ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರಿನ ಬಗ್ಗೆ ಗೊತ್ತಿಲ್ಲ. ಟಿವಿ‍ಎಸ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆದ ಸ್ಕೂಟಿ ಜೀನ್ಸ್ ಎಲೆಕ್ಟ್ರಿಕ್ ಅನ್ನು 2008ರಲ್ಲಿ ಬಿಡುಗಡೆಗೊಳಿಸಿತ್ತು.

ಟಿವಿ‍ಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳಿವು

ಆ ಸ್ಕೂಟರ್ ಪ್ರತಿ ಚಾರ್ಜಿಗೆ 40 ಕಿ.ಮೀವರೆಗೂ ಚಲಿಸುತ್ತಿತ್ತು. ಆ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 40 ಕಿ.ಮೀಗಳಾಗಿತ್ತು. ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಕ್ಯೂಬ್ ಎಂಬ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರಿನ ಅಪ್‍‍ಡೇಟೆಡ್ ಆವೃತ್ತಿಯಾಗಿದೆ. ಕ್ಯೂಬ್ ಸ್ಕೂಟರ್ ಅನ್ನು 2012ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಅದರಲ್ಲಿ ಎಲೆಕ್ಟ್ರಿಕ್ ಮೋಟರ್ ಹಾಗೂ 100 ಸಿಸಿಯ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿತ್ತು.

Most Read Articles

Kannada
English summary
Things to know about TVS Electric Scooter. Read in Kannada.
Story first published: Tuesday, January 28, 2020, 15:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X