ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಟಿವಿಎಸ್ ಜೂಪಿಟರ್

ಟಿವಿಎಸ್ ಮೋಟಾರ್ ಕಂಪನಿಯು ಈಗಾಗಲೇ ತನ್ನ ಬಹುತೇಕ ದ್ವಿಚಕ್ರ ವಾಹನಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿದ್ದು, ಜೂಪಿಟರ್, ಎನ್‌ಟಾರ್ಕ್ 125 ಸ್ಕೂಟರ್‌ಗಳನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸಿದೆ.

ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಟಿವಿಎಸ್ ಜೂಪಿಟರ್

ಸ್ಕೂಟರ್ ಮಾದರಿಗಳಲ್ಲಿ ಹೆಚ್ಚು ಜನಪ್ರಿಯತೆಯಲ್ಲಿರುವ ಜೂಪಿಟರ್ ಆವೃತ್ತಿಯು ಈ ಹೊಸ ಎಂಜಿನ್ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಖರೀದಿಗೆ ಲಭ್ಯವಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಸಬಹುದಾಗಿದೆ. ಜೂಪಿಟರ್ ಸ್ಕೂಟರ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.61,449 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ.67,911 ಬೆಲೆ ಪಡೆದುಕೊಂಡಿದೆ.

ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಟಿವಿಎಸ್ ಜೂಪಿಟರ್

ಆರಂಭಿಕವಾಗಿ ಸ್ಟ್ಯಾಂಡರ್ಡ್ ತದನಂತರ ಜೆಡ್ಎಕ್ಸ್ ಮತ್ತು ಕ್ಲಾಸಿಕ್ ವೆರಿಯೆಂಟ್‌ಗಳನ್ನು ಹೊಂದಿರುವ ಜೂಪಿಟರ್ ಸ್ಕೂಟರ್‌ನಲ್ಲಿ ಹೊಸ ಎಂಜಿನ್‌ನಿಂದಾಗಿ ಮೈಲೇಜ್ ಪ್ರಮಾಣದಲ್ಲಿ ಶೇ.15ರಷ್ಟು ಹೆಚ್ಚಳವಾಗಿದೆ.

ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಟಿವಿಎಸ್ ಜೂಪಿಟರ್

ಹೊಸ ಎಂಜಿನ್ ಜೋಡಣೆ ನಂತರ ಸ್ಕೂಟರ್ ತೂಕದಲ್ಲಿ ತುಸು ಏರಿಕೆಯಾಗಿದ್ದು, ಹೊಸ ಸ್ಕೂಟರ್ ಮಾದರಿಯು ಸದ್ಯಕ್ಕೆ ವೆರಿಯೆಂಟ್‌ಗಳಿಗೆ ಅನುಗುಣವಾಗಿ 104ಕೆಜಿಯಿಂದ 107ಕೆಜಿ ತೂಕ ಪಡೆದುಕೊಂಡಿವೆ.

ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಟಿವಿಎಸ್ ಜೂಪಿಟರ್

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಈ ಬಾರಿ 21-ಲೀಟರ್ ಸಾಮಾರ್ಥ್ಯ ಅಂಡರ್ ಸೀಟ್ ಸ್ಟೋರೆಜ್ ಸ್ಪೆಸ್ ನೀಡಲಾಗಿದ್ದು, ಇದು ಹಳೆಯ ಸ್ಕೂಟರ್ ಮಾದರಿಗಿಂತಲೂ 5-ಲೀಟರ್ ಹೆಚ್ಚುವರಿ ಸ್ಥಳಾವಕಾಶ ಪಡೆದುಕೊಂಡಿದೆ. ಆದರೆ ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಫ್ರಂಟ್ ಡಿಸ್ಕ್ ನೀರಿಕ್ಷೆ ಮಾಡಲಾಗಿತ್ತಾದರೂ ಪ್ರತಿ ವೆರಿಯೆಂಟ್‌ನಲ್ಲೂ ಡ್ರಮ್ ಬ್ರೇಕ್ ಮಾದರಿಯೊಂದಿಗೆ ಬಿಡುಗಡೆಗೊಂಡಿದ್ದು, ಮಾಲಿನ್ಯ ತಗ್ಗಿಸಿ ಮೈಲೇಜ್ ಹೆಚ್ಚಿಸಲು ಬಳಕೆ ಮಾಡಲಾಗಿರುವ ಇಕೋಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವು ಪ್ರಮುಖ ಆಕರ್ಷಣೆಯಾಗಿದೆ.

ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಟಿವಿಎಸ್ ಜೂಪಿಟರ್

ಈ ಮೂಲಕ ಬಿಎಸ್ 6 ಎಂಜಿನ್ ಹೊಂದಿರುವ ಸ್ಕೂಟರ್‌ಗಳಲ್ಲಿ ಇಕೋಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನ ಹೊಂದಿದ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಜೂಪಿಟರ್ ಆವೃತ್ತಿಯು ಶೀಘ್ರದಲ್ಲೇ ಗ್ರಾಹಕರ ಕೈ ಸೇರಲಿವೆ.

ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಟಿವಿಎಸ್ ಜೂಪಿಟರ್

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಬಿಎಸ್-6 ವೈಶಿಷ್ಟ್ಯತೆಯ ಫ್ಯೂಲ್ ಇಂಜೆಕ್ಷಡ್ 109ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಜೂಪಿಟರ್ ಸ್ಕೂಟರ್ ಮಾದರಿಯು 7.3-ಬಿಎಚ್‌ಪಿ ಮತ್ತು 8.4-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಸ ಸ್ಕೂಟರ್ ಪರ್ಫಾಮೆನ್ಸ್ ತುಸು ಇಳಿಕೆ ಮಾಡಲಾಗಿದೆ.

ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಟಿವಿಎಸ್ ಜೂಪಿಟರ್

ಇನ್ನು ಹೊಸ ಸ್ಕೂಟರ್‌ನ ಮುಂಭಾಗದಲ್ಲಿ ಯುಎಸ್‌ಬಿ ಚಾರ್ಜರ್, ಮೊಬೈಲ್ ಇರಿಸಲು ಕ್ಯೂಬಿ ಸ್ಪೇಸ್ ಹಾಗೂ ಟಿಂಟೆಡ್ ವೈಸರ್‍‍ಗಳಿದ್ದು, ಈ ಹಿಂದಿನ ಬಣ್ಣಗಳ ಆಯ್ಕೆ ಜೊತೆಗೆ ಹೊಸದಾಗಿ ಇಂಡಿ ಬ್ಲೂ ಬಣ್ಣವನ್ನು ಆಯ್ಕೆ ಮಾಡಬಹುದಾಗಿದೆ.

ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಬಿಎಸ್-6 ಟಿವಿಎಸ್ ಜೂಪಿಟರ್

ಇದರಿಂದ ಪ್ರತಿಸ್ಪರ್ಧಿ ಸ್ಕೂಟರ್ ಮಾದರಿಗಳಾದ ಹೋಂಡಾ ಆಕ್ಟಿವಾ 6ಜಿ, ಸುಜುಕಿ ಆಕ್ಸೆಸ್ 125 ಮತ್ತು ಯಮಹಾ ರೇ ಜೆಡ್ಆರ್ ಸ್ಕೂಟರ್‌ಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದ್ದು, ಮೈಲೇಜ್ ಹೆಚ್ಚಳವಾಗಿರುವುದು ಗ್ರಾಹಕರಿಗೆ ಪ್ರಮುಖ ಆಕರ್ಷಣೆಯಾಗಲಿದೆ.

Most Read Articles

Kannada
English summary
TVS Jupiter BS6 Models Specifications Revealed. Read in Kannada.
Story first published: Friday, March 20, 2020, 21:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X