Just In
- 5 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 6 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 6 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫ್ರಂಟ್ ಡಿಸ್ಕ್ ಬ್ರೇಕ್ಗಳೊಂದಿಗೆ ಬಿಡುಗಡೆಯಾದ ಟಿವಿಎಸ್ ಮೋಟಾರ್ ಜೂಪಿಟರ್ ಝಡ್ಎಕ್ಸ್
ಟಿವಿಎಸ್ ಕಂಪನಿಯು ತನ್ನ ಜೂಪಿಟರ್ ಝಡ್ಎಕ್ಸ್ ಮಾದರಿಯನ್ನು ಫ್ರಂಟ್ ಡಿಸ್ಕ್ ಬ್ರೇಕ್ಗಳೊಂದಿಗೆ ಬಿಡುಗಡೆಗೊಳಿಸಿದೆ. ಹೊಸ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.69,052ಗಳಾಗಿದೆ. ಫ್ರಂಟ್ ಡಿಸ್ಕ್ ಬ್ರೇಕ್, ಝಡ್ಎಕ್ಸ್ ಮಾದರಿಗೆ ಮಾತ್ರ ಸೀಮಿತವಾಗಿದೆ.

ಇದರ ಜೊತೆಗೆ ಟಿವಿಎಸ್ ಜೂಪಿಟರ್ ಝಡ್ಎಕ್ಸ್ ಸ್ಕೂಟರಿನಲ್ಲಿ ಹೊಸ ಎಲೆಕ್ಟ್ರಿಕ್ ಸ್ಟಾರ್ಟ್ ಐ-ಟಚ್ ಸ್ಟಾರ್ಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಸಿಸ್ಟಂ ವೇಗವಾಗಿ ಹಾಗೂ ನಿಶಬ್ದವಾಗಿ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡುತ್ತದೆ. ಹೊಸ ಡಿಸ್ಕ್ ಮಾದರಿಯ ಬೆಲೆ ಮಾರುಕಟ್ಟೆಯಲ್ಲಿರುವ ಡ್ರಮ್ ಮಾದರಿಗಿಂತ ರೂ.3,950ಗಳಷ್ಟು ಹೆಚ್ಚಾಗಿದೆ. ಬಿಎಸ್ 6 ಸ್ಕೂಟರಿನ ಬೆಲೆಯನ್ನು ಬಿಎಸ್ 4 ಮಾದರಿಗಿಂತ ರೂ.9062 ಗಳಷ್ಟು ಹೆಚ್ಚಿಸಲಾಗಿದೆ.

ಟಿವಿಎಸ್ ಜೂಪಿಟರ್ ಝಡ್ಎಕ್ಸ್ ಮಾದರಿಯು ಇಗ್ನಿಷನ್, ಸ್ಟೀಯರಿಂಗ್ ಲಾಕ್, ಸೀಟ್ ಲಾಕ್ ಹಾಗೂ ಫ್ಯೂಯಲ್ ಟ್ಯಾಂಕ್ ಕ್ಯಾಪ್ ಓಪನರ್ ಸೇರಿದಂತೆ ಆಲ್-ಇನ್-ಲಾಕ್ ಫಂಕ್ಷನ್ ಗಳನ್ನು ಹೊಂದಿದೆ. ಇದರಿಂದಾಗಿ ಎಲ್ಲಾ ಕೆಲಸಗಳನ್ನು ಒಂದು ಬಟನ್ ನಿಂದ ನಿರ್ವಹಿಸಬಹುದು.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಟಿವಿಎಸ್ ಜೂಪಿಟರ್ ಝಡ್ಎಕ್ಸ್ ಸ್ಕೂಟರ್ ಎಕೋಸ್ಟ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಸಿಸ್ಟಂ 15%ನಷ್ಟು ಹೆಚ್ಚು ಮೈಲೇಜ್ ನೀಡುತ್ತದೆ. ಈ ಸ್ಕೂಟರ್ ಅನ್ನು ಮ್ಯಾಟ್ ಸ್ಟಾರ್ಲೈಟ್ ಬ್ಲೂ, ಸ್ಟಾರ್ಲೈಟ್ ಬ್ಲೂ ಹಾಗೂ ರಾಯಲ್ ವೈನ್ ಎಂಬ ಮೂರು ಬಣ್ಣಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಟಿವಿಎಸ್ ಜೂಪಿಟರ್ ಝಡ್ಎಕ್ಸ್ ಸ್ಕೂಟರಿನಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಸ್ಕೂಟರಿನಲ್ಲಿ 109 ಸಿಸಿಯ ಸಿಂಗಲ್ ಸಿಲಿಂಡರ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.4 ಬಿಹೆಚ್ಪಿ ಪವರ್ ಹಾಗೂ 8.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಟಿವಿಎಸ್ ಜೂಪಿಟರ್ ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆಂಷನ್ ಹಾಗೂ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇದರ ಜೊತೆಗೆ ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟೇಲ್ ಲೈಟ್, ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಯುಎಸ್ ಬಿ ಚಾರ್ಜರ್ ಜೊತೆಗೆ 2-ಲೀಟರ್ ಗ್ಲೋವ್ಬಾಕ್ಸ್ ಹಾಗೂ ಕ್ಲಾಸಿಕ್ ಮಾದರಿಯಲ್ಲಿ ವಿಂಡ್ ಷೀಲ್ಡ್ ಅನ್ನು ಹೊಂದಿದೆ.

ಟಿವಿಎಸ್ ಕಂಪನಿಯು ಇತ್ತೀಚಿಗೆ ತನ್ನ ಬಿಎಸ್ 6 ಸ್ಕೂಟರಿನ ಬೆಲೆಯನ್ನು ಹೆಚ್ಚಿಸಿತ್ತು. ಟಿವಿಎಸ್ ಜೂಪಿಟರ್ 110 ಬಿಎಸ್ 6 ಸ್ಕೂಟರಿನ ಬೆಲೆಯನ್ನು ರೂ.1,040ಗಳಷ್ಟು ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಂತರ ಟಿವಿಎಸ್ ಜೂಪಿಟರ್ ಸ್ಕೂಟರಿನ ಬೆಲೆ ರೂ.63,102ಗಳಾಗಿದೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಟಿವಿಎಸ್ ಜೂಪಿಟರ್ ಕ್ಲಾಸಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.69,602ಗಳಾಗಿದೆ. ಟಿವಿಎಸ್ ಮೋಟಾರ್ ಕಂಪನಿಯು ಕಳೆದ ತಿಂಗಳು ತನ್ನ ಜೂಪಿಟರ್ ಸರಣಿಯ ಸ್ಕೂಟರ್ ಗಳ ಬೆಲೆಯನ್ನು ರೂ.651ಗಳಷ್ಟು ಹೆಚ್ಚಿಸಿತ್ತು.