Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೈಕ್ ಖರೀದಿಯನ್ನು ಇನ್ನಷ್ಟು ಸುಲಭವಾಗಿಸಲು ವರ್ಚುವಲ್ ಶೋರೂಂ ತೆರೆದ ಟಿವಿಎಸ್ ಮೋಟಾರ್
ಟಿವಿಎಸ್ ಮೋಟಾರ್ ಕಂಪನಿಯು ಹೊಸ ವಾಹನಗಳ ಖರೀದಿಯನ್ನು ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ವರ್ಚುವಲ್ ಶೋರೂಂಗೆ ಚಾಲನೆ ನೀಡಿದ್ದು, ಟಿವಿಎಸ್ ವರ್ಚುವಲ್ ಶೋರೂಂ ಅನ್ನು ಆರೈವ್(ARIVE) ಎಂದು ಕರೆಯಲಾಗಿದೆ.

ಹೊಸ ವಾಹನಗಳ ಖರೀದಿದಾರರು ಶೋರೂಂಗಳಿಗೆ ಭೇಟಿ ನೀಡದೆ ನಿಮ್ಮ ಇಷ್ಟದ ಮಾದರಿಯನ್ನು ಆನ್ಲೈನ್ ಮೂಲಕವೇ ಶೋರೂಂ ಮಾದರಿಯಲ್ಲೇ ವಿಕ್ಷಣೆ ಮಾಡುವ ಅವಕಾಶವನ್ನು ವರ್ಚುವಲ್ ಶೋರೂಂನಲ್ಲಿ ಲಭ್ಯವಿದ್ದು, ಈಗಾಗಲೇ ಹಲವಾರು ಆಟೋ ಕಂಪನಿಗಳು ಹೊಸ ಪ್ರಯೋಗದಲ್ಲಿ ಯಶಸ್ವಿಯಾಗಿವೆ. ಇದೀಗ ಟಿವಿಎಸ್ ಮೋಟಾರ್ ಕಂಪನಿಯು ಕೂಡಾ ವಿವಿಧ ಬೈಕ್ ಮಾದರಿಗಾಗಿ ಅರೈವ್ ವರ್ಚುವಲ್ ಶೋರೂಂ ತೆರೆದಿದ್ದು, ಆರಂಭಿಕವಾಗಿ ಹೊಸ ಮೊಬೈಲ್ ಅಪ್ಲಿಕೇಷನ್ನಲ್ಲಿ ಅಪಾಚೆ ಆರ್ಟಿಆರ್ 200 4ವಿ ಮತ್ತು ಅಪಾಚೆ ಆರ್ಆರ್310 ಮಾದರಿಗಳ ಮಾದರಿಯನ್ನು ನೀಡಲಾಗಿದೆ.

ಆರೈವ್ ವರ್ಚುವಲ್ ಶೋರೂಂನಲ್ಲಿ ಗ್ರಾಹಕರು ತಮ್ಮ ಇಷ್ಟದ ವಾಹನಗಳ ಪ್ರತಿ ಇಂಚಿಂಚು ಮಾಹಿತಿಗಳನ್ನು ಪರಿಶೀಲನೆ ಮಾಡಬಹುದಾಗಿದ್ದು, ಶೋರೂಂಗಳಿಗೆ ಭೇಟಿ ವಾಹನಗಳನ್ನು ವಿಕ್ಷಣೆ ಮಾಡಿದ್ದಕ್ಕಿಂತಲೂ ಉತ್ತಮ ಅನುಭವ ವರ್ಚುವಲ್ ಶೋರೂಂನಲ್ಲಿ ಪಡೆಯಬಹುದು.

ಹೊಸ ಬೈಕ್ಗಳ ಬಿಡಿಭಾಗಗಳ ಸಂಪೂರ್ಣ ಮಾಹಿತಿಗಾಗಿ ಆರೈವ್ ವರ್ಚುವಲ್ ಶೋರೂಂನಲ್ಲಿ 360 ಡಿಗ್ರಿ ಇಮೆಜಿಂಗ್ ಮೂಲಕ ಸ್ಕ್ಯಾನ್ ಮತ್ತು 3ಡಿ ಮೋಡ್ನಲ್ಲಿ ವೀಕ್ಷಣೆ ಮಾಡಬಹುದಾಗಿದ್ದು, ಗೊಂದಲವಿರುವ ಎಲ್ಲಾ ಮಾಹಿತಿಗಳನ್ನು ಅತಿ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ವಾಹನ ಖರೀದಿಗೂ ಮುನ್ನ ಶೋರೂಂಗಳಲ್ಲಿ ಭೇಟಿ ನೀಡುವ ಸಂದರ್ಭದಲ್ಲಿ ಕೆಲವು ಬಾರಿ ನಿಮ್ಮ ಅನುಭವಕ್ಕೆ ಕೆಲವು ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳಲು ಆಗದಿರಬಹುದು. ಆದರೆ ವರ್ಚುವಲ್ ಶೋರೂಂ ಭೇಟಿಯೂ ಗ್ರಾಹಕರಿಗೆ ಉತ್ತಮ ಮಾಹಿತಿ ಒದಗಿಸಲಿದ್ದು, ಪ್ರತಿ ವೆರಿಯೆಂಟ್, ಬಣ್ಣಗಳ ಆಯ್ಕೆ, ಸ್ಟ್ಯಾಂಡರ್ಡ್ ಫೀಚರ್ಸ್ಗಳ ಮಾಹಿತಿಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.

ಟಿವಿಎಸ್ ಕೂಡಾ ಇದೇ ಉದ್ದೇಶದಿಂದ ಗ್ರಾಹಕರಿಗೆ ವರ್ಚುವಲ್ ಶೋರೂಂ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಆರೈವ್ ಪ್ಲ್ಯಾಟ್ಫಾರ್ಮ್ ತೆರೆದಿದ್ದು, ಆರಂಭಿಕವಾಗಿ ಅಪಾಚೆ ಆರ್ಟಿಆರ್ 200 4ವಿ ಮತ್ತು ಅಪಾಚೆ ಆರ್ಆರ್310 ಮಾದರಿಗಳ ಮಾದರಿ ಮಾಹಿತಿಗಳನ್ನು ಮಾತ್ರ ಪ್ರಕಟಿಸಲಾಗಿದೆ.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಶೀಘ್ರದಲ್ಲೇ ಇನ್ನುಳಿದ ಬೈಕ್ ಮಾದರಿಗಳ ಮಾಹಿತಿಯನ್ನು ಸಹ ಪ್ರಕಟ ಮಾಡುವುದಾಗಿ ಹೇಳಿಕೊಂಡಿರುವ ಟಿವಿಎಸ್ ಕಂಪನಿಯು ವರ್ಚುವಲ್ ಶೋರೂಂ ಮೂಲಕ ವಾಹನಗಳ ಮಾಹಿತಿ ಜೊತೆಗೆ ಸ್ಥಳೀಯ ಮಾರಾಟಗಾರರ ಮಾಹಿತಿಯನ್ನು ಸಹ ನೀಡಿದೆ.

ವರ್ಚುವಲ್ ಶೋರೂಂನಲ್ಲಿ ಬೈಕ್ಗಳನ್ನು ವೀಕ್ಷಣೆ ಮಾಡುವ ಗ್ರಾಹಕರು ಆ ವಾಹನವು ಇಷ್ಟವಾದಲ್ಲಿ ಮುಂದಿನ ಹಂತವಾಗಿ ಟೆಸ್ಟ್ ರೈಡ್ಗಾಗಿ ಆ್ಯಪ್ ಮೂಲಕವೇ ಬುಕ್ ಮಾಡಬಹುದಾಗಿದ್ದು, ವಾಹನ ಖರೀದಿಯನ್ನು ಹೊಸ ಪ್ಲ್ಯಾಟ್ಫಾರ್ಮ್ ಮತ್ತಷ್ಟು ಸುಲಭಗೊಳಿಸಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಆರೈವ್ ಮೊಬೈಲ್ ಅಪ್ಲಿಕೇಷನ್ ಅನ್ನು ಗ್ರಾಹಕರು ಅಂಡ್ರಾಯಿಡ್ ಮತ್ತು ಐಒಎಸ್ ಎರಡು ಮಾದರಿಗಳಲ್ಲೂ ಡೌನ್ಲೋಡ್ ಮಾಡಬಹುದಾಗಿದ್ದು, ಶೀಘ್ರದಲ್ಲೇ ಇನ್ನುಳಿದ ಬೈಕ್ ಮಾದರಿಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.