Just In
- 25 min ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 1 hr ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
- 13 hrs ago
ಮಧ್ಯಮ ಗಾತ್ರದ ಕಾರುಗಳಿಗೆ ಹೊಸ ಡೀಸೆಲ್ ಎಂಜಿನ್ ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
Don't Miss!
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- News
ಬೆಂಗಳೂರಿನಲ್ಲಿ 24 ತಾಸಿನಲ್ಲಿ ಮೂರು ಶೂಟೌಟ್!
- Sports
ಥಾಯ್ಲೆಂಡ್ ಓಪನ್ 2021: ಎರಡನೇ ಸುತ್ತಿಗೆ ಪ್ರವೇಶಿಸಿದ ಪಿವಿ ಸಿಂಧು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟಿವಿಎಸ್ ಯಂಗ್ ಮೀಡಿಯಾ ರೇಸರ್: ಫೈನಲ್ ಹಂತಕ್ಕೆ ಲಗ್ಗೆಯಿಟ್ಟ ಡ್ರೈವ್ಸ್ಪಾಕ್ ಟೀಂ..
ರೇಸಿಂಗ್ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಟಿವಿಎಸ್ ಮೋಟಾರ್ ಕಂಪನಿಯು ಮಾಧ್ಯಮ ಪ್ರತಿನಿಧಿಗಾಗಿಯೇ ಯಂಗ್ ಮೀಡಿಯಾ ರೇಸರ್ ಸ್ಪರ್ಧೆ ಕೈಗೊಳ್ಳುತ್ತಿದ್ದು, ಇತ್ತೀಚೆಗೆ ಚೆನ್ನೈನಲ್ಲಿರುವ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್ನಲ್ಲಿ 4ನೇ ಆವೃತ್ತಿಯ ಯಂಗ್ ಮೀಡಿಯಾ ರೇಸರ್ ಆಯೋಜಿಸಿತ್ತು.

2017ರಿಂದ ಯುವ ಪತ್ರಕರ್ತರಿಗಾಗಿಯೇ ವಿಶೇಷವಾಗಿ ರೇಸಿಂಗ್ ಸ್ಪರ್ಧೆ ಏರ್ಪಡಿಸುತ್ತಿರುವ ಟಿವಿಎಸ್ ಮೋಟಾರ್ ಕಂಪನಿಯು ಇದೀಗ ನಾಲ್ಕನೇ ಆವೃತ್ತಿಗೆ ಚಾಲನೆ ನೀಡಿದೆ. ನಾಲ್ಕನೇ ಆವೃತ್ತಿಯ ಯಂಗ್ ಮೀಡಿಯಾ ರೇಸರ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಡ್ರೈವ್ಸಾರ್ಕ್ ತಂಡದ ರಿವ್ಯೂ ಎಡಿಟರ್ ಪ್ರೋಮಿತ್ ಘೋಷ್ ವಿವಿಧ ಮಾಧ್ಯಮ ಸಂಸ್ಥೆಗಳ ಹದಿನಾಲ್ಕು ಜನ ಪತ್ರಕರ್ತರಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.

ಆಟೋಮೊಬೈಲ್ ವಿಭಾಗದ ಯುವ ಪತ್ರಕರ್ತರಲ್ಲಿನ ರೇಸಿಂಗ್ ಕೌಶಲ್ಯವನ್ನು ಗುರುತಿಸಲು ಯಂಗ್ ಮೀಡಿಯಾ ರೇಸರ್ ಸ್ಪರ್ಧೆ ಆಯೋಜಿಸುತ್ತಿರುವ ಟಿವಿಎಸ್ ಮೋಟಾರ್ ಕಂಪನಿಯು ದೇಶದ ಪ್ರಮುಖ ಮಾಧ್ಯಮ ಸಂಸ್ಥೆಗಳನ್ನು ಆಹ್ವಾನಿಸುತ್ತದೆ.

ಕಳೆದ ಮೂರು ಆವೃತ್ತಿಯಲ್ಲೂ ಅತ್ಯುತ್ತಮ ಪ್ರದರ್ಶನ ತೋರಿರುವ ಡ್ರೈವ್ಸ್ಪಾರ್ಕ್ ತಂಡವು ಒಂದು ಬಾರಿ ವಿಜಯಶಾಲಿಯಾಗಿತ್ತು. ಇದೀಗ ನಾಲ್ಕನೇ ಆವೃತ್ತಿಯಲ್ಲೂ ಭರವಸೆ ಮೂಡಿಸಿರುವ ರಿವ್ಯೂ ಎಡಿಟರ್ ಪ್ರೋಮಿತ್ ಘೋಷ್ ಕ್ವಾಲಿಪೈ ಹಂತದಲ್ಲಿ ಐದನೇ ಸ್ಥಾನದೊಂದಿಗೆ ಫೈನಲ್ ರೇಸ್ಗೆ ಪ್ರವೇಶ ಪಡೆದಿದ್ದಾರೆ.

ಅಹರ್ತಾ ಸುತ್ತಿನಲ್ಲಿ 2.29.31 ಲ್ಯಾಪ್ಸ್ನೊಂದಿಗೆ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ಪ್ರೋಮಿತ್ ಘೋಷ್ ಮುಂದಿನ ತಿಂಗಳು ನಡೆಯಲಿರುವ ಫೈನಲ್ ಹಂತದಲ್ಲಿ ಯಂಗ್ ರೇಸರ್ ಪ್ರಶಸ್ತಿಗಾಗಿ ಸೆಣಿಸಲಿದ್ದು, ರೇಸಿಂಗ್ ಟ್ರ್ಯಾಕ್ನಲ್ಲಿ ವೇಗದ ಬೈಕ್ ಸವಾರಿಗಿಂತಲೂ ತಿರುವುಗಳಲ್ಲಿ ಬೈಕ್ ಚಾಲನಾ ಕೌಶಲ್ಯವೇ ಗೆಲುವಿನ ಪ್ರಮುಖ ಅಂಶವಾಗಿರುತ್ತದೆ.

ರೈಸ್ ಟ್ರ್ಯಾಕ್ಗಳಿಗಾಗಿಯೇ ಪ್ರತ್ಯೇಕ ಬೈಕ್ ಮಾದರಿಗಳನ್ನು ಹೊಂದಿರುವ ಟಿವಿಎಸ್ ಮೋಟಾರ್ ಕಂಪನಿಯು ಯಂಗ್ ಮೀಡಿಯಾ ರೇಸರ್ ಸ್ಪರ್ಧೆಗಾಗಿ ರೇಸಿಂಗ್ ತಂತ್ರಜ್ಞಾನ ಹೊಂದಿರುವ ಅಪಾಚೆ ಆರ್ಟಿಆರ್ 200 4ವಿ ಬಳಕೆ ಮಾಡುತ್ತಿದ್ದು, ಸಾಮಾನ್ಯ ಅಪಾಚೆ ಆರ್ಟಿಆರ್ 200 4ವಿ ಬೈಕ್ ಮಾದರಿಗಿಂತಲೂ ರೇಸಿಂಗ್ ಆವೃತ್ತಿಯು ಸಾಕಷ್ಟು ವಿಭಿನ್ನತೆಯನ್ನು ಹೊಂದಿದೆ.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಟ್ರ್ಯಾಕ್ಗಳಲ್ಲಿ ಬಳಕೆಗೆ ಪೂರಕವಾದ ಅಂಶಗಳನ್ನು ಹೊಂದಿರುವ ರೇಸಿಂಗ್ ಸ್ಪೆಕ್ ಅಪಾಚೆ ಆರ್ಟಿಆರ್ 200 4ವಿ ಬೈಕ್ ಮಾದರಿಯು ಸಾಕಷ್ಟು ಹಗುರವಾಗಿದ್ದು, ಟ್ರ್ಯಾಕ್ ತಿರುವುಗಳಲ್ಲಿನ ಕೌಶಲ್ಯ ಪ್ರದರ್ಶನಕ್ಕೆ ಪೂರಕವಾದ ಅಂಶಗಳನ್ನು ಪಡೆದುಕೊಂಡಿದೆ.

ರೇಸ್ ಟ್ರ್ಯಾಕ್ಗಳಲ್ಲಿನ ಪ್ರತಿ ತಿರುವುಗಳಲ್ಲೂ ಎಚ್ಚರಿಕೆ ವಹಿಸಬೇಕಾದ ರೈಡರ್ಗಳು ವೇಗಕ್ಕೆ ತಕ್ಕಂತೆ ದೇಹ ಸ್ಥಿತಿ ಬದಲಿಸುವುದು ಮತ್ತು ರೇಸ್ ಟ್ರ್ಯಾಕ್ಗಳ ಲೈನ್ಗಳ ಮೇಲೆ ನಿಖರವಾದ ದೃಷ್ಠಿ ಹರಿಸಬೇಕು. ಇಲ್ಲವಾದಲ್ಲಿ ಬೈಕ್ ಸ್ಥಿರತೆ ತಪ್ಪುವುದರ ಜೊತೆಗೆ ಅಪಾಯ ತಪ್ಪಿದ್ದಲ್ಲ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಈ ಎಲ್ಲಾ ಅಂಶಗಳ ಮೇಲೆ ನಿಖರತೆ ಸಾಧಿಸುವರನ್ನು ಗುರುತಿಸಲೆಂದೆ ಆಟೋಮೊಬೈಲ್ ಸುದ್ದಿ ವಿಭಾಗದ ಪತ್ರಕರ್ತರಿಗಾಗಿ ವಿಶೇಷ ರೇಸ್ ಆಯೋಜಿಸುತ್ತಿರುವ ಟಿವಿಎಸ್ ಮೋಟಾರ್ ಕಂಪನಿಯು ಇದೀಗ ನಾಲ್ಕನೇ ಆವೃತ್ತಿಯನ್ನು ಆಯೋಜಿಸಿದ್ದು, ನಾಲ್ಕನೇ ಆವೃತ್ತಿಯ ಅಂತಿಮ ಹಂತದ ಸ್ಪರ್ಧೆಯನ್ನು ಮುಂದಿನ ತಿಂಗಳು ಡಿಸೆಂಬರ್ ಮಧ್ಯಂತರದಲ್ಲಿ ಕೈಗೊಳ್ಳಲು ನಿರ್ಧರಿಸಿದೆ.