Just In
- 4 hrs ago
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- 5 hrs ago
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- 5 hrs ago
ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಟ್ಟ ಮೇಡ್ ಇನ್ ಇಂಡಿಯಾ ಹೋಂಡಾ ಹೈನೆಸ್ ಸಿಬಿ 350
- 6 hrs ago
ಎಂಟೇ ನಿಮಿಷಗಳಲ್ಲಿ ರಸ್ತೆ ಗುಂಡಿಗಳನ್ನು ಸರಿ ಪಡಿಸಲಿದೆ ಜೆಸಿಬಿಯ ಈ ಹೊಸ ಯಂತ್ರ
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಟಿವಿಎಸ್ ಫಿಯರೊ 125 ಕಮ್ಯುಟರ್ ಬೈಕ್
ಟಿವಿಎಸ್ ಮೋಟಾರ್ ಕಂಪಿಯು ದೇಶಿಯ ಮಾರುಕಟ್ಟೆಯಲ್ಲಿ 125 ಸಿಸಿ ಎಂಜಿನ್ ಸಾಮರ್ಥ್ಯ ಬೈಕ್ ಮಾದರಿಯೊಂದನ್ನು ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಬೈಕ್ ಮಾದರಿಯ ಬಿಡುಗಡೆಗೂ ಮುನ್ನ ಬೈಕ್ ತಾಂತ್ರಿಕ ಅಂಶಗಳ ಕುರಿತಾಗಿ ಸಾರಿಗೆ ಇಲಾಖೆಯಲ್ಲಿ ಹಕ್ಕುಸ್ವಾಮ್ಯ ದಾಖಲಿಸಿದೆ.

ಕೇಂದ್ರ ಸಾರಿಗೆ ಇಲಾಖೆಯಲ್ಲಿ ದಾಖಲಿಸಲಾಗಿರುವ ಪೇಟೆಂಟ್ ಮಾಹಿತಿಯ ಪತ್ರದಲ್ಲಿ ಹೊಸ ಬೈಕ್ ಮಾದರಿಯು ಕಮ್ಯುಟರ್ ವಿಭಾಗದಲ್ಲಿ ಬಿಡುಗಡೆಯಾಗಲಿದ್ದು, ಈ ಹಿಂದೆ ಭಾರತೀಯ ರಸ್ತೆಗಳಿಗಳಲ್ಲಿ ಜನಪ್ರಿಯವಾಗಿ ಕಣ್ಮರೆಯಾಗಿರುವ ಫಿಯರೊ ಹೆಸರಿನೊಂದಿಗೆ ಮರಳಿ ಮಾರುಕಟ್ಟೆ ಪ್ರವೇಶಿಸುತ್ತಿದೆ. ಟು ಸ್ಟ್ರೋಕ್ ಎಂಜಿನ್ ಕಾಲಘಟ್ಟದಲ್ಲಿ ಜನಪ್ರಿಯವಾಗಿದ್ದ ಫಿಯರೊ ಬೈಕ್ ಮಾದರಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗಳೊಂದಿಗೆ ಮರಳಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

1980ರ ದಶಕದ ಆರಂಭಿಕ ಕಾಲಘಟ್ಟದಲ್ಲಿ ಸುಜುಕಿ ಮೋಟಾರ್ ಕಾರ್ಪೋರೇಷನ್ ಸಹಭಾಗಿತ್ವದಲ್ಲಿ ಎರಡು ಸೀಟುಗಳ ಮೊಪೆಡ್ ವಾಹನವನ್ನು ಅಭಿವೃದ್ದಿಗೊಳಿಸುತ್ತಿದ್ದ ಟಿವಿಎಸ್ ಈಗ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಕಂಪನಿಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

ಸುಜುಕಿ ಜೊತೆಗೂಡಿ 1980ರಿಂದ 2001ರ ನಡುವಿನ ಅವಧಿಯಲ್ಲಿ ಸಮುರಾಯ್, ಶೊಗನ್ ಮತ್ತು ಫಿಯರೊ ಮಾದರಿಗಳನ್ನು ಬಿಡುಗಡೆ ಮಾಡಿದ್ದ ಟಿವಿಎಸ್ ಕಂಪನಿಯು 2001ರಲ್ಲಿ ಸುಜುಕಿ ಜೊತೆಗಿನ ಬಾಂಧವ್ಯವನ್ನು ಕಡಿದುಕೊಂಡು ಟಿವಿಎಸ್ ಮೋಟಾರ್ ಹೆಸರಿನೊಂದಿಗೆ ಸ್ವತಂತ್ರವಾಗಿ ದ್ವಿಚಕ್ರ ವಾಹನ ಉತ್ಪನ್ನಗಳ ಉತ್ಪಾದನೆಯನ್ನು ಆರಂಭಿಸಿತು.

ಸ್ವತಂತ್ರವಾಗಿ ಬೈಕ್ ಉತ್ಪಾದನೆಯನ್ನು ಆರಂಭಿಸಿದ ನಂತರ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿರುವ ಟಿವಿಎಸ್ ಮೋಟಾರ್ ಕಂಪನಿಯು ಮೊಪೆಡ್‌ನಿಂದ ರೇಸಿಂಗ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಆದರೆ 125 ಸಿಸಿ ವಿಭಾಗದಲ್ಲಿನ ಬೇಡಿಕೆಯನ್ನು ಪೂರೈಸಲು ಯಾವುದೇ ಬೈಕ್ ಮಾದರಿಗಳನ್ನು ಹೊಂದಿರದ ಟಿವಿಎಸ್ ಕಂಪನಿಯು ಇದೀಗ ಹೊಸ ಕಮ್ಯುಟರ್ ಬೈಕ್ ಮಾದರಿಯೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಟಿವಿಎಸ್ ಕಂಪನಿಯು ಸದ್ಯ 87 ಸಿಸಿ ಸಾಮರ್ಥ್ಯದ ಸ್ಕೂಟಿ ಪೆಪ್ ಪ್ಲಸ್‌ನಿಂದ 312ಸಿಸಿ ಸಾಮರ್ಥ್ಯದ ಅಪಾಚೆ ಆರ್‌ಆರ್ 310 ಬೈಕ್ ಮಾರಾಟ ಹೊಂದಿದ್ದರೂ 125 ಸಿಸಿ ಮಾದರಿಯ ಯಾವುದೇ ಬೈಕ್ ಮಾರಾಟ ಹೊಂದಿಲ್ಲ.
MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಕಮ್ಯುಟರ್ ಬೈಕ್ ಮಾರಾಟದಲ್ಲಿ ಸ್ಪೋರ್ಟ್, ಸ್ಟಾರ್ ಸಿಟಿ ಪ್ಲಸ್, ರೆಡಿಯಾನ್ ಬೈಕ್‌ಗಳು 110 ಸಿಸಿ ಸಾಮರ್ಥ್ಯ ಹೊಂದಿದ್ದು, 125 ಸಿಸಿ ಸಾಮರ್ಥ್ಯ ಬೈಕ್ ಮಾರಾಟದಲ್ಲಿ ಸದ್ಯ ಹೀರೋ ನಿರ್ಮಾಣದ ಗ್ಲಾಮರ್ 125 ಮತ್ತು ಹೋಂಡಾ ನಿರ್ಮಾಣದ ಎಸ್‌ಪಿ 125 ಬೈಕ್‌ಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿವೆ.

ಈ ಹಿನ್ನಲೆ ಟು ಸ್ಟೋಕ್ ಕಾಲಘಟ್ಟದಲ್ಲಿದ್ದ 150 ಸಿಸಿ ಸಾಮರ್ಥ್ಯದ ಫಿಯೊರೊ ಬೈಕ್ ಮಾದರಿಯ ವಿನ್ಯಾಸ ಮತ್ತು ಅದೇ ಹೆಸರಿನಲ್ಲಿ 125 ಸಿಸಿ ಸಾಮರ್ಥ್ಯ ಬೈಕ್ ಬಿಡುಗಡೆ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಹೊಸ ಬೈಕ್ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯು ಆರಂಭವಾಗಲಿದೆ.
MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಟಿವಿಎಸ್ ಬಿಡುಗಡೆ ಮಾಡಲಿರುವ ಹೊಸ ಕಮ್ಯುಟರ್ ಬೈಕ್ ಮಾದರಿಯು ಮುಂಬರುವ 2021ರ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಶೀಘ್ರದಲ್ಲೇ ಹೊಸ ಬೈಕಿನ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.