Just In
- 24 min ago
ಪೊಲೊ ಹ್ಯಾಚ್ಬ್ಯಾಕ್ ಮತ್ತು ವೆಂಟೊ ಸೆಡಾನ್ ಕಾರುಗಳ ಖರೀದಿ ಮೇಲೆ ಹೊಸ ವರ್ಷದ ಆಫರ್
- 1 hr ago
ದಿಢೀರನೆ ಕೈಕೊಟ್ಟ ಬ್ರೇಕ್, 3 ಕಿ.ಮೀ ರಿವರ್ಸ್ ಗೇರಿನಲ್ಲಿ ಸಾಗಿದ ಟ್ರಕ್ ಚಾಲಕ
- 1 hr ago
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
- 2 hrs ago
ಭಾರತದಲ್ಲಿ ಅತಿದೊಡ್ಡ ಮಲ್ಟಿ ಬ್ರಾಂಡ್ ಕಾರ್ ಸರ್ವಿಸ್ ಸೆಂಟರ್ ತೆರೆದ ಬಾಷ್
Don't Miss!
- News
ಚುನಾವಣೆಗೂ ಮುನ್ನ ಅಮಿತ್ ಶಾ ಜೊತೆ ಇಪಿಎಸ್ ಮಹತ್ವದ ಚರ್ಚೆ
- Sports
ಭಾರತ vs ಆಸ್ಟ್ರೇಲಿಯಾ: ಧೋನಿ ದಾಖಲೆ ಮುರಿದು 1000 ಟೆಸ್ಟ್ ರನ್ ಗಳಿಸಿದ ರಿಷಭ್ ಪಂತ್
- Finance
ಕಾರು ಖರೀದಿಗೆ ಅತ್ಯಂತ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವ ಬ್ಯಾಂಕ್ ಗಳಿವು
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಕ್ಟೋಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾಯ್ತು ಟಿವಿಎಸ್ ಅಪಾಚೆ ಆರ್ಟಿಆರ್ ಬೈಕುಗಳು
ವರ್ಷಾಂತ್ಯ ವಾಗುವುದಕ್ಕೆ ಹತ್ತಿರವಾಗುತ್ತಿದ್ದಂತೆ ಭಾರತೀಯ ಮಾರುಕಟ್ಟೆಯಲ್ಲಿ ವಾಹನ ಮಾರಾಟದಲ್ಲಿ ಗಮನಾರ್ಹ ಚೇತರಿಕೆ ಕಾಣುತ್ತಿದೆ. ಟಿವಿಎಸ್ ಮೋಟಾರ್ ಕಂಪನಿಯ ದ್ವಿಚಕ್ರ ಮಾರಾಟದಲ್ಲಿಯು ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ.

2020ರ ಅಕ್ಟೋಬರ್ ತಿಂಗಳಿನಲ್ಲಿ ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ತನ್ನ ಅಪಾಚೆ ಆರ್ಟಿಆರ್ ಸರಣಿಯ ಬೈಕುಗಳನ್ನು ಭರ್ಜರಿಯಾಗಿ ಮಾರಾಟ ಮಾಡಿದೆ. ಈ ಪೈಕಿ 40,943 ಯುನಿಟ್ಗಳು ಆರ್ಟಿಆರ್ ಮಾದರಿಗಳಾಗಿದ್ದರೆ, 496 ಯುನಿಟ್ಗಳು ಆರ್ಆರ್ 310 ಮಾದರಿಗಳಾಗಿದೆ. ಒಟ್ಟಾರೆಯಾಗಿ, ಅಪಾಚೆ ಆರ್ಟಿಆರ್ ಸರಣಿಯು ವರ್ಷದಿಂದ ವರ್ಷಕ್ಕೆ ಶೇ.20.88 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 34281 ಯುನಿಟ್ಗಳನ್ನು ಮಾರಾಟ ಮಾಡಿದ್ದರು. ಇದರಲ್ಲಿ 34,059 ಯುನಿಟ್ಗಳು ಆರ್ಟಿಆರ್ ಮಾದರಿಗಳಾಗಿದ್ದರೆ, 496 ಯುನಿಟ್ಗಳು ಆರ್ಆರ್ 310 ಮಾದರಿಗಳಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಸೆಪ್ಟೆಂಬರ್ ಒಟ್ಟು 38,263 ಯುನಿಟ್ಗಳನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ 37,788 ಯುನಿಟ್ಗಳು ಆರ್ಟಿಆರ್ ಮಾದರಿಗಳಾಗಿದ್ದರೆ, 475 ಯುನಿಟ್ಗಳು ಆರ್ಆರ್ 310 ಮಾದರಿಗಳಾಗಿದೆ.

ತಯಾರಕರು ಮಾರಾಟದ ಬೆಳವಣಿಗೆಯನ್ನು ದಾಖಲಿಸುವಲ್ಲಿ ಯಶಸ್ವಿಯಾದರು ಅಪಾಚೆ ತಿಂಗಳುಗಳ ಮಾರಾಟದಲ್ಲಿ ಶೇ.8.3 ರಷ್ಟು ಬೆಳವಣಿಗೆಯನ್ನು ಕಂಡಿದೆ. ಅಪಾಚೆ ಸರಣಿಯ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್ಟಾರ್ಕ್ 125 ಸ್ಕೂಟರ್

ಅಪಾಚೆ ಆರ್ಟಿಆರ್ ಸರಣಿಯಲ್ಲಿ ನಾಲ್ಕು ಬೈಕುಗಳನ್ನು ಒಳಗೊಂಡಿದೆ. ಇದರಲ್ಲಿ ಆರ್ಟಿಆರ್ 160, ಆರ್ಟಿಆರ್ 180, ಆರ್ಟಿಆರ್ 160 4ವಿ, ಮತ್ತು ಆರ್ಟಿಆರ್ 200 4ವಿ ಬೈಕುಗಳಾಗಿದೆ.

ಈ ಬೈಕುಗಳು ಸಿಂಗಲ್-ಚಾನೆಲ್ ಎಬಿಎಸ್ ಅನ್ನು ನೀಡುತ್ತವೆ, ‘4ವಿ' ರೂಪಾಂತರಗಳು ಸ್ಮಾರ್ಟ್ ಎಕ್ಸ್ ಕನೆಕ್ಟ್, ಸ್ಲಿಪ್ಪರ್ ಕ್ಲಚ್, ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಜಿಟಿಟಿ (ಗ್ಲೈಡ್ ಥ್ರೂ ಟ್ರಾಫಿಕ್) ಫೀಚರ್ ಅನ್ನು ಪಡೆಯುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇನ್ನು ಆರ್ಟಿಆರ್ 200 4ವಿ ಯೊಂದಿಗೆ ಖರೀದಿದಾರರು ಡ್ಯುಯಲ್-ಚಾನೆಲ್ ಎಬಿಎಸ್ಗೆ ಆಯ್ಕೆಯನ್ನು ಸಹ ಪಡೆಯಬಹುದು. ಇದರೊಂದಿಗೆ ಇದು ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸಸ್ಪೆಂಕ್ಷನ್ ಮತ್ತು ರೈಡಿಂಗ್ ಮೋಡ್ ಗಳನ್ನು ಹೊಂದಿದೆ.

ಅಪಾಚೆ ಆರ್ಆರ್ ಸರಣಿಯು ಆರ್ಆರ್ 310 ಎಂಬ ಒಂದೇ ಮಾದರಿಯನ್ನು ಒಳಗೊಂಡಿದೆ. ಈ ಬೈಕನ್ನು ಬಿಎಂಡಬ್ಲ್ಯು ಮೋಟಾರಾಡ್ ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ, ಇದೇ ಮಾದರಿಯ ಎಂಜಿನ್ ಅನ್ನು ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ನೊಂದಿಗೆ ಹಂಚಿಕೊಳ್ಳುತ್ತದೆ.

ಟಿವಿಎಸ್ ‘ಜೆಪ್ಪೆಲಿನ್ ಆರ್' ಎಂಬ ಹೆಸರನ್ನು ಟ್ರೇಡ್ಮಾರ್ಕ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಇದು ಕ್ರೂಸರ್ ಬೈಕುಗಳಾಗಿರಬಹುದೆಂಬ ಹಾಪೋಹಗಳಿವೆ. ಜೊತೆಗೆ ರೈಡರ್' ಟ್ರೇಡ್ಮಾರ್ಕ್ ಅನ್ನು ಸಹ ಸಲ್ಲಿಸಲಾಗಿದ್ದು, ಇದು ಮುಂಬರುವ ಅಡ್ವೆಂಚರ್ ಬೈಕುಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.