Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ತುಟ್ಟಿ: ಜನವರಿ 19ರ ದರ ಹೀಗಿದೆ
- Finance
"ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲಿನ ನಗದು ಸಾಲಕ್ಕೆ ಬಡ್ಡಿ ಇಲ್ಲ"
- Sports
ಭಾರತ vs ಆಸ್ಟ್ರೇಲಿಯಾ: 91 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶುಬ್ಮನ್ ಗಿಲ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರು ಪೊಲೀಸ್ ಇಲಾಖೆ ಸೇರಿದ 25 ಹೊಸ ಟಿವಿಎಸ್ ಅಪಾಚೆ ಆರ್ಟಿಆರ್ 160 ಬೈಕ್
ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾ ಟಿವಿಎಸ್ ಮೋಟಾರ್ ಇತ್ತೀಚೆಗೆ ಬೆಂಗಳೂರು ಪೊಲೀಸರಿಗೆ 25 ಅಪಾಚೆ ಆರ್‌ಟಿಆರ್ 160 ಬೈಕುಗಳನ್ನು ನೀಡಲಾಗಿದೆ. ದೇಶದ ಮುಂಚೂಣಿ ಕಾರ್ಮಿಕರನ್ನು ಬೆಂಬಲಿಸುವ ಕಂಪನಿಯ ಬದ್ಧತೆಯ ಭಾಗವಾಗಿ ಅಪಾಚೆ ಬೈಕುಗಳನ್ನು ವಿತರಿಸಲಾಗಿದೆ.

ಟಿವಿಎಸ್ ಮೋಟಾರ್ ಸಂಸ್ಥೆಯ (ಮಾರ್ಕೆಟಿಂಗ್) ಪ್ರೀಮಿಯಂ ಮೋಟರ್ ಸೈಕಲ್ಸ್, ಮುಖ್ಯಸ್ಥ ಮೇಘಶ್ಯಾಮ್ ದಿಘೋಲೆ ಅವರು ಅಪಾಚೆ ಆರ್‌ಟಿಆರ್ 160 ಬೈಕುಗಳನ್ನು ಬೆಂಗಳೂರು ನಗರ ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಬೆಂಗಳೂರು ನಗರ ಪೊಲೀಸ್ ಅಯುಕ್ತ ಕಮಲ್ ಪಂತ್ ಅವರು ಉಪಸ್ಥಿತರಿದ್ದರು.

ಟಿವಿಎಸ್ ಅಪಾಚೆ ಆರ್‌ಟಿಆರ್ ಮಾದರಿಗಳು ದೀರ್ಘಕಾಲದವರೆಗೆ ಬೆಂಗಳೂರು ಪೊಲೀಸರ ಪಡೆಯ ಭಾಗವಾಗಿದೆ. ನಗರದಲ್ಲಿ ಗಸ್ತು ತಿರುಗಲು ಈ ಅಪಾಚೆ ಬೈಕುಗಳು ಉತ್ತಮ ಆಯ್ಕೆಯಾಗಿದೆ. ಟಿವಿಎಸ್ ಕಂಪನಿಯು ಕೆಲವು ಗ್ರಾಫಿಕ್ ಬದಲಾವಣೆಗಳನ್ನು ನಡೆಸಿ ಬೆಂಗಳೂರು ಪೊಲೀಸರಿಗೆ ವಿತರಿಸಲಾಗಿದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಅಪಾಚೆ ಆರ್‌ಟಿಆರ್ 160 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅತ್ಯಂತ ವಿಶ್ವಾಸಾರ್ಹ ಬೈಕುಗಳಲ್ಲಿ ಒಂದಾಗಿದೆ. ಕಡಿಮೆ ವೆಚ್ಚದ ನಿರ್ವಹಣೆ ಮತ್ತು ಅದರ ವಿಶ್ವಾಸಾರ್ಹತೆಯೊಂದಿಗೆ, ಅಪಾಚೆ ಆರ್‌ಟಿಆರ್ 160 ಬೆಂಗಳೂರು ಪೊಲೀಸ್ ಪಡೆಗೆ ಯೋಗ್ಯ ಒಡನಾಡಿ ಅಥವಾ ಸಾರಥಿ ಎಂದು ಹೇಳಬಹುದು.

ಟಿವಿಎಸ್ ರೇಸ್ ಟ್ಯೂನ್ಡ್- ಎಫ್‍ಐ ಅಥವಾ ಆರ್ಟಿ-ಫೈ ತಂತ್ರಜ್ಞಾನ ಅಳವಡಿಸಲಾಗಿದೆ. 2020ರ ಅಪಾಚೆ ಸ್ಪೋರ್ಟ್ಸ್ ಕಮ್ಯೂಟರ್ ರೇಂಜ್ 4 ವಿ ಮಾದರಿಗಳಂತೆಯೇ, ಆರ್‍ಟಿಆರ್ 160 2ವಿ ಬೈಕ್ ಕೂಡ ಸೆಗ್‍ಮೆಂಟ್‍ನ ಮೊದಲ ಗ್ಲೈಡ್ ಥ್ರೂ ಟೆಕ್ನಾಲಜಿ (ಜಿಟಿಟಿ) ಯನ್ನು ಹೊಂದಿದೆ. ನಗರದಲ್ಲಿ ಆರಾಮದಾಯಕ ಸವಾರಿ ಮಾಡಲು ಇದು ಸಹಕಾರಿಯಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಟ್ರಾಫಿಕ್ ಜಾಮ್‍ಗಳು ಉಂಟಾದ ಸಂದರ್ಭದಲ್ಲಿ ಸಲೀಸಾಗಿ ಸಾಗಲು ಈ ಸಿಸ್ಟಂ ಸಹಕರಿಯಾಗಲಿದೆ. ಹೊಸ ಟಿವಿಎಸ್ ಅಪಾಚೆ ಆರ್‍ಟಿಆರ್ 160 ಬೈಕಿನಲ್ಲಿ ಬಿಎಸ್-6 ಪ್ರೇರಿತ 159.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಎಂಜಿನ್ 15.3 ಬಿಹೆಚ್‍ಪಿ ಪವರ್ ಮತ್ತು 13.03 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. 2020ರ ಟಿವಿಎಸ್ ಅಪಾಚೆ ಆರ್‍ಟಿಆರ್ 160 2ವಿ ಬೈಕ್ ಪರ್ಲ್ ವೈಟ್, ಮ್ಯಾಟ್ ಬ್ಲೂ, ಮ್ಯಾಟ್ ರೆಡ್, ಗ್ಲೋಸ್ ಬ್ಲ್ಯಾಕ್, ಗ್ಲೋಸ್ ರೆಡ್ ಮತ್ತು ಟಿ ಗ್ರೇ ಸೇರಿದಂತೆ ಆರು ಬಣ್ಣಗಳಲ್ಲಿ ಲಭ್ಯವಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಅಪಾಚೆ ಆರ್ಟಿಆರ್ 160 ಬೈಕ್, ಬಜಾಜ್ ಪಲ್ಸರ್ 150 ಡಿಟಿಎಸ್-ಐ ಬೈಕಿಗೆ ನೇರ ಪೈಪೋಟಿಯನ್ನು ನೀಡುತ್ತದೆ. ಸುಮಾರು 15 ವರ್ಷಗಳ ಕೆಳಗೆ 150-160 ಸಿಸಿ ಬೈಕ್‍ಗಳ ಸೆಗ್‍ಮೆಂಟ್‍ನಲ್ಲಿ ಅಷ್ಟು ಪೈಪೋಟಿ ಇರಲಿಲ್ಲ.

ಟಿವಿಎಸ್ ಅಪಾಚೆ ಆರ್‍ಟಿಆರ್ 160 ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಎಫ್‌ಜೆಡ್ 15 ವಿ 3.0, ಸುಜುಕಿ ಜಿಕ್ಸರ್ 150, ಹೋಂಡಾ ಸಿಬಿ ಹಾರ್ನೆಟ್ 160 ಆರ್ ಮತ್ತು ಹೊಸ ಜನರೇಷನ್ ಪಲ್ಸರ್ 150 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಅಪಾಚೆ ಸರಣಿಯಲ್ಲಿ ಆರ್‍ಟಿಆರ್ 160 ಬೈಕ್ ಜನಪ್ರಿಯ ಮಾದರಿಗಳಲ್ಲಿ ಒಂದಾಗಿದೆ.