ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಎನ್‌ಟಾರ್ಕ್ 125 ಮಾದರಿಯಲ್ಲಿ ರೇಸ್ ಎಡಿಷನ್ ಅನ್ನು ಹೊಸ ಬಣ್ಣದ ಆಯ್ಕೆಯೊಂದಿಗೆ ಬಿಡುಗಡೆ ಮಾಡುತ್ತಿದ್ದು, ಡ್ಯುಯಲ್ ಯೆಲ್ಲೋ ಮತ್ತು ಬ್ಲ್ಯಾಕ್ ಬಣ್ಣದ ಆಯ್ಕೆ ಹೊಂದಿರುವ ಹೊಸ ರೇಸ್ ಎಡಿಷನ್ ಮಾದರಿಯು ಪರ್ಫಾಮೆನ್ಸ್ ಸ್ಕೂಟರ್ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದೆ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಿವಿಎಸ್

ಹೊಸ ಬಣ್ಣದ ಆಯ್ಕೆ ಹೊಂದಿರುವ ಎನ್‌ಟಾರ್ಕ್ ರೇಸ್ ಎಡಿಷನ್ ಮಾದರಿಯು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದ್ದು, ಸದ್ಯ ಮಾರುಕಟ್ಟೆಯಲ್ಲಿ ರೇಸ್ ಎಡಿಷನ್ ಮಾದರಿಯು ರೆಡ್ ಮತ್ತು ಬ್ಲ್ಯಾಕ್ ಡ್ಯುಯಲ್ ಟೋನ್ ಬಣ್ಣದಲ್ಲಿ ಮಾತ್ರ ಮಾರಾಟವಾಗುತ್ತಿದೆ. ಹೀಗಾಗಿ ಟಿವಿಎಸ್ ಕಂಪನಿಯ ತನ್ನ ಎನ್‌ಟಾರ್ಕ್ 125 ಸ್ಟ್ಯಾಂಡರ್ಡ್ ಮಾದರಿಯಿಂದ ಪ್ರೇರಣೆ ಹೊಂದಿರುವ ಯೆಲ್ಲೋ ಮತ್ತು ಬ್ಲ್ಯಾಕ್ ಡ್ಯುಯಲ್ ಟೋನ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಿವಿಎಸ್

ಮಾಹಿತಿಗಳ ಪ್ರಕಾರ ಹೊಸ ಸ್ಕೂಟರ್ ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಸ್ಕೂಟರ್ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 74,365 ಬೆಲೆ ಹೊಂದಿದೆ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಿವಿಎಸ್

ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ಸ್ಪೋರ್ಟಿ ಲುಕ್ ಹೊಂದಿರುವ ರೇಸ್ ಎಡಿಷನ್ ಮಾದರಿಯು ರೇಸಿಂಗ್ ಗ್ರಾಫಿಕ್ಸ್ ಸೇರಿದಂತೆ ಕೆಲವು ಪ್ರಮುಖ ಬದಲಾವಣೆಗಳನ್ನು ಹೊಂದಿದ್ದು, ಹೊಸ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಡಿಆರ್‌ಎಸ್ ಪಡೆದುಕೊಂಡಿದೆ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಿವಿಎಸ್

ಇನ್ನು ಬಿಎಸ್-6 ಎಂಜಿನ್ ಜೋಡಣೆಯ ನಂತರ ಇದು ಎರಡನೇ ಬಾರಿಗೆ ಬೆಲೆ ಹೆಚ್ಚಳ ಮಾಡಲಾಗಿದ್ದು, ಈ ಹಿಂದೆ ಬಿಎಸ್-4 ಎಂಜಿನ್‌ನಿಂದ ಬಿಎಸ್-6 ಎಂಜಿನ್ ಮಾದರಿಗೆ ಉನ್ನತೀಕರಿಸಿದಾಗಲೂ ಹೆಚ್ಚುವರಿ ರೂ.7,800 ಹೆಚ್ಚುವರಿ ಬೆಲೆ ಏರಿಕೆ ಮಾಡಲಾಗಿತ್ತು.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಿವಿಎಸ್

ಬಿಎಸ್-6 ಜಾರಿ ನಂತರ ಕಳೆದ ಜೂನ್ ತಿಂಗಳಿನಲ್ಲೂ ರೂ.950 ಬೆಲೆ ಏರಿಕೆ ಮಾಡಿದ್ದ ಟಿವಿಎಸ್ ಕಂಪನಿಯು ಒಟ್ಟು ಬಿಎಸ್-6 ಮಾದರಿಯ ಮೇಲೆ ಬಿಎಸ್-4 ಮಾದರಿಗಿಂತಲೂ ರೂ. 10 ಸಾವಿರದಷ್ಟು ಹೆಚ್ಚಳ ಮಾಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸ್ಕೂಟರ್ ಇದೀಗ ಆರಂಭಿಕವಾಗಿ ರೂ. 67,885 ಮತ್ತು ಟಾಪ್ ಎಂಡ್ ಮಾದರಿಯು ರೂ. 74,365 ಬೆಲೆ ಪಡೆದುಕೊಂಡಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಿವಿಎಸ್

ಹೊಸ ಎನ್‌ಟಾರ್ಕ್ 125 ಸ್ಕೂಟರ್‌ನಲ್ಲಿ ಡ್ರಮ್ ಬ್ರೇಕ್ ಮಾದರಿಯು ಆರಂಭಿಕ ಮಾದರಿಯಾಗಿದ್ದರೆ ರೇಸ್ ಎಡಿಷನ್ ಹೈ ಎಂಡ್ ಮಾದರಿಯಾಗಿದ್ದು, 125 ಸಿಸಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಹೊಂದಿರುವ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು 9.25-ಬಿಎಚ್‌ಪಿ ಮತ್ತು 10.5-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಿವಿಎಸ್

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್ ಮತ್ತು ರೇಸ್ ಎಡಿಷನ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ಬಿಎಸ್-6 ಸ್ಕೂಟರ್‌ನಲ್ಲಿ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಪ್ರಮುಖ ಆಕರ್ಷಣೆಯಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಎನ್‌ಟಾರ್ಕ್ ರೇಸ್ ಎಡಿಷನ್‌ನಲ್ಲಿ ಹೊಸ ಬಣ್ಣದ ಆಯ್ಕೆ ನೀಡಲಿದೆ ಟಿವಿಎಸ್

ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕಾರ್ಬ್ಯುಟರ್ ಎಂಜಿನ್ ಬದಲಾಗಿ ಫ್ಯೂಲ್ ಇಂಜೆಕ್ಷನ್ ಸಿಸ್ಟಂ ನೀಡಲಾಗಿದ್ದು, ಇದರಿಂದ ಹೊಸ ಸ್ಕೂಟರ್‌ನಲ್ಲಿ ಪರ್ಫಾಮೆನ್ಸ್ ಹೆಚ್ಚಳವಾಗಿರುವುದಲ್ಲದೇ ಮಾಲಿನ್ಯ ಉತ್ಪತ್ತಿ ಪ್ರಮಾಣದಲ್ಲೂ ಕೂಡಾ ಸುಧಾರಣೆಯಾಗಿದೆ.

Most Read Articles

Kannada
English summary
TVS Ntorq Race Edition In Yellow Paint Scheme Leaked Ahead Of Launch. Read in Kannada.
Story first published: Tuesday, August 11, 2020, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X