ಸ್ಥಗಿತವಾಯ್ತು ಟಿವಿಎಸ್ ಕಂಪನಿಯ ಜೂಪಿಟರ್ ಗ್ರಾಂಡೆ ಸ್ಕೂಟರ್

ಟಿವಿಎಸ್ ಕಂಪನಿಯು ತನ್ನ ಜೂಪಿಟರ್ ಗ್ರಾಂಡೆ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಪ್ರೀಮಿಯಂ ಜೂಪಿಟರ್ ಗ್ರಾಂಡೆ ಸ್ಕೂಟರ್‌ನ ಹೆಸರನ್ನು ಕಂಪನಿಯು ಅಧಿಕೃತವಾಗಿ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ.

ಸ್ಥಗಿತವಾಯ್ತು ಟಿವಿಎಸ್ ಕಂಪನಿಯ ಜೂಪಿಟರ್ ಗ್ರಾಂಡೆ ಸ್ಕೂಟರ್

ಟಿವಿಎಸ್ ಜೂಪಿಟರ್ ಗ್ರಾಂಡೆ ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿಲ್ಲ. ಗ್ರಾಂಡೆ ಸ್ಕೂಟರ್ ಅನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಯ ಬಾರಿ ಅಫ್‍ಗ್ರೇಡ್ ಮಾಡಲಾಗಿತ್ತು. ತನ್ನ ಸರಣಿಯಲ್ಲಿ ಬ್ಲೂಟತ್ ಕನ್ಕೆಟಿವಿಟಿಯ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿದ ಸ್ಕೂಟರ್ ಇದಾಗಿದೆ. ಜೂಪಿಟರ್ ಗ್ರಾಂಡೆ ಪ್ರೀಮಿಯಂ ಸ್ಕೂಟರ್ ಆಗಿದೆ.

ಸ್ಥಗಿತವಾಯ್ತು ಟಿವಿಎಸ್ ಕಂಪನಿಯ ಜೂಪಿಟರ್ ಗ್ರಾಂಡೆ ಸ್ಕೂಟರ್

ಜೂಪಿಟರ್ ಗ್ರಾಂಡೆ ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವವರೆಗೆ ಸ್ಥಗಿತಗೊಳಿಸಲಾಗಿದೆ. ಟಿವಿಎಸ್ ಕಂಪನಿಯು ತನ್ನ ಸರಣಿಯಲ್ಲಿರುವ ಇತರ ಜನಪ್ರಿಯ ದ್ವಿಚಕ್ರ ವಾಹನಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಪರಿಚಯಿಸಲಾಗಿದೆ.

MOST READ: ಇತಿಹಾಸದ ಪುಟ ಸೇರಿದ ಹೋಂಡಾ ಕ್ಲಿಕ್ ಸ್ಕೂಟರ್

ಸ್ಥಗಿತವಾಯ್ತು ಟಿವಿಎಸ್ ಕಂಪನಿಯ ಜೂಪಿಟರ್ ಗ್ರಾಂಡೆ ಸ್ಕೂಟರ್

ಜೂಪಿಟರ್ ಗ್ರಾಂಡೆ ಸ್ಕೂಟರ್ ಹಲವಾರು ಫೀಚರ್‍ಗಳನ್ನು ಹೊಂದಿದೆ. ಸ್ಮಾರ್ಟ್‌ಎಕ್ಸ್ ಕನೆಕ್ಟ್ ಫೀಚರ್ ಅನ್ನು ಸವಾರನ ಬಳಿಯಿರುವ ಐಒಎಸ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಿಂಕ್ ಮಾಡಬಹುದಾಗಿದೆ. ಈ ಫೀಚರ್ ಹೆಚ್ಚುವರಿ ಫಂಕ್ಷನ್‍‍ಗಳನ್ನು ನೀಡುತ್ತದೆ. ಇದರಲ್ಲಿ ಕಾಲ್, ಎಸ್‍ಎಂ‍ಎಸ್, ಓವರ್ ಸ್ಪೀಡ್ ಅಲರ್ಟ್ ಹಾಗೂ ಪ್ರಯಾಣದ ವಿವರಗಳನ್ನು ಪಡೆಯಬಹುದು.

ಸ್ಥಗಿತವಾಯ್ತು ಟಿವಿಎಸ್ ಕಂಪನಿಯ ಜೂಪಿಟರ್ ಗ್ರಾಂಡೆ ಸ್ಕೂಟರ್

ಡಿಜಿಟಲ್-ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟ್ರಿಪ್ ಮೀಟರ್, ಓಡೋಮೀಟರ್ ರೀಡಿಂಗ್, ಫ್ಯೂಯಲ್ ಲೆವೆಲ್ ಹಾಗೂ ಟೆಲ್‍‍ಟೇಲ್ ಲೈಟುಗಳನ್ನು ಹೊಂದಿದೆ. ಕ್ರೋಮ್ ಬೆಜೆಲ್‌ಗಳನ್ನು ಹೊಂದಿರುವ ಎಲ್ಇಡಿ ಹೆಡ್‌ಲ್ಯಾಂಪ್‌ ಹಾಗೂ ಈ ಸೆಗ್‍‍ಮೆಂಟಿನಲ್ಲಿ ಮೊದಲ ಬಾರಿಗೆ ಅಳವಡಿಸಿರುವ ಡ್ಯೂಯಲ್ ಕಲರ್ 3ಡಿ ಲೊಗೊ ಹೊಸ ಟಿವಿಎಸ್ ಜುಪಿಟರ್ ಗ್ರಾಂಡ್‍‍ನಲ್ಲಿರುವ ಇತರ ಫೀಚರ್‍‍ಗಳಾಗಿವೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ಸ್ಥಗಿತವಾಯ್ತು ಟಿವಿಎಸ್ ಕಂಪನಿಯ ಜೂಪಿಟರ್ ಗ್ರಾಂಡೆ ಸ್ಕೂಟರ್

ಟಿವಿಎಸ್ ಜೂಪಿಟರ್ ಗ್ರಾಂಡೆ ಸ್ಕೂಟರ್ ಬಾಡಿ ಪ್ಯಾನೆಲ್‌ಗಳ ಮೇಲೆ ಕ್ರೋಮ್ ಗಾರ್ನಿಶ್ ಹಾಗೂ ರೇರ್ ವೀವ್ ಮಿರರ್‍‍ಗಳಿರಲಿವೆ. ಜೊತೆಗೆ ಮೆರೂನ್ ಬಣ್ಣದ ಕ್ರಾಸ್ ಸ್ಟಿಚ್ಡ್ ಸೀಟುಗಳು, ಬೇಜ್ ಇನ್ ಸೈಡ್ ಹಾಗೂ ಮಷೀನ್‍‍ನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍‍ಗಳಿವೆ.

ಸ್ಥಗಿತವಾಯ್ತು ಟಿವಿಎಸ್ ಕಂಪನಿಯ ಜೂಪಿಟರ್ ಗ್ರಾಂಡೆ ಸ್ಕೂಟರ್

ಟಿವಿಎಸ್ ಜೂಪಿಟರ್ ಗ್ರಾಂಡ್ ಸ್ಕೂಟರ್ ಅನ್ನು ಒಂದು ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ. ಈ ಸ್ಕೂಟರಿನ ಮುಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್‍‍ಗಳಿವೆ. ಸ್ಕೂಟರ್ ಮೆಕ್ಯಾನಿಕಲ್‌ ಅಂಶಗಳ ಬಗ್ಗೆ ಹೇಳುವುದಾದರೆ, ಹೊಸ ಜೂಪಿಟರ್ ಗ್ರಾಂಡ್ ಸ್ಕೂಟರ್ 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದೆ.

MOST READ: ಇತಿಹಾಸ ಪುಟ ಸೇರಿದ ಜನಪ್ರಿಯ ಬಜಾಜ್ ಡಿಸ್ಕವರ್ ಬೈಕುಗಳು

ಸ್ಥಗಿತವಾಯ್ತು ಟಿವಿಎಸ್ ಕಂಪನಿಯ ಜೂಪಿಟರ್ ಗ್ರಾಂಡೆ ಸ್ಕೂಟರ್

ಈ ಎಂಜಿನ್ 8 ಬಿ‍‍ಹೆಚ್‍‍ಪಿ ಹಾಗೂ 8.4 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸ್ಕೂಟರಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಹಾಗೂ ಹಿಂಭಾಗದಲ್ಲಿ ಪ್ರಿ ಲೋಡ್ ಅಡ್ಜಸ್ಟಬಲ್ ಶಾಕ್ ಅಬ್ಸರ್ವರ್‍‍ಗಳಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್‍‍ಗಳಿವೆ.

ಸ್ಥಗಿತವಾಯ್ತು ಟಿವಿಎಸ್ ಕಂಪನಿಯ ಜೂಪಿಟರ್ ಗ್ರಾಂಡೆ ಸ್ಕೂಟರ್

ಈ ಸ್ಕೂಟರಿನಲ್ಲಿ 12 ಇಂಚಿನ ಟ್ಯೂಬ್‌ಲೆಸ್ ಟಯರ್‌ಗಳಿದ್ದು, 90/90 ಪ್ರೊಫೈಲ್‌ ಎರಡೂ ಬದಿಗಳಲ್ಲಿವೆ. ಟಿವಿಎಸ್ ಜೂಪಿಟರ್ ಗ್ರಾಂಡೆ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 5 ಜಿ, ಹೀರೋ ಪ್ಲೆಷರ್ 110 ಹಾಗೂ ಯಮಹಾ ಫ್ಯಾಸಿನೊ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುತ್ತಿತ್ತು.

Most Read Articles

Kannada
English summary
TVS Jupiter Grande Temporarily Discontinued In India: Unlisted From Website. Read in Kannada.
Story first published: Thursday, April 16, 2020, 13:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X