ಬಿಡುಗಡೆಯಾಯ್ತು ಬಿಎಸ್-6 ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಟೀಸರ್

ಟಿ‍‍ವಿಎಸ್ ಕಂಪನಿಯು ತನ್ನ ಜನಪ್ರಿಯ ಸ್ಟಾರ್ ಸಿಟಿ ಪ್ಲಸ್ ಸ್ಪೇಷಲ್ ಎಡಿಷನ್ ಅನ್ನು ಕಳೆದ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಟಿವಿಎಸ್ ಕಂಪನಿಯು ಅಧಿಕೃತ ವೆಬ್‍‍ಸೈಟ್‍‍ನಲ್ಲಿ 2020ರ ಸ್ಟಾರ್ ಸಿಟಿ ಪ್ಲಸ್‍ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಟೀಸರ್

ಎಲ್ಲಾ ಪ್ರಮುಖ ದ್ವಿಚಕ್ರ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಅಥವಾ ಎಲೆಕ್ಟ್ರಿಕ್ ಬೈಕ್‍ಗಳನ್ನು ಬಿಡುಗಡೆಗೊಳಿಸುತ್ತಿದೆ. ಇದರಿಂದ ಹಲವರು ಟಿವಿಎಸ್ ಕಂಪನಿಯು ಕೂಡ ಎಲೆಕ್ಟಿಕ್ ಸ್ಕೂಟರ್ ಅನ್ನು ಮೊದಲು ಬಿಡುಗಡೆಗೊಳಿಸಬಹುದು ಎಂದು ಭಾವಿಸಿದ್ದರು. ಆದರೆ ಕಂಪನಿಯು ಹೊಸ ಟಿ‍ವಿಎಸ್ ಸ್ಟಾರ್ ಸಿಟಿ ಪ್ಲಸ್ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಟೀಸರ್

ಹೊಸ ಟಿ‍‍ವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಅನ್ನು ಇದೆ ತಿಂಗಳು 25ಕ್ಕೆ ಬಿಡುಗಡೆಗೊಳಿಸಬಹುದು. 2020ರ ಹೊಸ ಟಿ‍ವಿಎಸ್‍‍ನಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದರೊಂದಿಗೆ ಕೆಲವು ಕಾಸ್ಮೆಟಿಕ್ ಅಪ್‍‍ಡೇಟ್‍‍ಗಳನ್ನು ಮಾಡಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಟೀಸರ್

ಕಂಪನಿಯು ಬಿಡುಗಡೆಗೊಳಿಸಿದ ಟೀಸರ್‍‍ನಲ್ಲಿ ಹೊಸ ಟಿ‍ವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಎಲ್‍ಇಡಿ ಹೆಡ್‍‍ಲೈಟ್ ಅನ್ನು ಹೊಂದಿದೆ. ಇದಲ್ಲದೆ ಈ ಬೈಕ್ ಹೊಸ ಸೈಡ್ ಪ್ಯಾನ್‍‍ಲ್‍‍ಗಳನ್ನು ಮತ್ತು ಗ್ರಾಫಿಕ್ಸ್ ಅನ್ನು ಸಹ ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಟೀಸರ್

ಕಳೆದ ಸೆಪ್ಟಂಬರ್‍‍ನಲ್ಲಿ ಬಿಡುಗಡೆಗೊಳಿಸಿದ ಸ್ಟಾರ್ ಸಿಟಿ ಪ್ಲಸ್ ಸ್ಪೇಷಲ್ ಎಡಿಷನ್ ಬೈಕ್ ಪ್ರೀಮಿಯಂ ಡ್ಯುಯಲ್ ಟೋನ್ ಸೀಟ್, ಡ್ಯುಯಲ್ ಟೋನ್ ಮಿರರ್, ಸೈಡ್ ಹಾಗೂ ರೇರ್ ಪ್ಯಾನೆಲ್‍‍ಗಳ ಮೇಲೆ ಕೆಂಪು ಬಣ್ಣದ ಡೆಕಾಲ್‍‍ಗಳನ್ನು ಹೊಂದಿದೆ. ಇದರ ಜೊತೆಗೆ ಬಣ್ಣದ ಶಾಕ್ ಅಬ್ಸರ್ವರ್ ಹಾಗೂ ಸ್ಪೇಷಲ್ ಎಡಿಷನ್ ಲೊಗೊ ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಟೀಸರ್

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಎ‍‍ಹೆಚ್‍ಒ, ಹನಿ ಕೂಂಬ್ ಟೆಕ್ಷರ್‍‍ನ ಸೈಡ್ ಪ್ಯಾನೆಲ್, ಸ್ಟೇನ್‍‍ಲೆಸ್ ಸ್ಟೀಲ್ ಮಫ್ಲರ್ ಬಿಡಿಭಾಗಗಳು, ಅಲ್ಯುಮಿನಿಯಂ ಗ್ರಾಬ್ ರೇಲ್, ಬ್ಲಾಕ್ ಅಲಾಯ್ ವ್ಹೀಲ್, 3ಡಿ ಎಂಬ್ಲೆಮ್ ಹಾಗೂ ಟೇಲ್‍‍ಲೈಟ್‍‍ನ ಸ್ಟೈಲಿಶ್ ಸೆಟ್‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಟೀಸರ್

ಹೊಸ ಟಿವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನಲ್ಲಿರುವ ಮೆಕಾನಿಕಲ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ. ಈ ಬೈಕಿನಲ್ಲಿಯೂ ಸಹ 110 ಸಿಸಿ ಯ ಸಿಂಗಲ್ ಸಿಲಿಂಡರ್ ಏರ್ ಕೂಲ್ ಪೆಟ್ರೋಲ್ ಎಂಜಿನ್ ಅಳವಡಿಸಲಿದೆ. ಆದರೆ ಪವರ್ ಮತ್ತು ಟಾರ್ಕ್ ಉತ್ಪಾದನೆಯ ಅಂಕಿಗಳಲ್ಲಿ ಕೆಲವು ಬದಲಾವಣೆಗಳು ಆಗಬಹುದು.

ಬಿಡುಗಡೆಯಾಯ್ತು ಬಿಎಸ್-6 ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಟೀಸರ್

ಈ ಎಂಜಿನ್ 7,000 ಆರ್‍‍ಪಿ‍ಎಂ‍‍ನಲ್ಲಿ 8.3 ಬಿ‍‍ಹೆಚ್‍‍ಪಿ ಪವರ್ ಹಾಗೂ 5,000 ಆರ್‍‍ಪಿ‍ಎಂನಲ್ಲಿ 8.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 4 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಪ್ರಯಾಣಿಕ ಸೆಗ್‍‍ಮೆಂಟಿನ ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫೋರ್ಕ್‍‍ಗಳಿದ್ದರೆ, ಹಿಂಭಾಗದಲ್ಲಿ ಅಡ್ಜಸ್ಟಬಲ್ ಡ್ಯುಯಲ್ ಶಾಕ್ ಅಬ್ಸರ್ವರ್‍‍ಗಳಿವೆ.

ಬ್ರೇಕಿಂಗ್‍‍ಗಳಿಗಾಗಿ ಎರಡೂ ಬದಿಯಲ್ಲಿ 110 ಎಂಎಂ‍‍ನ ಡ್ರಮ್ ಬ್ರೇಕ್‍‍ಗಳಿವೆ. ಈ ಬೈಕಿನಲ್ಲಿರುವ ಎರಡೂ ಟಯರ್‍‍ಗಳೂ 17 ಇಂಚಿನದಾಗಿವೆ. ಈ ಸ್ಪೇಷಲ್ ಎಡಿಷನ್ ಬೈಕಿನಲ್ಲಿ ಬಟನ್ ಟೈಪಿನ ಟ್ಯೂಬ್‍‍ಲೆಸ್ ಟಯರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಟಿ‍‍ವಿ‍ಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನ ಟೀಸರ್

ಟಿ‍ವಿಎಸ್ ಕಂಪನಿಯ ಬೈಕ್‍‍ಗಳ ಸರಣಿಯಲ್ಲಿ ಜನಪ್ರಿಯ ಬೈಕ್‍‍ಗಳಲ್ಲಿ ಸ್ಟಾರ್ ಸಿಟಿ ಪ್ಲಸ್ ಕೂಡ ಒಂದಾಗಿದೆ. ಈ ಬೈಕ್ ಉತ್ತಮ ಮೈಲೇಜ್ ಮತ್ತು ಪ್ರಯಾಣಿಸಲು ಆರಾಮದಾಯಕವಾಗಿದೆ. ಆಕರ್ಷಕ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. ಬಿಎಸ್-6 ಸ್ಟಾರ್ ಪ್ಲಸ್ ಸಿಟಿ ಬೈಕ್ ಹೆಚ್ಚಿನ ಜನರನ್ನು ಅಕರ್ಷಿಸಬಹುದು. ಈ ಬೈಕ್ ಬಿಡುಗಡೆಯಾದ ಬಳಿಕ ಹೀರೋ ಪ್ಯಾಶನ್ ಎಕ್ಸ್‌ಪ್ರೊ ಮತ್ತು ಹೋಂಡಾ ಡ್ರೀಮ್ ಯುಗ ಬೈಕ್‍‍ಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
TVS Star City Plus BS6 Teaser Released: Launch On 25 January. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X