Just In
- 47 min ago
ರೋಡ್ ಟೆಸ್ಟಿಂಗ್ನಲ್ಲಿ ಕಂಡುಬಂದ ಹ್ಯುಂಡೈ ಕ್ರೆಟಾ 7 ಸೀಟರ್ ವರ್ಷನ್
- 12 hrs ago
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- 12 hrs ago
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಫೋರ್ಸ್ ನ್ಯೂ ಜನರೇಷನ್ ಗೂರ್ಖಾ
- 12 hrs ago
ಸೀಮನ್ಸ್ ಕಂಪನಿಯ ಜೊತೆಗೂಡಿ ಆಧುನಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಅಭಿವೃದ್ದಿಪಡಿಸಲಿದೆ ಓಲಾ
Don't Miss!
- Sports
ಹೊಸ ಪರೀಕ್ಷೆಗೆ ಒಳಗಾಗಬೇಕು ಕ್ರಿಕೆಟ್ ತಾರೆಯರು: 8.30 ನಿಮಿಷದಲ್ಲಿ 2 ಕಿ.ಮೀ ಗುರಿ
- News
ಚಿನ್ನ ಕಳ್ಳಸಾಗಣೆ: 28 ಕೋಟಿ ರೂಪಾಯಿ ಮೌಲ್ಯದ 55.61 ಕೆಜಿ ಚಿನ್ನ ವಶಪಡಿಸಿಕೊಂಡ DRI
- Movies
ಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿ
- Lifestyle
ಶುಕ್ರವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಜಾಜ್ ಅವೆಂಜರ್ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ
ಟಿವಿಎಸ್ ಮೋಟಾರ್ ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಕ್ರೂಸರ್ ಕಾನ್ಸೆಪ್ಟ್ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಬೈಕ್ ಮಾದರಿಯು ಬಜಾಜ್ ಅವೆಂಜರ್ ಕ್ರೂಸರ್ ಬೈಕ್ ಆವೃತ್ತಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

2018ರ ದೆಹಲಿ ಆಟೋ ಎಕ್ಸ್ಪೋದಲ್ಲಿ ಝೆಪ್ಲಿನ್ ಹೆಸರಿನೊಂದಿಗೆ ಅನಾವರಣಗೊಂಡಿದ್ದ ಕ್ರೂಸರ್ ಬೈಕ್ನ್ನು ಇದೀಗ ಬಿಡುಗಡೆ ಮಾಡುತ್ತಿರುವ ಟಿವಿಎಸ್ ಕಂಪನಿಯು ರೊನಿನ್ ಹೆಸರನ್ನು ಅಧಿಕೃತವಾಗಿ ಕರೆಯುವ ಸಾಧ್ಯತೆಗಳಿದ್ದು, ಕೇಂದ್ರ ಸಾರಿಗೆ ಇಲಾಖೆಯಲ್ಲಿ ಸಲ್ಲಿಕೆ ಮಾಡಲಾಗಿರುವ ಟ್ರೆಡ್ಮಾರ್ಕ್ ಅರ್ಜಿಯಲ್ಲಿ ಹೊಸ ಬೈಕ್ ಮಾದರಿಯ ಹೆಸರು ಬಹಿರಂಗವಾಗಿದೆ. ಆದರೆ ಹೊಸ ಬೈಕಿಗಾಗಿ ಪಡೆದುಕೊಳ್ಳಲಾಗಿರುವ ಅಧಿಕೃತ ಹೆಸರು ಕ್ರೂಸರ್ ಮಾದರಿಗಾಗಿ ಪೆಡೆದಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳಿಲ್ಲವಾದರೂ ಬಿಡುಗಡೆಯ ಪಟ್ಟಿಯಲ್ಲಿ ಕಾನ್ಸಪ್ಟ್ ಬೈಕ್ ಮೊದಲ ಹಂತದಲ್ಲಿದೆ.

ಹೀಗಾಗಿ ಹೊಸ ರೊನಿನ್ ಹೆಸರು ಹೊಸ ಕ್ರೂಸರ್ ಬೈಕಿಗೆ ಬಳಕೆ ಮಾಡಬಹುದು ಅಥವಾ ಬಿಎಂಡಬ್ಲ್ಯು ಮೊಟೊರಾಡ್ ಜೊತೆಗೂಡಿ ಅಭಿವೃದ್ದಿಗೊಳಿಸುತ್ತಿರುವ ಹೊಸ ಅಡ್ವೆಂಚರ್ ಬೈಕ್ ಮಾದರಿಗಾದರೂ ಬಳಕೆ ಮಾಡಬಹುದಾದ ಸಾಧ್ಯತೆಗಳಿವೆ.

ಆದರೆ ಸದ್ಯಕ್ಕೆ ಬಿಡುಗಡೆಯ ಹಂತದಲ್ಲಿರುವ ಕ್ರೂಸರ್ ಬೈಕ್ ಮಾದರಿಗಾಗಿಯೇ ಈ ಹೆಸರು ಬಳಕೆ ಮಾಡಬಹುದಾದ ಸಾಧ್ಯತೆ ಹೆಚ್ಚಿದ್ದು, ಸದ್ಯದಲ್ಲೇ ರೊನಿನ್ ಹೆಸರು ಯಾವ ಬೈಕ್ ಮಾದರಿಗಾಗಿ ಎನ್ನುವುದು ಸ್ಪಷ್ಟವಾಗಲಿದೆ.

ಇನ್ನು ಮೆಟ್ರೋ ನಗರ ಪ್ರದೇಶಗಳಲ್ಲಿ ಕ್ರೂಸರ್ ಬೈಕ್ಗಳಿಗೆ ಯುವ ಸಮುದಾಯವು ವಿಶೇಷ ಆಸಕ್ತಿ ತೋರುತ್ತಿದ್ದು, ಈ ಹಿನ್ನೆಲೆ ಬಜಾಜ್ ಅವೆಂಜರ್ಗಿಂತಲೂ ಉತ್ತಮವಾದ ಹೈ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು ಥಂಡರ್ಬರ್ಡ್ 350 ಆವೃತ್ತಿಗಿಂತಲೂ ಕಡಿಮೆ ಬೆಲೆಯಲ್ಲಿ ಝೆಪ್ಲಿನ್ ಕ್ರೂಸರ್ ಕಾನ್ಸೆಪ್ಟ್ ಬೈಕ್ ಅನ್ನು ನಿರ್ಮಾಣ ಮಾಡಿದೆ.

2018ರ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನವಾಗಿದ್ದ ಈ ಹೊಸ ಬೈಕ್ ಇದೇ ವರ್ಷದ ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಅತ್ಯಾಧುನಿಕ ರೈಡಿಂಗ್ ಸೌಲಭ್ಯದ ಜೊತೆ ಜೊತೆಗೆ ಕ್ಲಾಸಿಕ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿದೆ.

ಝೆಪ್ಲಿನ್ ಬೈಕ್ ಮಾದರಿಯು ಇನ್ಟ್ರಾಗೆಟೆಡ್ ಸ್ಟಾರ್ಟರ್ ಜನರೇಟರ್(ಐಎಸ್ಜಿ) ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಅರಾಮದಾಯಕ ರೈಡಿಂಗ್ ಸೌಲಭ್ಯವನ್ನು ಒದಗಿಸುವುದ ಜೊತೆಗೆ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಗೂ ಹೆಚ್ಚು ಸಹಕಾರಿಯಾಗಲಿದೆ.

ಎಂಜಿನ್ ಸಾಮರ್ಥ್ಯ
ಬಿಎಸ್-6 ವೈಶಿಷ್ಟ್ಯತೆಯ 212 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಮಾದರಿಯನ್ನು ಹೊಂದಿರುವ ಝೆಪ್ಲಿನ್ ಬೈಕ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಸೌಲಭ್ಯದೊಂದಿಗೆ 20-ಬಿಎಚ್ಪಿ ಉತ್ಪಾದನಾ ಗುಣಹೊಂದಿದ್ದು, ಅವೆಂಜರ್ 220 ಬೈಕಿಗಿಂತೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

ಜೊತೆಗೆ ರೆಟ್ರೋ ಶೈಲಿಯ ವಿನ್ಯಾಸವನ್ನು ಹೊಂದಿರುವ ಝೆಪ್ಲಿನ್ ಬೈಕಿನಲ್ಲಿ ಫುಲ್ ಎಲ್ಇಡಿ ಲೈಟಿಂಗ್ ಸಿಸ್ಟಂ, ಸ್ಮಾರ್ಟ್ ಬಯೋ ಕೀ, ಎಲೆಕ್ಟ್ರಾನಿಕ್ ಸ್ಪಿಡೋ ಮೀಟರ್ ಮತ್ತು ಅಡ್ವೆಂಚರ್ ಬೈಕ್ ರೈಡ್ ಕ್ಷಣಗಳನ್ನು ಸೆರೆಹಿಡಿಯಲು ಹೆಚ್ಡಿ ಕ್ಯಾಮೆರಾ ಕೂಡಾ ಪಡೆದುಕೊಂಡಿರಲಿದೆ.