ಬ್ಯಾಟರಿ ರಹಿತ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬ್ಯಾಟರಿ ಇಲ್ಲದ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡಲು ಹಾಗೂ ರಿಜಿಸ್ಟರ್ ಮಾಡಿಸಲು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಬುಧವಾರ ಅನುಮೋದನೆ ನೀಡಿದೆ.

ಬ್ಯಾಟರಿ ರಹಿತ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ವಾಲಂಟರಿ ಬ್ಯಾಟರಿಗಳ ಬಳಕೆ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವುದು ಇದರ ಹಿಂದಿರುವ ಉದ್ದೇಶವೆಂದು ಸಾರಿಗೆ ಇಲಾಖೆ ಹೇಳಿದೆ.ರಾಜ್ಯ ಸಾರಿಗೆ ಆಯುಕ್ತರುಗಳಿಗೆ ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಬ್ಯಾಟರಿ ಬೆಲೆಯನ್ನು ವಿದ್ಯುತ್ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಒಟ್ಟು ಬೆಲೆಯಿಂದ ಪ್ರತ್ಯೇಕವಾಗಿಸಬೇಕು ಎಂದು ಇಲಾಖೆ ಹೇಳಿದೆ. ಬ್ಯಾಟರಿಯ ಬೆಲೆಯು ವಾಹನದ ಒಟ್ಟು ಬೆಲೆಯ 30%-40%ನಷ್ಟಿರುವ ಕಾರಣಕ್ಕೆ ವಾಹನದ ಬೆಲೆ ಹೆಚ್ಚಾಗುತ್ತಿದೆ.

ಬ್ಯಾಟರಿ ರಹಿತ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಅಗತ್ಯವನ್ನು ನಿವಾರಿಸುವುದರಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುತ್ತದೆ. ಹಾಗೆಯೇ ಗ್ರಾಹಕರಿಗೆ ಬ್ಯಾಟರಿ ಖರೀದಿಸುವ ಅವಕಾಶವೂ ಇರುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಬ್ಯಾಟರಿ ರಹಿತ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಗ್ರಾಹಕರು ತಮ್ಮ ಇಷ್ಟದ ಬ್ಯಾಟರಿಯನ್ನು ಖರೀದಿಸಲು ಅವಕಾಶ ನೀಡಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಸೆಂಟ್ರಲ್ ಮೋಟರ್ ವೆಹಿಕಲ್ಸ್ ರೂಲ್ಸ್, 1989ರ ನಿಯಮ 126ರ ಅಡಿಯಲ್ಲಿ, ಎಲೆಕ್ಟ್ರಿಕ್ ವಾಹನಗಳು ಹಾಗೂ ಬ್ಯಾಟರಿಗಳ ಮೂಲಮಾದರಿಗಳನ್ನು (ರೆಗ್ಯುಲರ್ ಬ್ಯಾಟರಿ ಅಥವಾ ಬದಲಾಯಿಸಬಹುದಾದ ಬ್ಯಾಟರಿಗಳು) ಪರೀಕ್ಷಾ ಏಜೆನ್ಸಿಗಳು ಅನುಮೋದಿಸಬೇಕಾಗಿದೆ.

ಬ್ಯಾಟರಿ ರಹಿತ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಬ್ಯಾಟರಿಗಳನ್ನು ಹೊಂದಿಲ್ಲದ ವಾಹನಗಳನ್ನು ಪರೀಕ್ಷಾ ಸಂಸ್ಥೆ ಪರೀಕ್ಷಿಸಿದ ನಂತರ ಮಾರಾಟ ಮಾಡಬಹುದು ಹಾಗೂ ರಿಜಿಸ್ಟರ್ ಮಾಡಬಹುದು ಎಂದು ಸ್ಪಷ್ಟಪಡಿಸಿದೆ. ರಿಜಿಸ್ಟರ್ ಕಾರಣಕ್ಕಾಗಿ ಬ್ಯಾಟರಿ ತಯಾರಿಕೆ ಅಥವಾ ಇತರ ಯಾವುದೇ ವಿವರಗಳನ್ನು ನಿರ್ದೇಶಿಸುವ ಅಗತ್ಯವಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬ್ಯಾಟರಿ ರಹಿತ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಕೈಗಾರಿಕೆ ಇಲಾಖೆಯು ಭಾರತದಲ್ಲಿರುವ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳಿಗಾಗಿ ಫೇಮ್ -2 ಯೋಜನೆಯ ಕೊನೆ ದಿನಾಂಕವನ್ನು ವಿಸ್ತರಿಸಿದೆ. ಈ ಮೊದಲು ಫೇಮ್ -2 ಯೋಜನೆಯ ಅವಧಿಯು ಜೂನ್ 30ಕ್ಕೆ ಕೊನೆಗೊಳ್ಳುತ್ತಿತ್ತು.

ಬ್ಯಾಟರಿ ರಹಿತ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಈಗ ಈ ಅವಧಿಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳನ್ನು ಫೇಮ್ -2 ಯೋಜನೆಯಡಿಯಲ್ಲಿ ಸೇರಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬ್ಯಾಟರಿ ರಹಿತ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಈ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ಕಂಪನಿಗಳಿಗೆ ಆಯತ ಸುಂಕ, ಉತ್ಪಾದನಾ ಸುಂಕ ಹಾಗೂ ತೆರಿಗೆ ವಿನಾಯಿತಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುವುದು. ಇದರಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುತ್ತದೆ.

Most Read Articles

Kannada
English summary
Union transport ministry allows sale and registration of electric vehicles without batteries. Read in Kannada.
Story first published: Thursday, August 13, 2020, 13:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X