ಡೀಲರ್ ಬಳಿ ತಲುಪಿದ ಹೊಸ ಕೆಟಿಎಂ ಡ್ಯೂಕ್ 125 ಬೈಕ್

ಆಸ್ಟ್ರಿಯಾದ ಬೈಕ್ ತಯಾರಕ ಕಂಪನಿಯಾದ ಕೆಟಿಎಂ ತನ್ನ ಡ್ಯೂಕ್ 125 ಬೈಕನ್ನು 2018ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. 2018ರಲ್ಲಿ ಬಿಡುಗಡೆಗೊಂಡ ಡ್ಯೂಕ್ 125 ಬೈಕ್ ಕೆಟಿಎಂನ ಇಂಡಿಯಾ ಪೋರ್ಟ್ಫೋಲಿಯೊದಲ್ಲಿ ಹೆಚ್ಚು ಮಾರಾಟವಾದ ಮಾದರಿಗಳಲ್ಲಿ ಒಂದಾಗಿದೆ.

ಡೀಲರ್ ಬಳಿ ತಲುಪಿದ ಹೊಸ ಕೆಟಿಎಂ ಡ್ಯೂಕ್ 125 ಬೈಕ್

ಕೆಟಿಎಂ ಡ್ಯೂಕ್ 125 ಬೈಕ್ ಭಾರತದಲ್ಲಿ ಬಿಡುಗಡೆಗೊಂಡ ಬಳಿಕ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸಿತ್ತು. ಬಿಡುಗಡೆಗೊಂಡ ಆರಂಭದಲ್ಲಿ ಕೆಟಿಎಂ ಡ್ಯೂಕ್ 125 ಬೈಕ್ ಯುವಕರ ಮೆಚ್ಚಿನ ಆಯ್ಕೆಯಾಗಿತ್ತು. ಇದೀಗ ಹೊಸ ಡ್ಯೂಕ್ 125 ಬೈಕನ್ನು ಭಾರತದಲ್ಲಿ ಶೀಘ್ರದಲ್ಲೇ ಕೆಟಿಎಂ ಕಂಪನಿಯು ಬಿಡುಗಡೆಗೊಳಿಸಲಿದೆ. ಇದೀಗ ಹೊಸ 125 ಡ್ಯೂಕ್ ಬೈಕ್ ಭಾರತದ ಡೀಲರ್ ಶೋ ರೂಂಗಳಿಗೆ ತಲುಪಿದೆ ಎಂದು ವರದಿಗಳಾಗಿದೆ.

ಡೀಲರ್ ಬಳಿ ತಲುಪಿದ ಹೊಸ ಕೆಟಿಎಂ ಡ್ಯೂಕ್ 125 ಬೈಕ್

2021ರ ಕೆಟಿಎಂಡ್ಯೂಕ್ 125 ಹೊಸ ಫೀಚರ್ ಗಳೊಂದಿಗೆ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. 2021ರ ಕೆಟಿಎಂ ಡ್ಯೂಕ್ 125 ಬೈಕಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಕೆಟಿಎಂ ಡ್ಯೂಕ್ 125 ಬೈಕ್ ಈ ತಿಂಗಳ ಅಂತ್ಯದಲ್ಲಿ ಬಿಡುಗಡೆಯಯಾಗಲಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಡೀಲರ್ ಬಳಿ ತಲುಪಿದ ಹೊಸ ಕೆಟಿಎಂ ಡ್ಯೂಕ್ 125 ಬೈಕ್

2021ರ ಕೆಟಿಎಂ ಡ್ಯೂಕ್ 125 ಬೈಕಿನಲ್ಲಿ 124.71 ಸಿಸಿ, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 15 ಬಿಹೆಚ್‍ಪಿ ಪವರ್ ಮತ್ತು 12 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಡೀಲರ್ ಬಳಿ ತಲುಪಿದ ಹೊಸ ಕೆಟಿಎಂ ಡ್ಯೂಕ್ 125 ಬೈಕ್

2021ರ ಕೆಟಿಎಂ ಡ್ಯೂಕ್ 125 ಬೈಕಿನಲ್ಲಿ ಡ್ಯೂಕ್ 200 ಮಾದರಿಯ ನವೀಕರಿಸಿದ ಚಾಸಿಸ್ ಅನ್ನು ಅಳವಡಿಸಿಕೊಂಡಿದೆ ಎಂದು ವರದಿಯಾಗಿದೆ. ಇದು ಬೋಲ್ಟ್-ಆನ್ ರಿಯರ್ ಸಬ್-ಫ್ರೇಮ್ ಹೊಂದಿರುವ ಸ್ಟೀಲ್ ಟ್ರೆಲ್ಲಿಸ್ ಯುನಿಟ್ ಆಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಡೀಲರ್ ಬಳಿ ತಲುಪಿದ ಹೊಸ ಕೆಟಿಎಂ ಡ್ಯೂಕ್ 125 ಬೈಕ್

ಇನ್ನು ಹೊಸ ಕೆಟಿಎಂ ಡ್ಯೂಕ್ 125 ಬೈಕಿನಲ್ಲಿ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವು ಹೆಚ್ಚಾಗುವ ನಿರೀಕ್ಷೆಯಿದೆ. ಈ 2021ರ ಕೆಟಿಎಂ 125 ಡ್ಯೂಕ್ ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.

ಡೀಲರ್ ಬಳಿ ತಲುಪಿದ ಹೊಸ ಕೆಟಿಎಂ ಡ್ಯೂಕ್ 125 ಬೈಕ್

ಹೊಸ ಕೆಟಿಎಂ ಡ್ಯೂಕ್ 125 ಪ್ರೀಮಿಯಂ ಸ್ಟ್ರೀಟ್ ಫೈಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಇನವರ್ಡಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿರಲಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಡೀಲರ್ ಬಳಿ ತಲುಪಿದ ಹೊಸ ಕೆಟಿಎಂ ಡ್ಯೂಕ್ 125 ಬೈಕ್

2021ರ ಕೆಟಿಎಂ ಡ್ಯೂಕ್ 125 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಡೀಲರ್ ಬಳಿ ತಲುಪಿದ ಹೊಸ ಕೆಟಿಎಂ ಡ್ಯೂಕ್ 125 ಬೈಕ್

2021ರ ಕೆಟಿಎಂ ಡ್ಯೂಕ್ 125 ಬೈಕ್ ಹಿರಿಯ ಡ್ಯೂಕ್ 200 ಮಾದರಿಯಿಂದ ಎಲ್ಸಿಡಿ ಡಿಸ್ ಪ್ಲೇಯನ್ನು ಎರವಲು ಪಡೆಯಲಿದೆ. 2021ರ ಕೆಟಿಎಂ 125 ಡ್ಯೂಕ್ ಬೈಕ್ ಉತ್ತಮ ಮೈಲೇಜ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಹೊಸ 2021ರ ಕೆಟಿಎಂ 125 ಡ್ಯೂಕ್ ಬೈಕ್ ಇದೇ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Image Courtesy: MRD Vlogs

Most Read Articles

Kannada
Read more on ಕೆಟಿಎಂ ktm
English summary
2021 KTM Duke 125 Arrives At Dealer Showroom. Read In Kannada.
Story first published: Friday, December 4, 2020, 20:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X