ಹೊಸ ಕೆಟಿಎಂ ಡ್ಯೂಕ್ 250 ಬೈಕಿನ ವಿತರಣೆ ಆರಂಭ

ಕೆಟಿಎಂ ತನ್ನ 2020ರ ಡ್ಯೂಕ್ 250 ಬೈಕನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಕೆಟಿಎಂ ಕಂಪನಿಯು ಪ್ರಮಖ ನಗರಗಳಲ್ಲಿ ಈ ಹೊಸ ಡ್ಯೂಕ್ 250 ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ.

ಹೊಸ ಕೆಟಿಎಂ ಡ್ಯೂಕ್ 250 ಬೈಕಿನ ವಿತರಣೆ ಆರಂಭ

ಬಜಾಜ್ ಕಂಪನಿಯು 2020ರ ಕೆಟಿಎಂ ಡ್ಯೂಕ್ 250 ಬೈಕಿಗಾಗಿ ಡೀಲರ್ ಗಳು ಮತ್ತು ಆನ್‌ಲೈನ್ ಪೋರ್ಟಲ್ ಮೂಲಕವೂ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಹಿಂದಿನ ಕೆಟಿಎಂ 250 ಡ್ಯೂಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.05 ಲಕ್ಷಗಳಾಗಿದೆ. ಆದರೆ ಹೊಸ ಅಪ್​ಡೇಟ್​ಗಳೊಂದಿಗೆ ಇತ್ತೀಚೆಗೆ ಬಿಡುಗಡೆಯಾದ ಬಿಎಸ್-6 ಕೆಟಿಎಂ 250 ಡ್ಯೂಕ್ ಬೈಕಿನ ಬೆಲೆಯು ಸುಮಾರು ರೂ.4,000 ಗಳವರೆಗೆ ಹೆಚ್ಚಾಗಿದೆ. ಈ ಹೊಸ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.09 ಲಕ್ಷಗಳಾಗಿದೆ.

ಹೊಸ ಕೆಟಿಎಂ ಡ್ಯೂಕ್ 250 ಬೈಕಿನ ವಿತರಣೆ ಆರಂಭ

ಈ ಹೊಸ ಕೆಟಿಎಂ ಡ್ಯೂಕ್ 250 ಬೈಕಿನಲ್ಲಿ 390 ಡ್ಯೂಕ್‌ನಿಂದ ಎರವಲು ಪಡೆಯಲಾದ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಸೂಪರ್‌ಮೊಟೊ ಮೋಡ್ ಅನ್ನು ಹೊಂದಿದೆ. ಇತರ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಹೊಸ ಕೆಟಿಎಂ ಡ್ಯೂಕ್ 250 ಬೈಕಿನ ವಿತರಣೆ ಆರಂಭ

ಹೊಸ ಬೈಕಿನಲ್ಲಿ ಸ್ಟ್ಯಾಂಡರ್ಡ್ ಬಣ್ಣದ ಆಯ್ಕೆಯೊಂದಿಗೆ ಡಾರ್ಕ್ ಗಾಲವಾನೊ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣಗಳ ಆಯ್ಕೆ ನೀಡಲಾಗಿದೆ. ಹೊಸದಾದ ಬಾಡಿ ಗ್ರಾಫಿಕ್ಸ್ ವಿನ್ಯಾಸವು ಹೊಸ ಬೈಕಿಗೆ ಮತ್ತಷ್ಟು ಸ್ಪೋರ್ಟಿ ಲುಕ್ ಅನ್ನು ನೀಡಿದೆ.

ಹೊಸ ಕೆಟಿಎಂ ಡ್ಯೂಕ್ 250 ಬೈಕಿನ ವಿತರಣೆ ಆರಂಭ

ಕೆ‍ಟಿಎಂ 250 ಡ್ಯೂಕ್ ಬೈಕ್ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,000 ಆ‍‍ರ್‍‍ಪಿಎಂನಲ್ಲಿ 30 ಬಿಎಚ್‍ಪಿ ಪವರ್ ಮತ್ತು 7,500 ಆರ್‍‍ಪಿಎಂನಲ್ಲಿ 24 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಸ್ಲಿಪ್ ಅಸಿಸ್ಟೆಡ್ ಕ್ಲಚ್‍ ಜೋಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಕೆಟಿಎಂ ಡ್ಯೂಕ್ 250 ಬೈಕಿನ ವಿತರಣೆ ಆರಂಭ

ಇನ್ನು ಈ ಕೆ‍ಟಿಎಂ 250 ಡ್ಯೂಕ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಅಪ್‍ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಹೊಂದಿದೆ.

ಹೊಸ ಕೆಟಿಎಂ ಡ್ಯೂಕ್ 250 ಬೈಕಿನ ವಿತರಣೆ ಆರಂಭ

ಬೈಕಿ‍ನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಬ್ರೇಕ್‍‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಯು‍‍ನಿ‍ಟ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್

ಹೊಸ ಕೆಟಿಎಂ ಡ್ಯೂಕ್ 250 ಬೈಕಿನ ವಿತರಣೆ ಆರಂಭ

ಇದರೊಂದಿಗೆ ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಅಳವಡಿಸಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಹೊಸ ಕೆಟಿಎಂ 250 ಡ್ಯೂಕ್ ಭಾರತದಲ್ಲಿ ಯಮಹಾ ಎಫ್‌ಜೆಡ್ಎಸ್ 25 ಮತ್ತು ಸುಜುಕಿ ಜಿಕ್ಸರ್ 250 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಹೊಸ ಕೆಟಿಎಂ ಡ್ಯೂಕ್ 250 ಬೈಕಿನ ವಿತರಣೆ ಆರಂಭ

ಪ್ರತಿಸ್ಪರ್ಧಿಗಳ ಬೆಲೆಯನ್ನು ಹೋಲಿಸಿದರೆ ಕೆಟಿಎಂ 250 ಡ್ಯೂಕ್ ದುಬಾರಿಯಾಗಿದೆ. ಆದರೆ ಕೆಟಿಎಂ 250 ಡ್ಯೂಕ್ ಬೈಕ್ ಪ್ರತಿಸ್ಪರ್ಧಿ ಬೈಕುಗಳಿಗಿಂತ ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಕೆಟಿಎಂ 250 ಡ್ಯೂಕ್ ಬೈಕ್ 169 ಕೆ.ಜಿ ತೂಕ ವನ್ನು ಹೊಂದಿದೆ.

Most Read Articles

Kannada
Read more on ಕೆಟಿಎಂ ktm
English summary
Updated KTM Duke 250 Deliveries Start Details. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X