ಲಾಕ್‌ಡೌನ್ ಸಡಿಲಿಕೆ: ಡೀಲರ್‌ಶಿಪ್‌ಗಳನ್ನು ಪುನರಾರಂಭಿಸಿದ ಪಿಯಾಜಿಯೊ

ಪಿಯಾಜಿಯೊ ಕಂಪನಿಯು ಕರ್ನಾಟಕದಲ್ಲಿರುವ ತನ್ನ ವೆಸ್ಪಾ ಹಾಗೂ ಎಪ್ರಿಲಿಯಾ ಶೋ ರೂಂ ಹಾಗೂ ಸರ್ವೀಸ್ ಸೆಂಟರ್‌ಗಳನ್ನು ತೆರೆದಿದೆ. ಕಂಪನಿಯು ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು, ಬಿಜಾಪುರ, ದಾವಣಗೆರೆ, ಶಿವಮೊಗ್ಗ, ಉಡುಪಿ ಮುಂತಾದ ನಗರಗಳಲ್ಲಿರುವ ವೆಸ್ಪಾ ಹಾಗೂ ಎಪ್ರಿಲಿಯಾದ ಶೋ ರೂಂಗಳನ್ನು ತೆರೆದಿದೆ.

ಲಾಕ್‌ಡೌನ್ ಸಡಿಲಿಕೆ: ಡೀಲರ್‌ಶಿಪ್‌ಗಳನ್ನು ಪುನರಾರಂಭಿಸಿದ ಪಿಯಾಜಿಯೊ

ಸ್ಥಳೀಯ ಆಡಳಿತದಿಂದ ಅನುಮತಿ ಪಡೆದ ನಂತರ ಶೋ ರೂಂಗಳನ್ನು ತೆರೆಯಲಾಗಿದ್ದು, ಕೋವಿಡ್ -19 ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕಂಪನಿ ಹೇಳಿದೆ. ಇದರಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್‌ ಬಳಕೆ ಹಾಗೂ ಆರೋಗ್ಯ ಸೇತು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.

ಲಾಕ್‌ಡೌನ್ ಸಡಿಲಿಕೆ: ಡೀಲರ್‌ಶಿಪ್‌ಗಳನ್ನು ಪುನರಾರಂಭಿಸಿದ ಪಿಯಾಜಿಯೊ

ಎಲ್ಲಾ ಡೀಲರ್‌ಶಿಪ್‌ಗಳನ್ನು ಸುರಕ್ಷಿತ ವಾತಾವರಣದಲ್ಲಿ ನಡೆಸಲಾಗುವುದೆಂದು ಕಂಪನಿ ಹೇಳಿದೆ. ಕಾಂಟ್ಯಾಕ್ಟ್ ಲೆಸ್ ಗ್ರೀಟಿಂಗ್, ರಕ್ಷಣಾತ್ಮಕ ಗೇರ್ ಧರಿಸುವುದು, ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಬಗ್ಗೆ ಸಲಹೆ ನೀಡಲು ಪ್ರತಿ ಡೀಲರ್‌ಶಿಪ್‌ನಲ್ಲಿ ತಂಡವನ್ನು ನಿಯೋಜಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಸಡಿಲಿಕೆ: ಡೀಲರ್‌ಶಿಪ್‌ಗಳನ್ನು ಪುನರಾರಂಭಿಸಿದ ಪಿಯಾಜಿಯೊ

ಡೀಲರ್‌ಗಳ ಬಳಿ ಬರುವ ಮೊದಲು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವಂತೆ ಗ್ರಾಹಕರಿಗೆ ಸೂಚಿಸಿದೆ. ಇದರಿಂದಾಗಿ ಶೋರೂಂಗಳಲ್ಲಿ ಜನಜಂಗುಳಿ ಉಂಟಾಗುವುದನ್ನು ತಪ್ಪಿಸಬಹುದು. ಪಿಯಾಜಿಯೊ ಮಹಾರಾಷ್ಟ್ರದ ಬಾರಾಮತಿಯಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ವೆಸ್ಪಾ ಹಾಗೂ ಎಪ್ರಿಲಿಯಾ ಸ್ಕೂಟರ್‌ಗಳ ಉತ್ಪಾದನೆಯನ್ನು ಆರಂಭಿಸಿದೆ.

ಲಾಕ್‌ಡೌನ್ ಸಡಿಲಿಕೆ: ಡೀಲರ್‌ಶಿಪ್‌ಗಳನ್ನು ಪುನರಾರಂಭಿಸಿದ ಪಿಯಾಜಿಯೊ

ಪಿಯಾಜಿಯೊ ವೆಸ್ಪಾದ ಎರಡು ಬಿಎಸ್ 6 ಸ್ಕೂಟರ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ವೆಸ್ಪಾ ವಿಎಕ್ಸ್‌ಎಲ್ 149 ಹಾಗೂ ವೆಸ್ಪಾ ಎಸ್‌ಎಕ್ಸ್‌ಎಲ್ 149 ಸ್ಕೂಟರ್‌ಗಳ ಬಿಎಸ್ 6 ಮಾದರಿಗಳನ್ನು ಬಿಡುಗಡೆಗೊಳಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಸಡಿಲಿಕೆ: ಡೀಲರ್‌ಶಿಪ್‌ಗಳನ್ನು ಪುನರಾರಂಭಿಸಿದ ಪಿಯಾಜಿಯೊ

ಇದರ ಜೊತೆಗೆ ವೆಸ್ಪಾ ಲಲಿತ 149 ಬಿಎಸ್ 6 ಮಾದರಿಯನ್ನು ಬಿಡುಗಡೆಗೊಳಿಸಲು ಕಂಪನಿಯು ಸಿದ್ಧತೆ ನಡೆಸಿದೆ. ಈ ಸ್ಕೂಟರ್ ಸಿಂಗಲ್ ಸಿಲಿಂಡರ್ 149 ಸಿಸಿ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಹೊಂದಿದ್ದು 10.3 ಬಿಎಚ್‌ಪಿ ಪವರ್ ಹಾಗೂ 10.6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಲಾಕ್‌ಡೌನ್ ಸಡಿಲಿಕೆ: ಡೀಲರ್‌ಶಿಪ್‌ಗಳನ್ನು ಪುನರಾರಂಭಿಸಿದ ಪಿಯಾಜಿಯೊ

ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಪಿಯಾಜಿಯೊ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಲಾಗಿತ್ತು. ಈ ವರ್ಷದ ಜೂನ್‌ ತಿಂಗಳಿನಲ್ಲಿ ಈ ಸ್ಕೂಟರ್ ಅನ್ನು ಬಿಡುಗಡೆಗೊಳಿಸುವುದಾಗಿ ಕಂಪನಿ ಘೋಷಿಸಿತ್ತು. ಕರೋನಾ ವೈರಸ್‌ನಿಂದ ಉಂಟಾಗಿರುವ ಬಿಕ್ಕಟ್ಟಿನ ಕಾರಣದಿಂದಾಗಿ ಈ ಸ್ಕೂಟರ್ ಬಿಡುಗಡೆಯನ್ನು ಮುಂದೂಡುವ ಸಾಧ್ಯತೆಗಳಿವೆ.

Most Read Articles

Kannada
English summary
Vespa Aprilia reopens dealerships in Karnataka. Read in Kannada.
Story first published: Wednesday, May 20, 2020, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X