ದೀಪಾವಳಿ ಆಫರ್: ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

ಪಿಯಾಜಿಯೊ ಕಂಪನಿಯು ತನ್ನ ಜನಪ್ರಿಯ ದ್ವಿಚಕ್ರ ವಾಹನ ಬ್ರಾಂಡ್ ಮಾದರಿಗಳಾದ ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖರೀದಿ ಮೇಲೆ ರೂ.11 ಸಾವಿರ ತನಕ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳು ಸ್ಕೂಟರ್ ಮಾದರಿಗಳ ಮೇಲೆ ನಿರ್ಧಾರವಾಗುತ್ತವೆ.

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

ವೆಸ್ಪಾ ನಿರ್ಮಾಣದ ವಿಎಕ್ಸ್ಎಲ್ ಮತ್ತು ಎಸ್ಎಕ್ಸ್ಎಲ್ ಹಾಗೂ ಎಪ್ರಿಲಿಯಾ ಕಂಪನಿಯ ಎಸ್ಆರ್ 160, ಎಸ್ಆರ್ 125 ಮತ್ತು ಸ್ಟ್ರೋಮ್ 125 ಸ್ಕೂಟರ್ ಮಾದರಿಗಳ ಖರೀದಿಯ ಮೇಲೆ ಡಿಸ್ಕೌಂಟ್ ಲಭ್ಯವಿದ್ದು, ಹೊಸ ಡಿಸ್ಕೌಂಟ್ ಆಫರ್‌ನಲ್ಲಿ ಇನ್ಸುರೆನ್ಸ್ ಮತ್ತು ಆಕ್ಸೆಸರಿಸ್‌ಗಳ ಮೇಲೆ ಆಫರ್ ನೀಡಲಾಗುತ್ತಿದೆ. ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ಹೊಸ ಆಫರ್‌ಗಳು ದೀಪಾವಳಿ ತನಕ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಲಭ್ಯವಾಗಲಿವೆ.

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

ಕರೋನಾ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಚೇತರಿಸಿಕೊಳ್ಳುತ್ತಿದ್ದು, ಹಲವಾರು ಆಟೋ ಕಂಪನಿಗಳ ಹೊಸ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ.

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

2020ರ ಸೆಪ್ಟೆಂಬರ್ ಅವಧಿಯಲ್ಲಿನ ವಿವಿಧ ಕಂಪನಿಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.40 ರಷ್ಟು ಬೆಳವಣಿಗೆಯು ಕಂಡುಬಂದಿದ್ದು, ಸಂಕಷ್ಟದಲ್ಲೂ ವಾಹನ ಮಾರಾಟವು ಚೇತರಿಸಿಕೊಂಡಿರುವುದು ಆಟೋ ಕಂಪನಿಗಳಲ್ಲಿ ಮತ್ತಷ್ಟು ಬಲತುಂಬಿದೆ.

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

ಈ ಹಿನ್ನಲೆಯಲ್ಲಿ ದೀಪಾವಳಿ ಸಂಭ್ರಮಾಚರಣೆಗೆ ಹೊತ್ತಿಗೆ ಮತ್ತಷ್ಟು ಹೊಸ ವಾಹನಗಳನ್ನು ಮಾರಾಟಗೊಳಿಸುವ ನೀರಿಕ್ಷೆಗಳಿದ್ದು, ವಿವಿಧ ಆಫರ್‌ಗಳ ಮೂಲಕ ಆಟೋ ಕಂಪನಿಗಳು ಗರಿಷ್ಠ ಪ್ರಮಾಣದ ವಾಹನ ಮಾರಾಟ ಮಾಡುವ ಗುರಿಹೊಂದಿವೆ. ಪಿಯಾಜಿಯೊ ಕೂಡಾ ಇದೇ ಆಧಾರದ ಮೇಲೆ ವಿವಿಧ ಸ್ಕೂಟರ್‌ಗಳ ಡಿಸ್ಕೌಂಟ್ ನೀಡುತ್ತಿದ್ದು, ಹೊಸ ಆಫರ್‌ಗಳು ನವೆಂಬರ್ 16ರ ತನಕ ಅನ್ವಯವಾಗಲಿವೆ.

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್‌ಗಳ ಖರೀದಿ ಮೇಲೆ ಗರಿಷ್ಠ ರೂ. 7 ಸಾವಿರದಷ್ಟು ಇನ್ಸುರೆನ್ಸ್ ಮತ್ತು ರೂ. 4 ಸಾವಿರದಷ್ಟು ಆಕ್ಸೆಸರಿಸ್ ಲಭ್ಯವಾಗಲಿದ್ದು, ಇದರ ಜೊತೆ ಐದು ವರ್ಷಗಳ ಉಚಿತ ವಾರಂಟಿಯೊಂದಿಗೆ ರೋಡ್ ಸೈಡ್ ಅಸಿಸ್ಟ್ ಸೌಲಭ್ಯ ನೀಡಲಿದೆ.

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

ಇನ್ನು ವೆಸ್ಪಾ ಕಂಪನಿಯು ಬಿಡುಗಡೆ ಮಾಡಿರುವ ಹೊಸ ರೇಸಿಂಗ್ ಸಿಕ್ಸ್ಟಿ ಸ್ಪೆಷಲ್ ಎಡಿಷನ್ ಪ್ರಮುಖ ಆಕರ್ಷಣೆಯಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 125ಸಿಸಿ ಮತ್ತು 150 ಸಿಸಿ ಮಾದರಿಗಳಲ್ಲಿ ಖರೀದಿ ಮಾಡಬಹುದಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

ಹೊಸ ಸ್ಕೂಟರ್ ಬೆಲೆಯನ್ನು ಎಂಜಿನ್ ಆಯ್ಕೆಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.20 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.32 ಲಕ್ಷ ಬೆಲೆ ಹೊಂದಿದೆ.

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

ಸ್ಪೆಷಲ್ ಎಡಿಷನ್ ರೇಸಿಂಗ್ ಸಿಕ್ಸ್ಟಿ ಸ್ಕೂಟರ್ ಮಾದರಿಯು ವೆಸ್ಪಾ ಎಸ್ಎಲ್ಎಕ್ಸ್ 125 ಮತ್ತು ಎಸ್ಎಲ್ಎಕ್ಸ್ 150 ಸ್ಕೂಟರ್ ಮಾದರಿಯ ವಿನ್ಯಾಸವನ್ನು ಆಧರಿಸಿದ್ದು, ಹೊಸ ಸ್ಕೂಟರ್‌ಗಳನ್ನು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿತ್ತು.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ವೆಸ್ಪಾ ಮತ್ತು ಎಪ್ರಿಲಿಯಾ ಸ್ಕೂಟರ್ ಖದೀದಿ ಮೇಲೆ ಗರಿಷ್ಠ ಉಳಿತಾಯ

ಹೊಸ ರೇಸಿಂಗ್ ಸಿಕ್ಸ್ಟಿ ಸ್ಕೂಟರ್ ಮಾದರಿಯು 1960ರ ಅವಧಿಯಲ್ಲಿನ ಮೊನಾಕೊ ಮತ್ತು ಮೊಂಜಾ ಕ್ಲಾಸಿಕ್ ಸ್ಕೂಟರ್ ಮಾದರಿಗಳ ವಿನ್ಯಾಸಗಳ ಪ್ರೇರಣೆ ಹೊಂದಿದ್ದು, ಪ್ರೀಮಿಯಂ ಫೀಚರ್ಸ್‌ನೊಂದಿಗೆ ಸ್ಪೋಟಿ ವಿನ್ಯಾಸವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

Most Read Articles

Kannada
English summary
Vespa & Aprilia Scooter Discounts For October 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X