ಆಟೋ ಎಕ್ಸ್‌ಪೋ 2020: ಎಲೆಟ್ರಿಕಾ ಸ್ಕೂಟರ್ ಅನಾವರಣಗೊಳಿಸಿದ ವೆಸ್ಪಾ

ವೆಸ್ಪಾ ಕಂಪನಿಯು ತನ್ನ ಎಲೆಟ್ರಿಕಾ ಸ್ಕೂಟರ್ ಅನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವೆಸ್ಪಾ ಕಂಪನಿಯು ಮೊದಲ ಬಾರಿಗೆ 2017ರ ಇಐಸಿಎಂಎ ದಲ್ಲಿ ಅನಾವರಣಗೊಳಿಸಿತ್ತು.

ಆಟೋ ಎಕ್ಸ್‌ಪೋ 2020: ಎಲೆಟ್ರಿಕಾ ಸ್ಕೂಟರ್ ಅನಾವರಣಗೊಳಿಸಿದ ವೆಸ್ಪಾ

ಇಟಲಿ ಮೂಲದ ಪಿಯಾಜಿಯೊ ಕಂಪನಿಯ ಒಡೆತನದ ವೆಸ್ಪಾ ಎಲೆಟ್ರಿಕಾ ಸ್ಕೂಟರ್ ಅನ್ನು ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಈ ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಭಾರತದಲ್ಲಿ ಮಾರಾಟವನ್ನು ಆರಂಭಿಸುವ ಸಾಧ್ಯತೆಗಳಿವೆ. ಪಿಯಾಜಿಯೊ ಕಂಪನಿಯು ವೆಸ್ಪಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶವನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಎಲೆಟ್ರಿಕಾ ಸ್ಕೂಟರ್ ಅನಾವರಣಗೊಳಿಸಿದ ವೆಸ್ಪಾ

ವೆಸ್ಪಾ ಎಲೆಟ್ರಿಕಾ ನಿಯೊ-ರೆಟ್ರೊ ಸ್ಕೂಟರ್ ಆಗಿದ್ದು, ನೋಡಿದ ತಕ್ಷಣ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನೋಡಿದಂತಾಗುತ್ತದೆ. ಎಲೆಟ್ರಿಕಾ ಸ್ಕೂಟರ್ ರೌಂಡ್ ಹೆಡ್‌ಲ್ಯಾಂಪ್, ಕರ್ವಿ ಫ್ರಂಟ್ ಏಪ್ರನ್, ಮುಂಭಾಗದಲ್ಲಿ ಕಾಂಟ್ರಾಸ್ಟ್ ಕಲರ್ ಏರ್ ವೆಂಟ್‌ ಹಾಗೂ ಏಪ್ರನ್ ಮೌಂಟೆಡ್ ಇಂಡಿಕೇಟರ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಎಲೆಟ್ರಿಕಾ ಸ್ಕೂಟರ್ ಅನಾವರಣಗೊಳಿಸಿದ ವೆಸ್ಪಾ

ಸೈಡ್ ಪ್ಯಾನಲ್‌ಗಳು ಕ್ಲೀನ್ ಡಿಸೈನ್ ಹೊಂದಿದ್ದು, ಹಿಂಭಾಗದಲ್ಲಿ ಎಲ್ಇಡಿ ಟೇಲ್ ಲೈಟ್‍‍ಗಳಿವೆ. ಎಲೆಟ್ರಿಕಾ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಬಣ್ಣದ ಹ್ಯಾಂಡಲ್‍‍ಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಎಲೆಟ್ರಿಕಾ ಸ್ಕೂಟರ್ ಅನಾವರಣಗೊಳಿಸಿದ ವೆಸ್ಪಾ

ಈ ಎಲೆಕ್ಟ್ರಿಕ್ ಸ್ಕೂಟರಿನ ಸ್ಪೀಡ್, ಉಳಿದಿರುವ ದೂರ, ಬ್ಯಾಟರಿಯಲ್ಲಿರುವ ಚಾರ್ಜ್ ಮುಂತಾದ ಮಾಹಿತಿಗಳನ್ನು ತೋರಿಸಲು 4.3-ಇಂಚಿನ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ.

ಆಟೋ ಎಕ್ಸ್‌ಪೋ 2020: ಎಲೆಟ್ರಿಕಾ ಸ್ಕೂಟರ್ ಅನಾವರಣಗೊಳಿಸಿದ ವೆಸ್ಪಾ

ಈ ಕಂಸೋಲ್ ಮ್ಯೂಸಿಕ್, ಟೆಲಿಫೋನ್, ವಾಯ್ಸ್ ಕಂಟ್ರೋಲ್ ಸಿಸ್ಟಂಗಳಿಗೆ ಸ್ಮಾರ್ಟ್‍‍ಫೋನ್ ಮೂಲಕ ಸಂಪರ್ಕ ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ರಿವರ್ಸ್ ಮೋಡ್ ಸಹ ನೀಡಲಾಗಿದೆ.

ಆಟೋ ಎಕ್ಸ್‌ಪೋ 2020: ಎಲೆಟ್ರಿಕಾ ಸ್ಕೂಟರ್ ಅನಾವರಣಗೊಳಿಸಿದ ವೆಸ್ಪಾ

ವೆಸ್ಪಾ ಎಲೆಟ್ರಿಕಾ ಸ್ಕೂಟರಿನಲ್ಲಿ 4 ಕಿ.ವ್ಯಾನ ಮೋಟರ್‌ ಅಳವಡಿಸಲಾಗಿದ್ದು, ಒಂದು ಬಾರಿ ಪೂರ್ತಿಯಾಗಿ ಚಾರ್ಜ್‌ ಆದ ನಂತರ 100 ಕಿ.ಮೀವರೆಗೂ ಚಲಿಸುತ್ತದೆ. ಎಲೆಟ್ರಿಕಾ ಸ್ಕೂಟರ್ ಅನ್ನು ನಾಲ್ಕು ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದೆಂದು ವೆಸ್ಪಾ ಕಂಪನಿ ಹೇಳಿದೆ.

ಆಟೋ ಎಕ್ಸ್‌ಪೋ 2020: ಎಲೆಟ್ರಿಕಾ ಸ್ಕೂಟರ್ ಅನಾವರಣಗೊಳಿಸಿದ ವೆಸ್ಪಾ

ಈ ಎಲೆಟ್ರಿಕಾ ಸ್ಕೂಟರಿನಲ್ಲಿ ಪವರ್ ಹಾಗೂ ಇಕೊ ಎಂಬ ಎರಡು ರೈಡಿಂಗ್ ಮೋಡ್‍‍ಗಳಿವೆ. ಈ ಮೋಡ್‍‍ಗಳು ರೈಡಿಂಗ್ ರೇಂಜ್ ಅನ್ನು ಅತ್ಯುತ್ತಮವಾಗಿಸಲು ಪವರ್ ಅಡ್ಜಸ್ಟ್ ಮಾಡುತ್ತವೆ.

Most Read Articles

Kannada
English summary
Vespa Elettrica e-Scooter Displayed; Piaggio Evaluates EV For India. Read in Kannada.
Story first published: Thursday, February 6, 2020, 13:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X