ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡ ವೆಸ್ಪಾ ಬಿಎಸ್-6 ನೊಟ್ಟೆ 125

ಪ್ರೀಮಿಯಂ ಸ್ಕೂಟರ್ ಉತ್ಪಾದನಾ ಕಂಪನಿಯಾದ ವೆಸ್ಪಾ ತನ್ನ ಬಹುತೇಕ ಸ್ಕೂಟರ್ ಮಾದರಿಗಳನ್ನು ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿ ಬಿಡುಗಡೆ ಮಾಡಿದ್ದು, ಇದೀಗ ನೊಟ್ಟೆ 125 ಮಾದರಿಯನ್ನು ಸಹ ಹೊಸ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡ ವೆಸ್ಪಾ ಬಿಎಸ್-6 ನೊಟ್ಟೆ 125

ದೇಶಾದ್ಯಂತ ಏಪ್ರಿಲ್ 1ರಿಂದಲೇ ಬಿಎಸ್-6 ಎಮಿಷನ್ ಕಡ್ಡಾಯವಾಗಿ ಜಾರಿಗೆ ಬಂದಿದ್ದು, ವೆಸ್ಪಾ ಸೇರಿದಂತೆ ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ತಮ್ಮ ಜನಪ್ರಿಯ ವಾಹನ ಮಾದರಿಗಳನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಿವೆ. ಇದೀಗ ಬಿಡುಗಡೆಯಾಗಿರುವ ನೊಟ್ಟೆ 125 ಸ್ಕೂಟರ್ ಸಹ ಹೊಸ ಎಂಜಿನ್ ಪಡೆದುಕೊಂಡಿದ್ದು, ಹೊಸ ಎಂಜಿನ್ ಜೋಡಣೆ ನಂತರ ಸ್ಕೂಟರ್ ಬೆಲೆಯಲ್ಲಿ ಭಾರೀ ಬೆಲೆ ಏರಿಕೆಯಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡ ವೆಸ್ಪಾ ಬಿಎಸ್-6 ನೊಟ್ಟೆ 125

ಬಿಎಸ್-6 ಎಂಜಿನ್ ಜೋಡಣೆ ನಂತರ ನೊಟ್ಟೆ 125 ಸ್ಕೂಟರ್ ಬೆಲೆಯನ್ನ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.91,864 ಗಳಿಗೆ ನಿಗದಿಪಡಿಸಲಾಗಿದ್ದು, ಬಿಎಸ್-4 ಮಾದರಿಗಿಂತ ಇದು ರೂ. 17 ಸಾವಿರ ಹೆಚ್ಚುವರಿಯಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡ ವೆಸ್ಪಾ ಬಿಎಸ್-6 ನೊಟ್ಟೆ 125

ಹೊಸ ಎಮಿಷನ್ ನಂತರ ಬಹುತೇಕ ಸ್ಕೂಟರ್ ಮತ್ತು ಬೈಕ್ ಬೆಲೆಯಲ್ಲಿ ರೂ.5 ಸಾವಿರದಿಂದ ರೂ.12 ಸಾವಿರ ತನಕ ಹೆಚ್ಚುವಾಗಿದ್ದು, ನೊಟ್ಟೆ 125 ಸ್ಕೂಟರ್ ಮಾತ್ರ ಬರೋಬ್ಬರಿ ರೂ. 17 ಸಾವಿರದಷ್ಟು ದುಬಾರಿಯಾಗಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡ ವೆಸ್ಪಾ ಬಿಎಸ್-6 ನೊಟ್ಟೆ 125

ದುಬಾರಿಯಾಗಿರುವ ರೂ.17 ಸಾವಿರ ಎಕ್ಸ್‌ಶೋರೂಂ ಬೆಲೆಯಾಗಿದ್ದು, ಆನ್‌ರೋಡ್ ಬೆಲೆಯು ಎಕ್ಸ್‌ಶೋರೂಂ ಬೆಲೆಗಿಂತ ಶೇ.25 ರಷ್ಟು ಹೆಚ್ಚುವರಿ ಬೆಲೆ ಜೋಡಣೆಯಾಗುತ್ತದೆ. ಇದು ಪ್ರೀಮಿಯಂ ಸ್ಕೂಟರ್ ಖರೀದಿದಾರರಿಗೆ ಮತ್ತಷ್ಟು ಹೊರೆಯಾಗಲಿದ್ದು, ವೆಸ್ಪಾ ನಿರ್ಮಾಣದ ಬಹುತೇಕ ಸ್ಕೂಟರ್‌ಗಳು ಹೊಸ ಎಂಜಿನ್ ಜೋಡಣೆ ನಂತರ ಮತ್ತಷ್ಟು ದುಬಾರಿಯಾಗಿವೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡ ವೆಸ್ಪಾ ಬಿಎಸ್-6 ನೊಟ್ಟೆ 125

ವೆಸ್ಪಾ ಕಂಪನಿಯು ಸದ್ಯ ಭಾರತದಲ್ಲಿ ವಿಎಕ್ಸ್ಎಲ್ 150(ಎಕ್ಸ್‌ಶೋರೂಂ ಪ್ರಕಾರ ರೂ.1.21 ಲಕ್ಷ), ನೊಟ್ಟೆ 125, ವಿಎಕ್ಸ್ಎಲ್ 125(ರೂ. 1.09 ಲಕ್ಷ ಎಕ್ಸ್‌ಶೋರೂಂ), ಎಲ್ಎಕ್ಸ್ 125(ರೂ. 95,443 ಎಕ್ಸ್‌ಶೋರೂಂ), ಎಸ್ಎಕ್ಸ್ಎಲ್ 125(ರೂ. 1.12 ಲಕ್ಷ ಎಕ್ಸ್‌ಶೋರೂಂ), ಎಲೆಗೆಂಟ್ 150 (ರೂ.1.32 ಲಕ್ಷ ಎಕ್ಸ್‌ಶೋರೂಂ), ಎಸ್ಎಕ್ಸ್ಎಲ್ 150(ರೂ. 1.25 ಲಕ್ಷ ಎಕ್ಸ್‌ಶೋರೂಂ), ಜೆಡ್ಎಕ್ಸ್ 125(ರೂ. 1 ಲಕ್ಷ ಎಕ್ಸ್‌ಶೋರೂಂ), ಎಲೆಗೆಂಟ್ 125 (ರೂ. 1.22 ಲಕ್ಷ ಎಕ್ಸ್‌ಶೋರೂಂ) ಮತ್ತು ಅರ್ಬನ್ ಕ್ಲಬ್ (ರೂ. 91,864 ಎಕ್ಸ್‌ಶೋರೂಂ) ಸರಣಿ ಮಾರಾಟ ಹೊಂದಿದೆ.

ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡ ವೆಸ್ಪಾ ಬಿಎಸ್-6 ನೊಟ್ಟೆ 125

ಇದರಲ್ಲಿ ಅರ್ಬನ್ ಕ್ಲಬ್ ಮತ್ತು ನೊಟ್ಟೆ 125 ಮಾದರಿಗಳು ಬಹುತೇಕ ಒಂದೇ ಮಾದರಿಯ ಸ್ಕೂಟರ್ ಆವೃತ್ತಿಗಳಾಗಿದ್ದು, ನೊಟ್ಟೆ 125 ಮಾದರಿಯ ಸಂಪೂರ್ಣವಾಗಿ ಬ್ಲ್ಯಾಕ್ ಎಡಿಷನ್ ಆಗಿ ಮಾರಾಟಗೊಳ್ಳುತ್ತದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ದುಬಾರಿ ಬೆಲೆಯೊಂದಿಗೆ ಬಿಡುಗಡೆಗೊಂಡ ವೆಸ್ಪಾ ಬಿಎಸ್-6 ನೊಟ್ಟೆ 125

ಈ ಸ್ಕೂಟರ್‌ನಲ್ಲಿ 125ಸಿಸಿ ಎಂಜಿನ್ ಹೊಂದಿದ್ದು, 9.92-ಬಿಎಚ್‌ಪಿ ಮತ್ತು 9.6-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಬೆಲೆಗೆ ತಕ್ಕಂತೆ ಹೊಸ ಸ್ಕೂಟರ್‌ನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಐಷಾರಾಮಿ ರೈಡಿಂಗ್ ಅನುಭವಕ್ಕೆ ಹೊಸ ಸ್ಕೂಟರ್ ಆಯ್ಕೆ ಅತ್ಯುತ್ತಮವಾಗಲಿದೆ.

Most Read Articles

Kannada
Read more on ವೆಸ್ಪಾ vespa
English summary
Vespa Notte 125 BS6 Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X