ಬೈಕ್ ಸವಾರರೇ ಗಮನಿಸಿ - ಕಡ್ಡಾಯವಾಗಲಿದೆ ಈ ಹೊಸ ನಿಯಮ..!

ಕೇಂದ್ರ ಸರ್ಕಾರವು ದ್ವಿ ಚಕ್ರ ವಾಹನಗಳಲ್ಲಿ ಈಗಾಗಲೇ ಹಲವಾರು ನಿಯಮಗಳನ್ನು ಕಡ್ಡಾಯಗೊಳಿಸಿದೆ. ಇವುಗಳಲ್ಲಿ ಇನ್ಶೂರೆನ್ಸ್ ಹಾಗೂ ಹೆಲ್ಮೆಟ್‍‍ಗಳು ಸೇರಿವೆ. ಹೆಲ್ಮೆಟ್‍‍ಗಳು ಸವಾರರಿಗೆ ಮಾತ್ರವಲ್ಲದೇ, ಹಿಂಬದಿಯ ಸವಾರರಿಗೂ ಕಡ್ಡಾಯವಾಗಿದೆ.

ಬೈಕ್ ಸವಾರರೇ ಗಮನಿಸಿ - ಕಡ್ಡಾಯವಾಗಲಿದೆ ಈ ಹೊಸ ನಿಯಮ..!

ಇನ್ಶೂರೆನ್ಸ್ ಹಾಗೂ ಹೆಲ್ಮೆಟ್‍ ಇಲ್ಲದೇ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ಮೋಟಾರು ವಾಹನ ಕಾಯ್ದೆಯ ಪ್ರಕಾರ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತದೆ. ಕೇಂದ್ರ ಸರ್ಕಾರವು ಇಷ್ಟಕ್ಕೆ ಸುಮ್ಮನಾದಂತೆ ಕಾಣುತ್ತಿಲ್ಲ. ಈಗ ಬೈಕ್‍‍ಗಳಿಗೆ ಸಂಬಂಧಪಟ್ಟಂತೆ ಮತ್ತೊಂದು ಅಧಿಸೂಚನೆ ಹೊರಡಿಸಿದೆ.

ಬೈಕ್ ಸವಾರರೇ ಗಮನಿಸಿ - ಕಡ್ಡಾಯವಾಗಲಿದೆ ಈ ಹೊಸ ನಿಯಮ..!

1988ರ ಮೋಟಾರು ವಾಹನ ಕಾಯ್ದೆಗೆ ಸ್ವಲ್ಪ ಮಟ್ಟಿನ ತಿದ್ದುಪಡಿಯನ್ನು ತರಲಾಗಿದೆ. ಈ ಹೊಸ ತಿದ್ದುಪಡಿ ಕಾಯ್ದೆಯನ್ನು 2020ರ ಕೇಂದ್ರ ಮೋಟಾರು ವಾಹನ ನಿಯಮ ಎಂದು ಕರೆಯಲಾಗಿದೆ. ಈ ಸಂಬಂಧ ಫೆಬ್ರವರಿ 11ರಂದು ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಇಲಾಖೆಯು ಅಧಿಸೂಚನೆ ಹೊರಡಿಸಿದೆ.

ಬೈಕ್ ಸವಾರರೇ ಗಮನಿಸಿ - ಕಡ್ಡಾಯವಾಗಲಿದೆ ಈ ಹೊಸ ನಿಯಮ..!

ಈ ಹೊಸ ನಿಯಮವು ಅಕ್ಟೋಬರ್ 1ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ದ್ವಿ ಚಕ್ರ ವಾಹನ ಸವಾರರು ಈ ಹೊಸ ನಿಯಮವನ್ನು ಪಾಲಿಸಬೇಕಾಗಿದೆ. ಈ ಹೊಸ ನಿಯಮದ ಪ್ರಕಾರ ದ್ವಿಚಕ್ರ ವಾಹನಗಳು ವಿಂಡ್ ಸ್ಕ್ರೀನ್, ಸ್ಪೇರ್ ವ್ಹೀಲ್, ಲಗೇಜ್ ಸ್ಪೇಸ್ ಹಾಗೂ ಹಿಂಬದಿಯಲ್ಲಿ ಕೂರುವ ಸವಾರರಿಗಾಗಿ ಸುರಕ್ಷತೆಯನ್ನು ಹೊಂದಬೇಕಾಗುತ್ತದೆ.

ಬೈಕ್ ಸವಾರರೇ ಗಮನಿಸಿ - ಕಡ್ಡಾಯವಾಗಲಿದೆ ಈ ಹೊಸ ನಿಯಮ..!

ಇದರಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ದ್ವಿ ಚಕ್ರ ವಾಹನದ ಹಿಂಬದಿಯಲ್ಲಿ ಕೂರುವವರಿಗಾಗಿ ಹೆಚ್ಚು ಸುರಕ್ಷತೆಯನ್ನು ಹೊಂದಬೇಕಾಗಿದೆ. ಅಂದರೆ ಇನ್ನು ಮುಂದೆ ಬೈಕ್‍‍ಗಳಲ್ಲಿ ವ್ಹೀಲ್ ಕವರ್ ಅನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ. ಈ ವ್ಹೀಲ್ ಕವರ್ ಅನ್ನು ಪ್ರಯಾಣಿಕರು ಕುಳಿತುಕೊಳ್ಳುವ ಕಡೆಗೆ ಅಳವಡಿಸಬೇಕಾಗುತ್ತದೆ.

ಬೈಕ್ ಸವಾರರೇ ಗಮನಿಸಿ - ಕಡ್ಡಾಯವಾಗಲಿದೆ ಈ ಹೊಸ ನಿಯಮ..!

ಹಿಂಭಾಗದ ವ್ಹೀಲ್‍‍ನ ಅರ್ಧ ಭಾಗವನ್ನು ಕವರ್ ಮಾಡಬೇಕಾಗುತ್ತದೆ. ಫುಟ್ ರೆಸ್ಟ್ ಅನ್ನು ಕಡ್ಡಾಯಗೊಳಿಸಲಾಗಿದೆ. ಕೆಲವು ವಾಹನ ತಯಾರಕ ಕಂಪನಿಗಳು ಫುಟ್ ರೆಸ್ಟ್ ಅನ್ನು ಅಳವಡಿಸಲು ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿವೆ.

ಬೈಕ್ ಸವಾರರೇ ಗಮನಿಸಿ - ಕಡ್ಡಾಯವಾಗಲಿದೆ ಈ ಹೊಸ ನಿಯಮ..!

ಹೊಸ ನಿಯಮದ ನಂತರ ವಾಹನ ತಯಾರಕ ಕಂಪನಿಗಳು ಫುಟ್ ರೆಸ್ಟ್ ಗಳನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರವು ಹಿಂಬದಿ ವ್ಹೀಲ್‍‍ಗಳಿಗೆ ಬಟ್ಟೆ ಅಥವಾ ಇನ್ನು ಯಾವುದೇ ರೀತಿಯ ವಸ್ತುಗಳು ಸಿಲುಕಿಕೊಂಡು ಅಪಘಾತ ಸಂಭವಿಸದಂತೆ ತಡೆಯುವ ಕಾರಣಕ್ಕೆ ಈ ನಿಯಮವನ್ನು ಜಾರಿಗೊಳಿಸುತ್ತಿದೆ.

ಬೈಕ್ ಸವಾರರೇ ಗಮನಿಸಿ - ಕಡ್ಡಾಯವಾಗಲಿದೆ ಈ ಹೊಸ ನಿಯಮ..!

ಈ ಹಿಂದೆ ಬಟ್ಟೆ ಅಥವಾ ಚಪ್ಪಲಿಗಳು ಹಿಂಭಾಗದ ವ್ಹೀಲ್‍‍ಗಳಿಗೆ ಸಿಲುಕಿ ಅನೇಕ ಅಪಘಾತಗಳು ಸಂಭವಿಸಿದ್ದವು. ಭವಿಷ್ಯದಲ್ಲಿ ಈ ರೀತಿಯ ಅಪಘಾತಗಳನ್ನು ತಡೆಯಲು ಸರ್ಕಾರವು ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ.

ಬೈಕ್ ಸವಾರರೇ ಗಮನಿಸಿ - ಕಡ್ಡಾಯವಾಗಲಿದೆ ಈ ಹೊಸ ನಿಯಮ..!

ಫುಟ್ ರೆಸ್ಟ್ ಗಳಿಲ್ಲದಿದ್ದರೆ ಹಿಂಭಾಗದಲ್ಲಿರುವ ಕುಳಿತಿರುವವರಿಗೆ ಗ್ರಿಪ್ ಸಿಗುವುದಿಲ್ಲ. ಬೈಕ್‍‍ಗಳು ವೇಗವಾಗಿ ಚಲಿಸುವಾಗ ಸೀರೆ ಅಥವಾ ಬೇರೆ ಯಾವುದೇ ರೀತಿಯ ಬಟ್ಟೆಗಳು ಸಿಲುಕಿ ಅಪಘಾತ ಸಂಭವಿಸುತ್ತವೆ. ಈ ಎಲ್ಲಾ ಸಮಸ್ಯೆಗಳಿಗೆ ಕೊನೆಯಾಡಲು ಸರ್ಕಾರವು ತೀರ್ಮಾನಿಸಿದೆ.

Most Read Articles

Kannada
English summary
Wheel cover mandatory for bikes. Read in Kannada.
Story first published: Tuesday, February 18, 2020, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X