ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್ ಬೆಲೆ ಹೆಚ್ಚಿಸಿದ ಯಮಹಾ

ಯಮಹಾ ಇಂಡಿಯಾ ಕಂಪನಿಯು ಲಾಕ್‌ಡೌನ್ ವಿನಾಯ್ತಿ ನಂತರ ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಚೇತರಿಕೆ ಕಾಣುತ್ತಿದ್ದು, ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನಲೆಯಲ್ಲಿ ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಳ ಮಾಡಿ ಹೊಸ ದರ ಪಟ್ಟಿ ಪ್ರಕಟಿಸಿದೆ.

ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್ ಬೆಲೆ ಹೆಚ್ಚಿಸಿದ ಯಮಹಾ

ಕಳೆದ ಫೆಬ್ರುವರಿಯಲ್ಲಿ ಬಿಡುಗಡೆಗೊಂಡಿದ್ದ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ. 1,500 ರಿಂದ ರೂ.2 ಸಾವಿರ ಹೆಚ್ಚಳ ಮಾಡಲಾಗಿದೆ. ಲಾಕ್‌ಡೌನ್‌ನಿಂದ ಚೇತರಿಕೆ ಕಾಣುತ್ತಿರುವ ವೇಳೆ ಹೊಸ ದರಗಳು ಗ್ರಾಹಕರಿಗೆ ಹೊರೆಯಾಗಲಿದ್ದು, ಹೊಸ ಸ್ಕೂಟರ್‌ಗಳು ಬಿಎಸ್-6 ಎಂಜಿನ್ ನಂತರ ಎರಡನೇ ಬಾರಿಗೆ ಬೆಲೆ ಹೆಚ್ಚಳ ಪಡೆದುಕೊಂಡಿವೆ.

ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್ ಬೆಲೆ ಹೆಚ್ಚಿಸಿದ ಯಮಹಾ

ಹೊಸ ದರದ ನಂತರ ಫಾಸಿನೋ 125 ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 69,730 ಮತ್ತು ಟಾಪ್ ಎಂಡ್ ವೆರಿಯೆಂಟ್ ಮಾದರಿಯು ರೂ.72,230 ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್ ಮತ್ತು ಡಿಸ್ಕ್ ವೆರಿಯೆಂಟ್ ಹೊಂದಿದೆ.

ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್ ಬೆಲೆ ಹೆಚ್ಚಿಸಿದ ಯಮಹಾ

ರೇ ಜೆಡ್ಆರ್ 125 ಸ್ಕೂಟರ್ ಮಾದರಿಯು ಬೆಲೆ ಹೆಚ್ಚಳ ನಂತರ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.69,530 ಮತ್ತು ಟಾಪ್ ಎಂಡ್ ಮಾದರಿಯು ರೂ. 73,530 ಬೆಲೆ ಹೊಂದಿದ್ದು, ರೇ ಜೆಡ್ಆರ್125 ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿದೆ.

ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್ ಬೆಲೆ ಹೆಚ್ಚಿಸಿದ ಯಮಹಾ

ಸ್ಟ್ಯಾಂಡರ್ಡ್ ಮಾದರಿಗಳಾದ ರೇ ಜೆಡ್ಆರ್ 125 ಮಾದರಿಯಲ್ಲಿ ಡ್ರಮ್ ಮತ್ತು ಡಿಸ್ಕ್ ಮಾದರಿಗಳಿದ್ದಲ್ಲಿ ಟಾಪ್ ಎಂಡ್ ಮಾದರಿಯಾದ ಸ್ಟ್ರೀಟ್ ರ‍್ಯಾಲಿ ಮಾದರಿಯು ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಸ್ಪೋರ್ಟಿ ಲುಕ್ ಪಡೆದುಕೊಂಡಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್ ಬೆಲೆ ಹೆಚ್ಚಿಸಿದ ಯಮಹಾ

ಎಂಜಿನ್ ಸಾಮರ್ಥ್ಯ

ವಿನ್ಯಾಸದಲ್ಲಿ ಬೇರೆ ಬೇರೆಯಾಗಿರುವ ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್‌ಗಳು ತಾಂತ್ರಿಕವಾಗಿ ಒಂದೇ ಮಾದರಿಯಾಗಿದ್ದು, ಎರಡು ಸ್ಕೂಟರ್‌ಗಳಲ್ಲೂ ಬಿಎಸ್-6 ವೈಶಿಷ್ಟ್ಯತೆಯ 125 ಸಿಸಿ ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಹೊಂದಿದ್ದು, 8-ಬಿಎಚ್‌ಪಿ ಮತ್ತು 9.7-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್ ಬೆಲೆ ಹೆಚ್ಚಿಸಿದ ಯಮಹಾ

ಗ್ರಾಹಕರ ಬೇಡಿಕೆಯೆಂತೆ ಎರಡು ಸ್ಕೂಟರ್ ಮಾದರಿಯಲ್ಲೂ ಡ್ರಮ್, ಡಿಸ್ಕ್ ವೆರಿಯೆಂಟ್‌ಗಳೊಂದಿಗೆ ಹಲವಾರು ಸ್ಪೋರ್ಟಿ ಫೀಚರ್ಸ್ ನೀಡಲಾಗಿದ್ದು, ಹೊಸ ಸ್ಕೂಟರ್‌ಗಳಲ್ಲಿ 12 ಇಂಚಿನ ಅಲಾಯ್ ವೀಲ್ಹ್, ಯುಎಸ್‌ಬಿ ಚಾರ್ಜರ್, ಮಲ್ಟಿ ಫಂಕ್ಷನಲ್ ಕೀ, ಸೈಡ್ ಸ್ಟ್ಯಾಂಡ್ ಕಟ್ಅಪ್ ಸ್ವಿಚ್ ನೀಡಲಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಫಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್ ಬೆಲೆ ಹೆಚ್ಚಿಸಿದ ಯಮಹಾ

ಖರೀದಿಗೆ ಲಭ್ಯವಿರುವ ಬಣ್ಣಗಳು

ಫಾಸಿನೋ 125 ಮಾದರಿಯು ಸ್ಪಾರ್ಕಲ್ ಗ್ರೀನ್ ಮತ್ತು ಬ್ಲ್ಯೂ ಮೆಟಾಲಿಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದಲ್ಲಿ ರೇ ಜೆಡ್ಆರ್ 125 ಎಫ್ಐ ಮಾದರಿಯು ಡ್ರಮ್ ವೆರಿಯೆಂಟ್‌ನಲ್ಲಿ ಮೆಟಾಲಿಕ್ ಬ್ಲ್ಯಾಕ್, ಕೆನ್ ಬ್ಲ್ಯೂ ಹೊಂದಿದ್ದರೆ ಡಿಸ್ಕ್ ಬ್ರೇಕ್‌ನಲ್ಲಿ ಡಾರ್ಕ್ ಮ್ಯಾಟೆ ಬ್ಲ್ಯೂ, ಯೆಲ್ಲೊ ಕಾಕ್‌ಟೈಲ್, ಮ್ಯಾಟೆ ರೆಡ್ ಮೆಟಾಲಿಕ್, ಮೆಟಾಲಿಕ್ ಬ್ಲ್ಯಾಕ್ ಮತ್ತು ಕೆನ್ ಬ್ಲ್ಯೂ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
Read more on ಯಮಹಾ yamaha
English summary
Yamaha Fascino 125 And Ray ZR 125 Get A Price Hike. Read in Kannada.
Story first published: Monday, August 10, 2020, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X