ಡೀಲರ್ಸ್ ಯಾರ್ಡ್ ತಲುಪಿದ ಯಮಹಾ ಹೊಸ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25

ಯಮಹಾ ಕಳೆದ ವಾರವಷ್ಟೇ ಬಿಎಸ್-6 ಎಂಜಿನ್ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25 ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ವಿತರಣೆಗೆ ಶೀಘ್ರದಲ್ಲೇ ಆರಂಭಿಸಲಿದೆ. ಹೀಗಾಗಿ ಹೊಸ ಬೈಕ್‌ಗಳನ್ನು ಅಧಿಕೃತ ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, ಮುಂದಿನ ವಾರದಲ್ಲಿ ಹೊಸ ಬೈಕ್ ವಿತರಣೆಗೆ ಚಾಲನೆ ಸಿಗಲಿದೆ.

ಡೀಲರ್ಸ್ ಯಾರ್ಡ್ ತಲುಪಿದ ಯಮಹಾ ಹೊಸ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25

ಹೊಸ ಎಮಿಷನ್ ನಿಯಮದೊಂದಿಗೆ ಉನ್ನತೀಕರಣಗೊಂಡಿರುವ ಯಮಹಾ ಹೊಸ ಬೈಕ್‌ಗಳು ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಕಳೆದ ಮಾರ್ಚ್‌ನಲ್ಲೇ ಬಿಡುಗಡೆಯಾಗಬೇಕಿದ್ದ ಹೊಸ ಬೈಕ್‌ಗಳನ್ನು ಕರೋನಾ ವೈರಸ್ ಹಿನ್ನಲೆಯಲ್ಲಿ ಇದೀಗ ಬಿಡುಗಡೆ ಮಾಡಲಾಗಿದೆ. ಬಿಎಸ್-6 ಎಂಜಿನ್‌ನೊಂದಿಗೆ ಹೊರ ವಿನ್ಯಾಸದಲ್ಲೂ ತುಸು ಬದಲಾವಣೆ ಪಡೆದುಕೊಂಡಿರುವ ಹೊಸ ಬೈಕ್‌ಗಳು ಬಿಎಸ್-4 ಮಾದರಿಗಿಂತಲೂ ಅಧಿಕ ಬೆಲೆ ಹೊಂದಿವೆ.

ಡೀಲರ್ಸ್ ಯಾರ್ಡ್ ತಲುಪಿದ ಯಮಹಾ ಹೊಸ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25

ಎಫ್‌ಜೆಡ್25 ಬೈಕ್ ಮಾದರಿಯು ಹೊಸ ಬಿಎಸ್-6 ಎಂಜಿನ್‌ನೊಂದಿಗೆ ಹೊರ ವಿನ್ಯಾಸದಲ್ಲೂ ತುಸು ಬದಲಾವಣೆ ಪಡೆದುಕೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕಿನ ಬೆಲೆಯನ್ನು ರೂ. 1,52,100 ಗಳಿಗೆ ನಿಗದಿ ಮಾಡಲಾಗಿದೆ.

ಡೀಲರ್ಸ್ ಯಾರ್ಡ್ ತಲುಪಿದ ಯಮಹಾ ಹೊಸ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25

ಹೊಸ ಬೈಕಿನಲ್ಲಿ 249-ಸಿಸಿ ಏರ್ ಕೂಲ್ಡ್, ಸಿಂಗಲ್ ಓವರ್‌ಹೆಡ್ ಕ್ಯಾಮ್‌ಶಾಫ್ಟ್ ಎಂಜಿನ್‌ ಜೋಡಣೆ ಮಾಡಲಾಗಿದ್ದು, ಫೈವ್ ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 20.5-ಬಿಎಚ್‌ಪಿ ಮತ್ತು 20.2-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಡೀಲರ್ಸ್ ಯಾರ್ಡ್ ತಲುಪಿದ ಯಮಹಾ ಹೊಸ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25

ಇನ್ನು ಯಮಹಾ ಕಂಪನಿಯು ಎಫ್‌ಜೆಡ್25 ಜೊತೆಗೆ ಮತ್ತೊಂದು ಪ್ರಮುಖ ಬೈಕ್ ಆವೃತ್ತಿಯಾದ ಎಫ್‌ಜೆಡ್ಎಸ್25 ಬೈಕ್ ಮಾದರಿಯ ಬೆಲೆಯನ್ನು ಸಹ ಘೋಷಣೆ ಮಾಡಿದ್ದು, ಈ ಬೈಕ್ ಅನ್ನು ಕಳೆದ ಫೆಬ್ರುವರಿಯಲ್ಲೇ ಅನಾವರಣಗೊಳಿಸಲಾಗಿತ್ತು.

ಡೀಲರ್ಸ್ ಯಾರ್ಡ್ ತಲುಪಿದ ಯಮಹಾ ಹೊಸ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25

ಬಿಎಸ್-6 ಎಫ್‌ಜೆಡ್ ಜೊತೆಗೆ ಎಫ್‌ಜೆಡ್ಎಸ್25 ಮಾದರಿ ಬೆಲೆಯನ್ನು ಸಹ ಘೋಷಣೆ ಮಾಡಲಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕ್ ಮಾದರಿಯು ರೂ. 1,57,100 ಬೆಲೆ ಪಡೆದುಕೊಂಡಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಡೀಲರ್ಸ್ ಯಾರ್ಡ್ ತಲುಪಿದ ಯಮಹಾ ಹೊಸ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25

ತಾಂತ್ರಿಕವಾಗಿ ಎಫ್‌ಜೆಡ್25 ಮತ್ತು ಎಫ್‌ಜೆಡ್ಎಸ್25 ಬೈಕ್ ಮಾದರಿಗಳು ಒಂದೇ ಆಗಿದ್ದರೂ ಬೈಕಿನ ಹೊರವಿನ್ಯಾಸದಲ್ಲೂ ತುಸು ಬದಲಾವಣೆಯನ್ನು ಪಡೆದುಕೊಂಡಿದ್ದು, ಎಫ್‌ಜೆಡ್ಎಸ್25 ಬೈಕಿನಲ್ಲಿ ಹೆಚ್ಚುವರಿ ಪ್ರೀಮಿಯಂ ಸೌಲಭ್ಯಗಳಿಂದಾಗಿ ಆಕರ್ಷಕ ಲುಕ್ ಹೊಂದಿದೆ.

ಡೀಲರ್ಸ್ ಯಾರ್ಡ್ ತಲುಪಿದ ಯಮಹಾ ಹೊಸ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25

ಇನ್ನು ಹೊಸ ಬೈಕ್‌ಗಳಲ್ಲಿ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಟಸ್ಟರ್, ಎಲ್ಇಡಿ ಹೆಡ್‌ಲ್ಯಾಂಪ್, ಡೇಟೈಮ್ ರನ್ನಿಂಗ್ ಲೈಟ್ ಮತ್ತು ಟೈಲ್ ಲೈಟ್ಸ್, ಎಂಜಿನ್ ಕೌಲ್, ಸೈಡ್ ಸ್ಯಾಂಡ್ ಅಲರ್ಟ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದ್ದು, ಹೈ ಎಂಡ್ ಮಾದರಿಯಾದ ಎಫ್‌ಜೆಡ್ಎಸ್25 ಬೈಕಿನಲ್ಲಿ ಹೆಚ್ಚುವರಿಯಾಗಿ ಬ್ರಷ್ ಗಾರ್ಡ್, ಹ್ಯಾಂಡಲ್ ಗ್ರಿಪ್ಸ್, ಗೋಲ್ಡ್ ಬಣ್ಣದಲ್ಲಿ ವಿನ್ಯಾಸಗೊಳಿಸಲಾದ ಅಲಾಯ್ ಚಕ್ರಗಳು ಪ್ರಮುಖ ಆಕರ್ಷಣೆಯಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಡೀಲರ್ಸ್ ಯಾರ್ಡ್ ತಲುಪಿದ ಯಮಹಾ ಹೊಸ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25

ಖರೀದಿಗೆ ಲಭ್ಯವಿರುವ ಬಣ್ಣಗಳು

ಎಫ್‌ಜೆಡ್25 ಬೈಕ್ ಮಾದರಿಯು ರೇಸಿಂಗ್ ಬ್ಲ್ಯೂ, ಮೆಟಾಲಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಮತ್ತು ಎಫ್‌ಜೆಡ್ಎಸ್25 ಬೈಕ್ ಮಾದರಿಯು ಡಾರ್ಕ್ ಮ್ಯಾಟ್ ಬ್ಲ್ಯೂ, ಪ್ಯಾಟಿನಾ ಗ್ರೀನ್ ಮತ್ತು ವೈಟ್ ವೆರ್ಮಿಲಿಯನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿವೆ.

Most Read Articles

Kannada
Read more on ಯಮಹಾ yamaha
English summary
Yamaha FZ 25 & FZS 25 BS6 Arrives At Dealerships. Read in Kannada.
Story first published: Thursday, August 6, 2020, 19:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X