ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಯಮಹಾ

ಯಮಹಾ ಇಂಡಿಯಾ ಕಂಪನಿಯು ಲಾಕ್‌ಡೌನ್ ವಿನಾಯ್ತಿ ನಂತರ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಪುನಾರಂಭಿಸಿದ್ದು, ಇದೀಗ ವಿವಿಧ ಮಾದರಿಯ ಸ್ಕೂಟರ್‌ಗಳ ಬೆಲೆ ಹೆಚ್ಚಳ ಮಾಡಿ ಹೊಸ ದರಗಳನ್ನು ಪ್ರಕಟಿಸಿದೆ.

ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಯಮಹಾ

ಕಳೆದ ಫೆಬ್ರುವರಿಯಲ್ಲಿ ಬಿಡುಗಡೆಗೊಂಡಿದ್ದ ಜೆಡ್ಆರ್ 125 ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ 125 ಎಫ್ಐ ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಳ ಮಾಡಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ.800 ಹೆಚ್ಚಳ ಮಾಡಲಾಗಿದೆ. ಕೇವಲ ಜೆಡ್ಆರ್ 125 ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ 125 ಎಫ್ಐ ಮಾತ್ರವಲ್ಲದೆ ಬೈಕ್ ಮಾದರಿಗಳ ಬೆಲೆಯಲ್ಲೂ ಹೆಚ್ಚಳ ಮಾಡಲಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಬೈಕ್ ಖರೀದಿದಾರರಿಗೆ ಬೆಲೆ ಹೆಚ್ಚಳ ಶಾಕ್ ನೀಡಿದೆ.

ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಯಮಹಾ

ಜೆಡ್ಆರ್ 125 ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ 125 ಎಫ್ಐ ಸ್ಕೂಟರ್‌ಗಳು ರೂ.800 ಹೆಚ್ಚುವರಿ ಬೆಲೆಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.67,530 ಮತ್ತು ಟಾಪ್ ಎಂಡ್ ಮಾದರಿಯು ರೂ.71,530 ಬೆಲೆ ಪಡೆದುಕೊಂಡಿವೆ.

ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಯಮಹಾ

ಜೆಡ್ಆರ್ 125 ಎಫ್ಐ ಮಾದರಿಯಲ್ಲಿ ಡ್ರಮ್ ಮತ್ತು ಡಿಸ್ಕ್ ಮಾದರಿಗಳು ಖರೀದಿಗೆ ಲಭ್ಯವಿದ್ದು, ಡ್ರಮ್ ಬ್ರೇಕ್ ಮಾದರಿಯು ರೂ. 67,530 ಬೆಲೆ ಹೊಂದಿದ್ದರೆ ಡಿಸ್ಕ್ ಬ್ರೇಕ್ ಮಾದರಿಯು ರೂ. 70,530 ಬೆಲೆ ಪಡೆದುಕೊಂಡಿದೆ.

ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಯಮಹಾ

ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ 125 ಎಫ್ಐ ಮಾದರಿಯು ಪ್ರೀಮಿಯಂ ಸ್ಕೂಟರ್ ಆವೃತ್ತಿಯಾಗಿದ್ದು, ಇದು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.71,530 ಬೆಲೆ ಪಡೆದುಕೊಳ್ಳುವ ಮೂಲಕ ಯಮಹಾ ಬಹುಬೇಡಿಕೆ ಸ್ಕೂಟರ್ ಮಾದರಿಯಾಗಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಯಮಹಾ

ಜೆಡ್ಆರ್ 125 ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ 125 ಎಫ್ಐ ಸ್ಕೂಟರ್‌ಗಳಲ್ಲಿ ಬಿಎಸ್-6 ಪ್ರೇರಣೆಯ 125 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ನೊಂದಿಗೆ 8.2-ಬಿಎಚ್‌ಪಿ ಮತ್ತು 9.7-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಯಮಹಾ

ಬಿಎಸ್-6 ವೈಶಿಷ್ಟ್ಯತೆಯನ್ನು ಅಳವಡಿಸಿಕೊಂಡ ನಂತರ ಸ್ಕೂಟರ್ ಮಾರಾಟ ಭಾರೀ ಬದಲಾಣೆ ತಂದಿರುವ ಯಮಹಾ ಕಂಪನಿಯು ಸ್ಕೂಟರ್‌ಗಳ ಉತ್ಪಾದನಾ ಗುಣಮಟ್ಟ ಮತ್ತು ಪರ್ಫಾಮೆನ್ಸ್ ಹೆಚ್ಚಿಸಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಲಾಕ್‌ಡೌನ್ ಸಂಕಷ್ಟದಲ್ಲಿ ಹೊಸ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಯಮಹಾ

ಹೊಸ ಸ್ಕೂಟರ್ ಬಿಡುಗಡೆಯ ನಂತರ ಭಾರೀ ಬೇಡಿಕೆ ಪಡೆದುಕೊಂಡಿದ್ದ ಯಮಹಾ ಕಂಪನಿಯು ಮಾರ್ಚ್ ಅವಧಿಯಲ್ಲಿ ಭಾರೀ ಪ್ರಮಾಣದ ಬುಕ್ಕಿಂಗ್ ಪಡೆದುಕೊಂಡಿತ್ತು. ಆದರೆ ಕರೋನಾ ವೈರಸ್‌ನಿಂದಾಗಿ ಸ್ಕೂಟರ್ ಬೇಡಿಕೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಮುಂಬರುವ ದಿನಗಳಲ್ಲಿ ಆಟೋ ಉದ್ಯಮ ಸುಧಾರಿಸಿಕೊಳ್ಳುವ ವಿಶ್ವಾಸ ಆಟೋ ಕಂಪನಿಗಳಲ್ಲಿದೆ.

Most Read Articles

Kannada
Read more on ಯಮಹಾ yamaha
English summary
Yamaha Increases The Price Of The Ray ZR 125 Fi & The Ray ZR Street Rally 125 Fi. Read in Kannada.
Story first published: Wednesday, May 20, 2020, 20:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X