ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಸ್ಪೆಷಲ್ 'ವಿಂಟೇಜ್ ಎಡಿಷನ್' ಎಫ್‍‍ಜೆಡ್‍ಎಸ್-ಎಫ್‍ಐ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಹೆಚ್ಚುವರಿ ಫೀಚರ್ ಗಳು ಮತ್ತು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ.

ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಹೊಸ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಸೇರ್ಪಡೆಯನ್ನು ಒಳಗೊಂಡಿದೆ. ಹೊಸ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ,1.09 ಲಕ್ಷಗಳಾಗಿದೆ. ಸ್ಟ್ಯಾಂಡರ್ಡ್ ಯಮಹಾ ಎಫ್‌ಜೆಡ್‌ಎಸ್-ಫೈ ಬೈಕಿನ ಬೆಲೆಗೆ ಹೋಲಿಸಿದರೆ ರೂ.5000 ಹೆಚ್ಚಾಗಿದೆ. ಈ ಹೊಸ ಹೊಸ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಇದೇ ವಾರದಲ್ಲಿ ಕಂಪನಿಯ ಎಲ್ಲಾ ಅಧಿಕೃತ ಡೀಲರುಗಳ ಬಳಿ ಲಭ್ಯವಿರಲಿದೆ.

ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಹೊಸ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಸ್ಯಾಂಡರ್ಡ್ ಅಥವಾ ಮೂಲ ಮಾದರಿಯಂತೆಯೇ ಅದೇ ಸ್ಟೈಲಿಂಗ್ ಮತ್ತು ಒಟ್ಟಾರೆ ಸಿಲೂಯೆಟ್ ಅನ್ನು ಉಳಿಸಿಕೊಂಡಿದೆ. ಇದು ವಿಂಟೇಜ್ ಬಾಡಿ ಗ್ರಾಫಿಕ್ಸ್‌ನಂತಹ ಕೆಲವು ನವೀಕರಣಗಳನ್ನು ಒಳಗೊಂಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಈ ಹೊಸ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಲೆದರ್-ಫಿನಿಶ್ ಸಿಂಗಲ್ ಪೀಸ್ ಎರಡು-ಹಂತದ ಸೀಟ್ ಮತ್ತು ಯಮಹಾ ಬೈಕ್ ಕನೆಕ್ಟ್ ಎಕ್ಸ್' ಅಪ್ಲಿಕೇಶನ್‌ ಮೂಲಕ ಬ್ಲೂಟೂತ್ ಕನೆಕ್ಟಿವಿಟಿ ಸೇರಿಸಿದೆ.

ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಈ ಬದಲಾವಣೆಗಳ ಹೊರತಾಗಿ, ಮೂಲ ಮಾದರಿಯ ಇತರ ಎಲ್ಲ ಅಂಶಗಳು ಒಂದೇ ಆಗಿರುತ್ತದೆ. ಹೊಸ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಅದೇ 149 ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಈ ಎಂಜಿನ್ 7,250 ಆರ್‍‍ಪಿಎಂನಲ್ಲಿ 12.2 ಬಿ‍ಎಚ್‍ಪಿ ಪವರ್ ಮತ್ತು 5,500 ಆರ್‍‍ಪಿಎಂನಲ್ಲಿ 13.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಹೊಸ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳ ಒಂದು ಸೆಟ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಇನ್ನು ಸುರಕ್ಷತೆ ದೃಷ್ಠಿಯಿಂದ ಬಹಳ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ 220 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಒಳಗೊಂಡಿದೆ.

ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಇನ್ನು ಈ ಹೊಸ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ 13-ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ 137 ಕೆಜಿ ತೂಕವನ್ನು ಹೊಂದಿದೆ.

ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಬಿಡುಗಡೆ

ಹೊಸ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ವಿಂಟೇಜ್ ಎಡಿಷನ್ ಹೆಚ್ಚಾಗಿ ಯುವ ಗ್ರಾಹಕರನ್ನು ಆಕರ್ಷಿಸುತ್ತದೆ, ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 150, ಟಿವಿಎಸ್ ಅಪಾಚೆ ಆರ್‌ಟಿಆರ್ 160 ಮತ್ತು ಸುಜುಕಿ ಜಿಕ್ಸರ್ 155 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
Yamaha FZS-Fi Vintage Edition Launched In India. Read In Kannada.
Story first published: Tuesday, December 1, 2020, 20:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X