Just In
Don't Miss!
- News
ಜನಸೇವಕ್ ಸಮಾವೇಶದಲ್ಲಿ ಅಮಿತ್ ಶಾ ಭಾಷಣ; ಮುಖ್ಯಾಂಶಗಳು
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆನ್ಲೈನ್ ಮಾರಾಟ ಮಳಿಗೆ ಆರಂಭಿಸಿದ ಯಮಹಾ
ದೇಶದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರಿಂದ ಹಲವಾರು ವಾಹನಾ ಉತ್ಪಾದನಾ ಕಂಪನಿಗಳು ಸುರಕ್ಷಿತವಾಗಿ ವ್ಯಾಪಾರ ಚಟುವಟಿಕೆಗಳನ್ನು ನಡೆಸಲು ಆನ್ಲೈನ್ ಪ್ಲ್ಯಾಟ್ಫಾರ್ಮ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

ಇದೀಗ ಯಮಹಾ ಕಂಪನಿಯು ಭಾರತದಲ್ಲಿ ವರ್ಚುವಲ್ ಸ್ಟೋರ್ ಮೂಲಕ ಆನ್ಲೈನ್ ಮಾರಾಟವನ್ನು ನಡೆಸಲು ವೆಬ್ಸೈಟ್ ಅನ್ನು ಪ್ರಾರಂಭಿಸಿದೆ. ಯಮಹಾ ಕಂಪನಿಯು "ದಿ ಕಾಲ್ ಆಫ್ ದಿ ಬ್ಲೂ" ಎಂಬ ಅಭಿಯಾನದ ಮೂಲಕ ಗ್ರಾಹಕರಿಗೆ ಅತ್ಯಾಕರ್ಷಕ ಸೇವೆಯನ್ನು ಒದಗಿಸುತ್ತದೆ. ಯಮಹಾ ಕಂಪನಿ ಚೆನ್ನೈನಿಂದ ಆನ್ಲೈನ್ ಮಾರಾಟ ಮಾಡ್ಯೂಲ್ ಅನ್ನು ಪ್ರಾರಂಭಿಸಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ರಾಷ್ಟ್ರದಾದ್ಯಂತ 300 ಡೀಲರ್ ಗಳನ್ನು ಒಳಗೊಳ್ಳಲಿದೆ ಎಂದು ಹೇಳಿದ್ದಾರೆ.

ಯಮಹಾ ಮೋಟರ್ ಇಂಡಿಯಾ ಗ್ರೂಪ್ ಸಂಸ್ಥೆಯ ಅಧ್ಯಕ್ಷ ಮೊಟೊಫುಮಿ ಶಿತಾರಾ ಅವರು ಇದರ ಬಗ್ಗೆ ಮಾತನಾಡಿ,ವರ್ಚುವಲ್ ಸ್ಟೋರ್ ಹೊಂದಿರುವ ನಮ್ಮ ಹೊಸ ವೆಬ್ಸೈಟ್ ವರ್ಧಿತ ಖರೀದಿ ಅನುಭವ ಮತ್ತು ವೈಯಕ್ತಿಕ ಗ್ರಾಹಕ ಸೇವೆಗಳನ್ನು ನೀಡಲು ಸಿದ್ಧವಾಗಿದೆ. ಈ ಮೂಲಕ ಯಮಹಾ ಕಂಪನಿಯು ವೆಬ್ಸೈಟ್ನೊಂದಿಗೆ ಹೊಸ ಅಧ್ಯಾಯವನ್ನು ತೆರೆದುಕೊಳ್ಳುತ್ತದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಯಮಹಾ ಕಂಪನಿಯು ವ್ಯಾಪರ ವಾಹಿವಾಟು ಚಟುವಟಿಕೆಗಳನ್ನು ಡಿಜಿಟಲ್ ರೂಪಾಂತರದ ಮೂಲಕ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಆಕರ್ಷಕವಾಗಿರುವ ಆನ್ಲೈನ್ ಪೋರ್ಟಲ್ ಮೂಲಕ ವೇಗವಾಗಿ ನಡೆಸುತ್ತದೆ. ಭವಿಷ್ಯದಲ್ಲಿ ಇದೇ ಆನ್ಲೈನ್ ಪ್ಲ್ಯಾಟ್ಫಾರ್ಮ್ ಮೂಲಕ ಅಕ್ಸೆಸರೀಸ್ ಅನ್ನು ಖರೀದಿಸುವ ಆಯ್ಕೆಯನ್ನು ನೀಡಲಿದೆ ಎಂದು ಹೇಳಿದರು.

ವರ್ಚುವಲ್ ಸ್ಟೋರ್ನಂತಹ ಹೊಸ ವೈಶಿಷ್ಟ್ಯದೊಂದಿಗೆ ಯಮಹಾ ಗ್ರಾಹಕರಿಗೆ ಉತ್ಪನ್ನಗಳ 360 ಡಿಗ್ರಿ ನೋಟವನ್ನು ಒದಗಿಸುತ್ತದೆ ಮತ್ತು ವೆಬ್ಸೈಟ್ನಲ್ಲಿ ಖರೀದಿದಾರರ ಮಾರ್ಗದರ್ಶಿ ಆಯ್ಕೆಯ ಅಡಿಯಲ್ಲಿ ಯಮಹಾ ಉತ್ಪನ್ನಗಳ ನಡುವಿನ ನಿರ್ದಿಷ್ಟ ಹೋಲಿಕೆಯ ವಿವರಗಳನ್ನು ಕೂಡ ನೀಡುತ್ತದೆ.
MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಗ್ರಾಹಕರು ಶೋರೂಂಗಳಿಗೆ ಭೇಟಿಯನ್ನು ನೀಡಬೇಕಾಗಿಲ್ಲ, ಆನ್ಲೈನ್ ಪ್ಲ್ಯಾಟ್ಫಾರ್ಮ್ ಮೂಲಕ ವ್ಯವಾಹರಗಳನ್ನು ನಡೆಸಬಬಹುದಾಗಿದೆ ಇದರಿಂದ ಗ್ರಾಹಕರು ಮನೆಯಲ್ಲಿಯೇ ಸುರಕ್ಷಿತವಾಗಿ ಇರಬಹುದು. ಅಲ್ಲದೇ ಗ್ರಾಹಕರು ವಾಟ್ಸಾಪ್, ಇ-ಮೇಲ್ ಅಥವಾ ವಿಡಿಯೋ ಕರೆಗಳ ಮೂಲಕ ಯಮಹಾ ಡೀಲರ್ ಗಳನ್ನು ಸಂಪರ್ಕಿಸಬಹುದಾಗಿದೆ.

ಯಮಹಾ ಕಂಪನಿಯು ತನ್ನ ಬಿಎಸ್-6 ಎಂಟಿ-15 ಬೈಕ್ ಅನ್ನು 2020ರ ಫೆಬ್ರವರಿ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಬಿಎಸ್-6 ಯಮಹಾ ಎಂಟಿ-15 ಬೈಕಿನ ಬೆಲೆಯನ್ನು ಈ ವರ್ಷದ ಮೇ ತಿಂಗಳಲ್ಲಿ ಹೆಚ್ಚಿಸಲಾಗಿತ್ತು.
MOST READ: ಬಿಡುಗಡೆಯಾಯ್ತು ಹೊಸ ಟಿವಿಎಸ್ ಜೆಸ್ಟ್ 110 ಸ್ಕೂಟರ್

ಇದೀಗ ಯಮಹಾ ಕಂಪನಿಯು ಎರಡನೇ ಬಾರಿಗೆ ಬಿಎಸ್-6 ಎಂಟಿ-15 ಬೈಕಿನ ಬೆಲೆಯನ್ನು ಹೆಚ್ಚಿಸಲಾಗಿದೆ. ಕಳೆದ ಮೇ ತಿಂಗಳಲ್ಲಿ ಐಸ್ ಬಿಎಸ್-6 ಯಮಹಾ ಎಂಟಿ-15 ಬೈಕಿನ ಫ್ಲೂ ವರ್ಮಿಲಿಯನ್ ಬಣ್ಣದ ಬೆಲೆಯನ್ನು ಮಾತ್ರ ಏರಿಕೆ ಮಾಡಲಾಗಿತ್ತು. ಈ ಬಾರಿ ಬಿಎಸ್-6 ಯಮಹಾ ಎಂಟಿ-15 ಬೈಕಿನ ಎಲ್ಲಾ ಮೂರು ಬಣ್ಣಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

ಈ ಆನ್ಲೈನ್ ವರ್ಚುವಲ್ ಮಳಿಗೆಯ ಮೂಲಕ ಗ್ರಾಹಕರು ಅನೆಯಲ್ಲಿ ಕುಳಿತು ಶಾಪಿಂಗ್ ಮಾಡಬಹುದು. ಅಲ್ಲದೇ ಗ್ರಾಹಕರು ಉತ್ಪನ್ನದ ಬಗ್ಗೆ ಎಲ್ಲ ವಿವರಗಳನ್ನು ಸಹ ತಿಳಿದುಕೊಳ್ಳಬಹುದು ಮತ್ತು ಗ್ರಾಹಕರು ಯಾವುದೇ ಅನುಮಾನಗಳು ಇದ್ದರೆ ಅದನ್ನು ಕೂಡ ಬಗೆಹರಿಸುತ್ತಾರೆ. ಈ ಈ ಆನ್ಲೈನ್ ವರ್ಚುವಲ್ ಮಳಿಗೆಯ ಮೂಲಕ ಯಮಹಾ ಗ್ರಾಹಕರು ಸುರಕ್ಷಿತವಾಗಿ ಮತ್ತು ಸುಲಭವಾಗಿ ವ್ಯವಹರಿಸಬಹುದಾಗಿದೆ.