ಏರಿಕೆಯತ್ತ ಮುಖ ಮಾಡಿದ ಯಮಹಾ ವಾಹನ ಮಾರಾಟ

ದೇಶಿಯ ಮಾರುಕಟ್ಟೆಯಲ್ಲಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಯಮಹಾ 2020ರ ಅಕ್ಟೋಬರ್‌ ತಿಂಗಳಿನಲ್ಲಿ ಒಟ್ಟು 60,176 ವಾಹನಗಳನ್ನು ಮಾರಾಟ ಮಾಡಿದೆ.

ಏರಿಕೆಯತ್ತ ಮುಖ ಮಾಡಿದ ಯಮಹಾ ವಾಹನ ಮಾರಾಟ

ಈ ಪ್ರಮಾಣವು 2019ರ ಅಕ್ಟೋಬರ್‌ ತಿಂಗಳಿಗಿಂತ 31%ನಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಯಮಹಾ ಕಂಪನಿಯು 46,082 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಯಮಹಾ ಕಂಪನಿಯು ಕಳೆದ 4 ತಿಂಗಳಿನಿಂದ ಮಾರಾಟದಲ್ಲಿ ನಿರಂತರ ಬೆಳವಣಿಗೆಯನ್ನು ಕಾಣುತ್ತಿದೆ.

ಏರಿಕೆಯತ್ತ ಮುಖ ಮಾಡಿದ ಯಮಹಾ ವಾಹನ ಮಾರಾಟ

2019ರ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜುಲೈ ತಿಂಗಳಿನಲ್ಲಿ ಯಮಹಾ ಕಂಪನಿಯ ಮಾರಾಟವು 4.3%ನಷ್ಟು ಏರಿಕೆಯಾಗಿದೆ. ಆಗಸ್ಟ್‌ ತಿಂಗಳಿನಲ್ಲಿ 14.8% ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ 17%ನಷ್ಟು ಹೆಚ್ಚು ಮಾರಾಟವನ್ನು ದಾಖಲಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಏರಿಕೆಯತ್ತ ಮುಖ ಮಾಡಿದ ಯಮಹಾ ವಾಹನ ಮಾರಾಟ

ಈ ವರ್ಷದ ಮಾರ್ಚ್‌ ತಿಂಗಳಿನಲ್ಲಿ ಜಾರಿಯಾದ ಲಾಕ್ ಡೌನ್ ನಂತರ ಸುಮಾರು ಎರಡು ತಿಂಗಳ ಕಾಲ ಎಲ್ಲಾ ಕಂಪನಿಯ ಮಾರಾಟ ಸ್ಥಗಿತವಾಗಿತ್ತು. ಲಾಕ್ ಡೌನ್ ನಂತರ ಯಮಹಾ ಕಂಪನಿಯ ಮಾರಾಟವು ಚೇತರಿಕೆಯನ್ನು ಕಾಣುತ್ತಿದೆ.

ತಿಂಗಳು 2019 2020 ಬೆಳವಣಿಗೆ (%)
ಜುಲೈ 47918 49989 4.3
ಆಗಸ್ಟ್ 52706 60505 14.8
ಸೆಪ್ಟೆಂಬರ್ 53727 63052 17
ಅಕ್ಟೋಬರ್ 46082 60176 31
ಏರಿಕೆಯತ್ತ ಮುಖ ಮಾಡಿದ ಯಮಹಾ ವಾಹನ ಮಾರಾಟ

ಯಮಹಾ ಕಂಪನಿಯು ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ 2,876 ಯೂನಿಟ್ ವಾಹನಗಳನ್ನು ಕಡಿಮೆ ಮಾರಾಟ ಮಾಡಿದೆ. ಈ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಯಮಹಾ ಕಂಪನಿಯು ತನ್ನ ವಾಹನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಏರಿಕೆಯತ್ತ ಮುಖ ಮಾಡಿದ ಯಮಹಾ ವಾಹನ ಮಾರಾಟ

ಈ ಹಣಕಾಸು ಕೊಡುಗೆಗಳಲ್ಲಿ ಕಡಿಮೆ ಇಎಂಐ ಯೋಜನೆ ಸೇರಿದಂತೆ ಹಲವು ವಿಧದ ಪಾವತಿ ಆಯ್ಕೆಗಳಿವೆ. ಈ ಕೊಡುಗೆಗಳು ಡೌನ್ ಪೇಮೆಂಟ್ ಅನ್ನು ಕಡಿಮೆ ಮಾಡುವುದರ ಮೂಲಕ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ನೆರವಾಗುತ್ತವೆ.

ಏರಿಕೆಯತ್ತ ಮುಖ ಮಾಡಿದ ಯಮಹಾ ವಾಹನ ಮಾರಾಟ

ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಈ ವರ್ಷ ಹೆಚ್ಚಿನ ಮಾರಾಟವನ್ನು ದಾಖಲಿಸಿದೆ. ಕಂಪನಿಯು ಹಬ್ಬದ ಅವಧಿಯಲ್ಲಿ ಮಾರಾಟವು ಮತ್ತಷ್ಟು ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯಲ್ಲಿದೆ.

Most Read Articles

Kannada
Read more on ಯಮಹಾ yamaha
English summary
Yamaha Motor sales increasing in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X