ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಯಮಹಾ ಎಂಟಿ-15 ಬೈಕ್

ಯಮಹಾ ಕಂಪನಿಯು ತನ್ನ ಹೊಸ ಎಂಟಿ-15 ಬೈಕ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಯಮಹಾ ಎಂಟಿ-15, ಬೈಕ್ ಬಿ‍ಎಸ್-6 ಆವೃತ್ತಿಯಾಗಿದೆ. ಉತ್ತಮ ಪರ್ಫಾಮೆನ್ಸ್ ಬೈಕ್ ಆಗಿರುವ ಎಂಟಿ-15 ಇದೀಗ ಡೀಲರ್‍‍ಗಳ ಬಳಿ ತಲುಪಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಯಮಹಾ ಎಂಟಿ-15 ಬೈಕ್

ಈ ಬೈಕ್ ಡೀಲರ್‍‍ಗಳ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ಈ ಬೈಕಿನ ವಿತರಣೆಯು ಪ್ರಾರಂಭವಾಗುತ್ತದೆ ಎಂದು ನಿರೀಕ್ಷಿಸುತ್ತೇವೆ. ಈ ಬೈಕ್‍ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಈ ಬೈಕಿನ 155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ನವೀಕರಿಸಲಾಗಿದೆ. ಈ ಎಂಜಿನ್ 18.5 ಬಿ‍‍ಹೆಚ್‍‍ಪಿ ಪವರ್ ಮತ್ತು 13.9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಬೈಕಿನಲ್ಲಿ ಬಿಎಸ್-4 ಎಂಜಿನ್‍‍ಗಿಂತ 0.8 ಬಿ‍‍ಹೆಚ್‍ಪಿ ಪವರ್ ಅನ್ನು ಇಳಿಸಿದೆ. ಯಮಹಾ ಎಂಟಿ-15 ಬಿಎಸ್-4 ಮಾದರಿಯು 19.3 ಬಿ‍‍ಹೆಚ್‍‍ಪಿ ಪವರ್ ಮತ್ತು 14.7 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಬೈಕಿನ ತೂಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೊಸ ಯಮಹಾ ಎಂಟಿ-15 ಬೈಕ್ 138 ಕೆಜಿ ತೂಕವನ್ನು ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ ರೇಡಿಯಲ್ ಟಯರ್ ಅನ್ನು ಅಳವಡಿಸಲಾಗಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಯಮಹಾ ಎಂಟಿ-15 ಬೈಕ್

ಭಾರತೀಯ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿರುವ ಯಮಹಾ ಸಂಸ್ಥೆಯು ಎಂಟಿ-15 ಬೈಕಿನಲ್ಲಿ ಹಲವು ಹೊಸ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಿದ್ದು, 'ದ ಡಾರ್ಕ್ ಸೈಡ್ ಆಫ್ ಜಪಾನ್' ಮಾದರಿಯ ಹೆಡ್‌ಲ್ಯಾಂಪ್ ಸೌಲಭ್ಯವು ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಯಮಹಾ ಎಂಟಿ-15 ಬೈಕ್

ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೋಡಣೆ ಮಾಡಲಾಗಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಯಮಹಾ ಎಂಟಿ-15 ಬೈಕ್

ಹಾಗೆಯೇ ಹೊಸ ಬೈಕಿನಲ್ಲಿ ಅಳವಡಿಸಲಾಗಿರುವ ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಲಾಗಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಯಮಹಾ ಎಂಟಿ-15 ಬೈಕ್

ಬಿಎಸ್-6 ಯಮಹಾ ಹೊಸ ಐಸ್ ಫ್ಲೂ ವರ್ಮಲಿಯನ್ ಬಣ್ಣದಲ್ಲಿ ಲಭ್ಯವಿದೆ. ಈ ಬಣ್ಣದ ಆಯ್ಕೆಯ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,39,400ಗಳಾಗಿದೆ.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಯಮಹಾ ಎಂಟಿ-15 ಬೈಕ್

ಇನ್ನೂ ಮೆಟಾಲಿಕ್ ಬ್ಯಾಕ್ ಡಾರ್ಕ್ ಮ್ಯಾಟ್ ಬ್ಲೂ ಬಣ್ಣದ ಆಯ್ಕೆಯನ್ನು ಹೊಂದಿರುವ ಬೈಕಿಗೆ ರೂ.1,38,900 ಗಳಾಗಿದೆ. ಆಕರ್ಷಕ ಬೆಲೆಯನ್ನು ಹೊಂದಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಡೀಲರ್‍ ಬಳಿ ತಲುಪಿದ ಬಿ‍ಎಸ್-6 ಯಮಹಾ ಎಂಟಿ-15 ಬೈಕ್

ಹೊಸ ಬಿ‍ಎಸ್-6 ಎಂಜಿನ್‍‍ನ ಯಮಹಾ ಎಂಟಿ-15 ಬೈಕ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಇದರಿಂದ ಈ ಬೈಕಿನ ಪರ್ಫಾಮೆನ್ಸ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರಿದ ಪರ್ಫಾಮೆನ್ಸ್ ಪ್ರಿಯರಿಗೆ ಈ ಬೈಕ್ ಒಂದು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

Most Read Articles

Kannada
Read more on ಯಮಹಾ yamaha
English summary
BS6 Yamaha MT-15 Ice Fluo Vermillion Reaches Dealerships. Read in Kannada.
Story first published: Wednesday, February 19, 2020, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X