ಜುಲೈ ಅವಧಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ಯಮಹಾ

ಕರೋನಾ ವೈರಸ್‌ನಿಂದಾಗಿ ತೀವ್ರವಾಗಿ ಕುಸಿತಕಂಡಿದ್ದ ಹೊಸ ವಾಹನ ಮಾರಾಟವು ಇದೀಗ ತುಸು ಚೇತರಿಸಿಕೊಂಡಿದೆ. ಆದರೂ ಕಳೆದ ವರ್ಷದ ವಾಹನ ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಇನ್ನು ಸುಧಾರಣೆಯಾಗಬೇಕಿದ್ದು, ಯಮಹಾ ಇಂಡಿಯಾ ಮಾತ್ರ ಇತರೆ ಬೈಕ್ ಉತ್ಪಾದನಾ ಕಂಪನಿಗಳನ್ನು ಹಿಂದಿಕ್ಕಿ ಉತ್ತಮ ಮಾರಾಟ ದಾಖಲಿಸಿದೆ.

ಜುಲೈ ಅವಧಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ಯಮಹಾ

ಹೌದು, ಕರೋನಾ ವೈರಸ್ ನಂತರ ದ್ವಿಚಕ್ರಗಳ ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದರೂ ಇನ್ನು ಕೂಡಾ ಹಲವು ಕಂಪನಿಗಳು ಕಳೆದ ವರ್ಷದ ಅವಧಿಗಿಂತ ಶೇ. 20 ರಿಂದ ಶೇ.40ರಷ್ಟು ಕುಸಿತ ಕಂಡಿದ್ದು, ಯಮಹಾ ಇಂಡಿಯಾ ಬೈಕ್ ಮಾರಾಟವು ಕೂಡಾ ತೀವ್ರವಾಗಿ ಕುಸಿತ ಕಂಡಿದೆ. ಆದರೆ ಜುಲೈ ಅವಧಿಯಲ್ಲಿ ಯಮಹಾ ದ್ವಿಚಕ್ರ ವಾಹನಗಳ ಮಾರಾಟವು ಒಂದೇ ಬಾರಿಗೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಶೇ.4.03 ರಷ್ಟು ಬೆಳವಣಿಗೆಯೊಂದಿಗೆ 49,989 ಯುನಿಟ್ ಮಾರಾಟ ಮಾಡಿದೆ.

ಜುಲೈ ಅವಧಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ಯಮಹಾ

2019ರ ಜುಲೈ ಅವಧಿಗಿಂತಲೂ 2020ರ ಜುಲೈ ಅವಧಿಯಲ್ಲಿ ಹೆಚ್ಚುವರಿಯಾಗಿ ಶೇ.4.03ರಷ್ಟು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿರುವ ಯಮಹಾ ಕಂಪನಿಯು ವಿವಿಧ ಬೈಕ್ ಮಾದರಿಗಳ ಜೊತೆಗೆ ಹೊಸ ಸ್ಕೂಟರ್ ಮಾದರಿಗಳೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಜುಲೈ ಅವಧಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ಯಮಹಾ

ಸದ್ಯ ಮಾರುಕಟ್ಟೆಯಲ್ಲಿ ಹೀರೋ ಮೋಟೊಕಾರ್ಪ್, ಹೋಂಡಾ ಮೋಟಾರ್‌ಸೈಕಲ್, ಟಿವಿಎಸ್ ಮೋಟಾರ್ ಮತ್ತು ಬಜಾಜ್ ಆಟೋ ನಂತರ ಐದನೇ ಸ್ಥಾನದಲ್ಲಿರುವ ಯಮಹಾ ಕಂಪನಿಯು ಜುಲೈ ಅವಧಿಯಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದೆ.

ಜುಲೈ ಅವಧಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ಯಮಹಾ

ಇನ್ನು ಮಹಾಮಾರಿ ಕರೋನಾ ವೈರಸ್ ಹರಡುವಿಕೆ ತಡೆಯಲು ವಿಧಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಚೇತರಿಕೆ ಕಾಣುತ್ತಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚು ಬೇಡಿಕೆ ಹರಿದುಬರುತ್ತಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಜುಲೈ ಅವಧಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ಯಮಹಾ

ವೈರಸ್ ಭೀತಿಯಿಂದಾಗಿ ಮೆಟ್ರೋ ಮತ್ತು ಇತರೆ ಟ್ಯಾಕ್ಸಿ ಸೌಲಭ್ಯವು ಇದುವರೆಗೂ ಪುನಾರಂಭಗೊಳ್ಳದ ಕಾರಣ ಹಲವರು ಸ್ವಂತ ಬಳಕೆಯ ವಾಹನಗಳ ಮುಖ ಮಾಡುತ್ತಿದ್ದು, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕಳೆದ ಎರಡು ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕರೋನಾ ವೈರಸ್ ಪರಿಣಾಮ ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ವಾಹನ ಮಾರಾಟವಿಲ್ಲದೆ ಕಂಗಾಲಾಗಿದ್ದ ಆಟೋ ಕಂಪನಿಗಳಿಗೆ ಇದೀಗ ಭಾರೀ ಬೇಡಿಕೆ ಹರಿದುಬರುತ್ತಿದೆ.

ಜುಲೈ ಅವಧಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ಯಮಹಾ

ಜೊತೆಗೆ ಹೊಸ ದ್ವಿಚಕ್ರ ವಾಹನ ಖರೀದಿಸುವ ಬಹುತೇಕ ಗ್ರಾಹಕರು ವೈರಸ್ ಭೀತಿಯಿಂದ ತಪ್ಪಿಸಿಕೊಳ್ಳಲು ಸ್ವಂತ ವಾಹನ ಖರೀದಿ ಮಾಡುತ್ತಿರುವುದಾಗಿ ವಾಹನ ಮಾರಾಟ ಕಂಪನಿಗಳ ಸರ್ವೆನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾರಿಗೆ ಸಾಲಭ್ಯಗಳ ಕೊರತೆ, ಮೆಟ್ರೋ ಸ್ಥಗಿತ ಮತ್ತು ಸಾರಿಗೆ ವಾಹನಗಳಲ್ಲಿ ಪ್ರಯಾಣಿಸಿದರೆ ಕರೋನಾ ವೈರಸ್ ತಗುಲಬಹುದಾದ ಸಾಧ್ಯತೆಗಳಿವೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಜುಲೈ ಅವಧಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ 5ನೇ ಸ್ಥಾನಕ್ಕೇರಿದ ಯಮಹಾ

ಗ್ರಾಹಕರ ಅಭಿಪ್ರಾಯ ಮೇರೆಗೆ ದ್ವಿಚಕ್ರ ವಾಹನಗಳ ಮಾರಾಟ ಮೇಲೆ ಹೆಚ್ಚು ಗಮನಹರಿಸಿರುವ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಮಾರಾಟ ಮಳಿಗೆಗಳ ಹೆಚ್ಚಿಸುತ್ತಿದ್ದು, ವಿವಿಧ ಮಾದರಿಯ ಹಣಕಾಸು ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.

Most Read Articles

Kannada
Read more on ಯಮಹಾ yamaha
English summary
Yamaha Recorded An Increase In July 2020 Sales. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X