Just In
- 33 min ago Vande Bharat: ಮಧ್ಯಮ ವರ್ಗದವರ ಐರಾವತ.. ವಂದೇ ಭಾರತ್ ಎಕ್ಸ್ಪ್ರೆಸ್ನಿಂದ ಹೊಸ ಮೈಲಿಗಲ್ಲು ನಿರ್ಮಾಣ!
- 1 hr ago Mahindra: ಬೊಲೆರೋ ನಿಯೋ ಪ್ಲಸ್ 9-ಸೀಟರ್ ಕಡಿಮೆ ಬೆಲೆಗೆ ಬಿಡುಗಡೆ: ವಿಶೇಷತೆಗಳೇನು?
- 2 hrs ago ರಾಯಲ್ ಎನ್ಫೀಲ್ಡ್ ಬೈಕಿಗೆ ನಡುಕ ಹುಟ್ಟುಸಿದ ಹೀರೋ ಬೈಕ್ ವಿತರಣೆ ಪ್ರಾರಂಭ: ರಸ್ತೆಗಿಳಿದು ಅಬ್ಬರಿಸುತ್ತಾ?
- 3 hrs ago ದುಬಾರಿ ಬೆಲೆಯ ಮರ್ಸಿಡಿಸ್ ಸೆಡಾನ್ ಖರೀದಿಸಿದ ಕುಶಾ ಕಪಿಲಾ: ಯಾರು ಶಿವ ಈಕೆ.. ಈ ಕಾರಿನ ವಿಶೇಷತೆಗಳೇನು?
Don't Miss!
- Lifestyle ಚರ್ಚೆ ಹುಟ್ಟುಹಾಕಿದ ಬೆಂಗಳೂರು-ಹೈದರಾಬಾದ್..! ಎರಡರಲ್ಲಿ ವಾಸಯೋಗ್ಯ ನಗರ ಯಾವುದು..?
- News Lok Sabha Election: ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆ ಹುಡುಕುವುದು ಈಗ ಸುಲಭ!
- Sports ಟಿ20 ವಿಶ್ವಕಪ್ಗೆ ಭಾರತ ತಂಡದ ಆಯ್ಕೆ; ದ್ರಾವಿಡ್, ಅಗರ್ಕರ್ ಭೇಟಿ ಮಾಡಿದ ರೋಹಿತ್; ಆತಂಕದಲ್ಲಿ ಹಾರ್ದಿಕ್!
- Finance Bengaluru traffic: ಬೆಂಗಳೂರಿನ ಈ ಫ್ಲೈಓವರ್ ಮೇಲೆ ಬೈಕ್ ಬಿಟ್ಟು ಉಳಿದೆಲ್ಲವಕ್ಕೆ ನಿಷೇಧ, ಬದಲಿ ಮಾರ್ಗ ವಿವರ
- Movies "ನಾನೊಂದು ಮನೆ ಕಟ್ಟಿದ್ದೀನಿ.. ಮಾರಲಾಗದ ಮನೆ" ಎಂದಿದ್ದ ದ್ವಾರಕೀಶ್; ಎಲ್ಲಿದೆ ಆ ಮನೆ?
- Technology Samsung: ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ 7 ಜುಲೈನಲ್ಲಿ ಲಾಂಚ್ ಆಗುವ ಸಾಧ್ಯತೆ! ಬೆಲೆ, ಫೀಚರ್ಸ್ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾವರಣವಾಯ್ತು ಹೊಸ ಯಮಹಾ ವೈಝಡ್ಎಫ್-ಆರ್125 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ವೈಝಡ್ಎಫ್-ಆರ್125 ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಯಮಹಾ ಕಂಪನಿಯು ನವೀಕರಿಸಿ 2021ರ ವೈಝಡ್ಎಫ್-ಆರ್125 ಬೈಕನ್ನು ಅನಾವರನಗೊಳಿಸಲಾಗಿದೆ.
ಈ ಹೊಸ ಯಮಹಾ ವೈಝಡ್ಎಫ್-ಆರ್125 ಬೈಕನ್ನು ನವೀಕರಣದ ಭಾಗವಾಗಿ, ಸಂಪೂರ್ಣ ಎರಡು ಹೊಸ ಫೇರ್ಡ್ ಬಣ್ಣಗಳನ್ನು ಪಡೆಯುತ್ತದೆ. ಮೊದಲನೆಯದು ರೇಸಿಂಗ್ ಬ್ಲೂ ಬಣ್ಣವಾಗಿದ್ದು, ಮುಂಭಾಗದ ಫೆಂಡರ್ ಟೈಲ್ ವಿಭಾಗದಲ್ಲಿ ಗ್ರೇ ಬಣ್ಣವನ್ನು ಹೊಂದಿರುತ್ತದೆ ಮತ್ತು ಫೇರಿಂಗ್ನಲ್ಲಿ ಗ್ರಾಫಿಕ್ಸ್ ಆಗಿದೆ. ಈ ಬಣ್ಣದ ಆಯ್ಕೆಯು ಇದರ ಸಹೋದರರಾದ ವೈಝಡ್ಎಫ್-ಆರ್1 ಮತ್ತು ಝಡ್ಎಫ್-ಆರ್6 ಬೈಕುಗಳಿಂದ ಸ್ಫೂರ್ತಿ ಪಡೆದಿದೆ.
ಇತರ ಬಣ್ಣ ಆಯ್ಕೆಯು ಮುಂಭಾಗದ ಫೇರಿಂಗ್ ಮತ್ತು ಟೈಲ್ ವಿಭಾಗವು ವೈಟ್ ಲೈನ್ ಗಳೊಂದಿಗೆ ಫುಲ್ ಬ್ಲ್ಯಾಕ್ ಬಣ್ಣವನ್ನು ಹೊಂದಿರುತ್ತದೆ. ಯಮಹಾ ಈ ಬಣ್ಣವನ್ನು ಗೋಲ್ಡನ್ ಫೋರ್ಕ್ಗಳಿಂದ ಕೂಡಿದೆ, ಇದು ತನ್ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್
ಇದಲ್ಲದೆ 2021ರ ಯಮಹಾ ಆರ್125 ಸಹ ಲಿವರ್ ಗಾರ್ಡ್ ಗಳೊಂದಿಗೆ ಸ್ಟ್ಯಾಂಡರ್ಡ್ ಅಕ್ಸೇಸರೀಸ್ ಗಳೊಂದಿಗೆ ಬರುತ್ತದೆ. 2021ರ ಯಮಹಾ ಆರ್125 ಆಕರ್ಷಕ ಲುಕ್ ಅನ್ನು ಹೊಂದಿದೆ.
ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಯಮಹಾ ವೈಝಡ್ಎಫ್-ಆರ್125 ಬೈಕಿನಲ್ಲಿ 124 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್ಎಕ್ಸ್ ಬೈಕ್
ಈ ಎಂಜಿನ್ ಅನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಪ್ಡೇಟ್ ಮಾಡಲಾಗಿದೆ. ಇನ್ನು ಈ ಬೈಕಿನಲ್ಲಿ ಬ್ರೇಕಿಂಗ್, ಸಸ್ಪೆಂಕ್ಷನ್ ಮತ್ತು ಫೀಚರ್ ಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿದೆ.
2021ರ ಯಮಹಾ ಆರ್125 ಬೈಕಿನಲ್ಲಿ ಎಲ್ಇಡಿ ಹೆಡ್ಲ್ಯಾಂಪ್, ಟರ್ನ್ ಇಂಡಿಕೇಟರ್ಗಳನ್ನು ಹೊಂದಿರುವ ಟೇಲ್ ಲ್ಯಾಂಪ್, ಪೂರ್ಣ ಪ್ರಮಾಣದ ಎಲ್ಸಿಡಿ ಹೊಂದಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಪ್ಲಿಟ್-ಸ್ಟೈಲ್ ಸ್ಟೆಪ್-ಅಪ್ ಸೀಟುಗಳನ್ನು ಹೊಂದಿರಲಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್
ಯಮಹಾ ಆರ್125 ಬೈಕಿನಲ್ಲಿ ಸಸ್ಪೆಂಷನ್ಗಳಿಗಾಗಿ ಮುಂಭಾಗದಲ್ಲಿ ಅಪ್ ಸೈಡ್ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್ಗಳಿವೆ. ಬ್ರೇಕಿಂಗ್ಗಳಿಗಾಗಿ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 220 ಎಂಎಂ ರೋಟರ್ಗಳಿವೆ.
2021ರ ಯಮಹಾ ವೈಝಡ್ಎಫ್-ಆರ್125 ಬೈಕ್ ಈ ವರ್ಷದ ಅಂತ್ಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಯಮಹಾ ವೈಝಡ್ಎಫ್-ಆರ್125 ಬೈಕ್ ಭಾರತದಲ್ಲಿ ಬಿಡುಗಡೆಯಾಗುವುದರ ಬಗ್ಗೆ ಮಾಹಿತಿಗಳು ಬಹಿರಂಗವಾಗಿಲ್ಲ.