ಅನಾವರಣವಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 125, ಟುವೊನೊ 125 ಬೈಕ್‌ಗಳು

ಎಪ್ರಿಲಿಯಾ ಕಂಪನಿಯು ಇತ್ತೀಚೆಗೆ ತನ್ನ ಆರ್‍ಎಸ್ 125 ಮತ್ತು ಟುವೊನೊ 125 ಎಂಬ ಬೈಕ್‌ಗಳನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಿದೆ. ಎಪ್ರಿಲಿಯಾ ಆರ್‍ಎಸ್ 125 ಮತ್ತು ಟುವೊನೊ 125 ಎಂಬ ಎರಡು ಬೈಕ್‌ಗಳು ಹೊಸ ನವೀಕರಣಗಳನ್ನು ಪಡೆದುಕೊಂಡಿವೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 125, ಟುವೊನೊ 125 ಬೈಕ್‌ಗಳು

ಈ ಹೊಸ ಎಪ್ರಿಲಿಯಾ ಆರ್‍ಎಸ್ 125 ಮತ್ತು ಟುವೊನೊ 125 ಬೈಕ್‌ಗಳು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿವೆ. ಆದರೆ ಈ ಎರಡು ಬೈಕ್‌ಗಳನ್ನು ಭಾರತೀಯ ಮಾರುಕಟ್ಟೆಗಳಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ. ಎರಡು ಬೈಕ್‌ಗಳಲ್ಲಿ ಪ್ರಮುಖವಾದ ನವೀಕರಣಗಳನ್ನು ಪಡೆದುಕೊಂಡಿವೆ. ಇವೆರಡು ಬೈಕ್‌ಗಳು ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗುತ್ತಿದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 125, ಟುವೊನೊ 125 ಬೈಕ್‌ಗಳು

ಎಪ್ರಿಲಿಯಾ ಆರ್‍ಎಸ್ 125 ಮತ್ತು ಟುವೊನೊ 125 ಬೈಕ್‌ಗಳು ಈಗ ನಯವಾದ ಮತ್ತು ಮೊದಲಿಗಿಂತ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಪಡೆದುಕೊಂಡಿದೆ. ಇನ್ನು ಈ ಬೈಕ್‌ಗಳಲ್ಲಿ ಹೆಡ್‌ಲೈಟ್ ವಿನ್ಯಾಸವು ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ನಲ್ಲಿ ಕಂಡುಬರುವ ಎಲ್‌ಇಡಿ ಹೆಡ್‌ಲೈಟ್‌ಗೆ ಹೋಲುತ್ತದೆ, ಈ ಬೈಕ್ ಭಾರತದಲ್ಲಿ ಮಾರಾಟದಲ್ಲಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 125, ಟುವೊನೊ 125 ಬೈಕ್‌ಗಳು

ಇನ್ನು ಹೊಸ ಎಪ್ರಿಲಿಯಾ ಬೈಕ್‌ಗಳಲ್ಲಿ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಹೊಸ ಫುಲ್ ಡಿಜಿಟಲ್ ಎಲ್ಸಿಡಿ ಯುನಿಟ್ ಆಗಿ ದಾರಿ ಮಾಡಿಕೊಡುತ್ತದೆ, ಇದು ಪ್ರೀಮಿಯಂ ಅನುಭವವನ್ನು ನೀಡುತ್ತದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 125, ಟುವೊನೊ 125 ಬೈಕ್‌ಗಳು

ಇನ್ನು ಪ್ರಮುಖವಾಗಿ ಎಪ್ರಿಲಿಯಾ ಆರ್‍ಎಸ್ 125 ಮತ್ತು ಟುವೊನೊ 125 ಬೈಕ್‌ಗಳಲ್ಲಿ ಒಂದೇ ರೀತಿಯ 124 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,750 ಆರ್‌ಪಿಎಂನಲ್ಲಿ 15 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 125, ಟುವೊನೊ 125 ಬೈಕ್‌ಗಳು

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಸಹಜವಾಗಿ ಈ ಎಂಜಿನ್ ಅನ್ನು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಚಾಸಿಸ್ ಮತ್ತು ಕೆಲವು ಇತರ ಭಾಗಗಳು ಮೊದಲಿನಂತೆಯೇ ಇರುತ್ತವೆ. ಹಿಂಭಾಗ ವಿಶಾಲವಾದ ಟೈರ್ ಅನ್ನು ಹೊಂದಿದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 125, ಟುವೊನೊ 125 ಬೈಕ್‌ಗಳು

ಹೊಸ ಎಪ್ರಿಲಿಯಾ ಆರ್‍ಎಸ್ 125 ಮತ್ತು ಟುವೊನೊ 125 ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇವೆರಡರಲ್ಲಿ ಮುಂಭಾಗ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಪಡೆಯುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಅನಾವರಣವಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 125, ಟುವೊನೊ 125 ಬೈಕ್‌ಗಳು

ಇನ್ನು ಇರಡು ಬೈಕುಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇವೆರಡರಲ್ಲಿ ಒಂದೇ ರೀತಿಯ ಬ್ರೇಕಿಂಗ್ ಸಿಸ್ಟಂ ಅನ್ನು ಹೊಂದಿದೆ, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿರುವ ಡಿಸ್ಕ್ ಬ್ರೇಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಪಡೆಯುತ್ತದೆ.

ಅನಾವರಣವಾಯ್ತು ಹೊಸ ಎಪ್ರಿಲಿಯಾ ಆರ್‍ಎಸ್ 125, ಟುವೊನೊ 125 ಬೈಕ್‌ಗಳು

ಎಪ್ರಿಲಿಯಾ ಆರ್‍ಎಸ್ 125 ಮತ್ತು ಟುವೊನೊ 125 ಎಂಬ ಬೈಕ್‌ಗಳು ಶೀಘ್ರದಲ್ಲೇ ಯುರೋಪ್ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಭಾರತದಲ್ಲಿ ಇದೇ ಸರಣಿಯಲ್ಲಿ ಬಜಾಜ್ ಪಲ್ಸರ್ ಎನ್‌ಎಸ್‌125 ಮತ್ತು ಕೆಟಿಎಂ 125 ಡ್ಯೂಕ್ ಬೈಕ್‌ಗಳು ಇರುವುದರಿಂದ ಇಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

Most Read Articles

Kannada
English summary
2021 Aprilia RS 125 & Tuono 125 Revealed. Read In Kannada.
Story first published: Thursday, April 29, 2021, 18:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X