2021ರ ಬಿಎಂಡಬ್ಲ್ಯು ಎಸ್ 1000 ಆರ್ ಭಾರತದಲ್ಲಿ ಬಿಡುಗಡೆ

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ತನ್ನ ಜನಪ್ರಿಯ ಸೂಪರ್ ಬೈಕ್ ಮಾದರಿಯಾದ ಎಸ್ 1000 ಆರ್ 2021ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 17.90 ಲಕ್ಷ ಬೆಲೆ ಹೊಂದಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಭಾರತದಲ್ಲಿ ಬಿಡುಗಡೆ

ಎಸ್ 1000 ಆರ್ 2021ರ ಆವೃತ್ತಿಯನ್ನು ಬಿಡುಗಡೆಯೊಂದಿಗೆ ಹೊಸ ಬೈಕ್ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಶೀಘ್ರದಲ್ಲೇ ಬೈಕ್ ವಿತರಣೆ ಆರಂಭಿಸಲಿದ್ದು, ಹೊಸ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್, ಸ್ಪೋರ್ಟ್ ಮತ್ತು ಎಂ ಸ್ಪೋರ್ಟ್ ಎಂಬ ಮೂರು ವೆರಿಯೆಂಟ್ ಹೊಂದಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಭಾರತದಲ್ಲಿ ಬಿಡುಗಡೆ

ಹೊಸ ಬೈಕಿನ ಸ್ಟ್ಯಾಂಡರ್ಡ್ ಮಾದರಿಯು ರೂ. 17.90 ಲಕ್ಷ ಬೆಲೆ ಹೊಂದಿದ್ದರೆ ಸ್ಪೋರ್ಟ್ ಮಾದರಿಯು ರೂ. 19.75 ಲಕ್ಷ ಮತ್ತು ಎಂ ಸ್ಪೋರ್ಟ್ ಮಾದರಿಯು 22.00 ಲಕ್ಷ ಬೆಲೆ ಹೊಂದಿದ್ದು, ವಿವಿಧ ಏಳು ಬಣ್ಣಗಳ ಆಯ್ಕೆ ಪಡೆದುಕೊಂಡಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಭಾರತದಲ್ಲಿ ಬಿಡುಗಡೆ

ಸ್ಟ್ಯಾಂಡರ್ಡ್ ಮಾದರಿಯು ರೇಸಿಂಗ್ ರೆಡ್ ಬಣ್ಣದಲ್ಲಿ ಪ್ರೊ ಮಾದರಿಯು ಸಿಲ್ವರ್/ಮ್ಯಾಟೆ ಕಾಪರ್ ಬಣ್ಣದಲ್ಲಿ ಮತ್ತು ಎಂ ಸ್ಪೋರ್ಟ್ ಮಾದರಿಯು ಲೈಟ್ ಬ್ಲ್ಯೂ, ಡಾರ್ಕ್ ಬ್ಲ್ಯೂ ಮತ್ತು ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಭಾರತದಲ್ಲಿ ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಎಸ್ 1000 ಆರ್ 2021ರ ಆವೃತ್ತಿಯು ಇನ್ ಲೈನ್ ಫೋರ್ ಸಿಲಿಂಡರ್ ಪ್ರೇರಿತ 998 ಸಿಸಿ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ ಅಸಿಸ್ಟ್ ಕ್ಲಚ್ ಸೌಲಭ್ಯದೊಂದಿಗೆ 162-ಬಿಎಚ್‌ಪಿ ಮತ್ತು 114-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಭಾರತದಲ್ಲಿ ಬಿಡುಗಡೆ

ಹೊಸ ಮಾದರಿಯೊಂದಿಗೆ ಬಿಎಂಡಬ್ಲ್ಯು ಮೊಟೋರಾಡ್ ಕಂಪನಿಯ 4, 5 ಮತ್ತು 6ನೇ ಗೇರ್‌ನಲ್ಲಿ ಬೈಕಿನ ಆಕ್ಸೆಲೇಷನ್ ಹೆಚ್ಚಿಸಲು ಹಲವಾರು ಹೊಸ ಪ್ರಯೋಗಗಳನ್ನು ನಡೆಸಿದ್ದು, ಉತ್ತಮ ಕಾರ್ಯಕ್ಷಮತೆಯೊಂದಿಗೆ ಹೊಸ ಬೈಕ್ ಹಳೆಯ ಮಾದರಿಗಿಂತ 5 ಕೆ.ಜಿ ಯಷ್ಟು ತೂಕ ಕಡಿತ ಹೊಂದಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಭಾರತದಲ್ಲಿ ಬಿಡುಗಡೆ

ಜೊತೆಗೆ ಕಂಪನಿಯು ಹೊಸ ಬೈಕಿನ ತಾಂತ್ರಿಕ ಅಂಶಗಳಲ್ಲೂ ಸಾಕಷ್ಟು ಹೊಸ ಬದಲಾವಣೆ ಪರಿಚಯಿಸಿದ್ದು, ಸುಧಾರಿತ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್ಎಸ್, ಬಿ-ಡಿರೆಕ್ಷನಲ್ ಕ್ವಿಕ್ ಶಿಫ್ಟರ್ ಮತ್ತು ವಿವಿಧ ರೈಡ್ ಮೋಡ್, ಕೀ ಲೆಸ್ ಎಂಟ್ರಿ, ಹಿಟೆಡ್ ಗ್ರಿಪ್, ಎಂಜಿನ್ ಕೌಲ್ ನೀಡಲಾಗಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಭಾರತದಲ್ಲಿ ಬಿಡುಗಡೆ

ಇದಲ್ಲದೆ ಹೊಸ ಬೈಕಿನ ಫ್ಯೂಲ್ ಟ್ಯಾಂಕ್, ಎಕ್ಸಾಸ್ಟ್, ಟೈಲ್ ಲೈಟ್ ವಿನ್ಯಾಸವು ತುಸು ಬದಲಾವಣೆ ಹೊಂದಿದ್ದು, ಹೊಸ ಬೈಕಿನ ತೂಕ ಇಳಿಕೆಗಾಗಿ ಆರ್‍ಆರ್ ಮಾದರಿಯಿಂದ ಎರವಲು ಪಡೆದುಕೊಳ್ಳಲಾದ ಫ್ಲೆಕ್ಸ್ ಫ್ರೆಮ್ ಬಳಕೆಯು ಹೊಸ ಬೈಕಿನ ಪ್ರಮುಖ ಬದಲಾವಣೆಯಾಗಿದೆ.

2021ರ ಬಿಎಂಡಬ್ಲ್ಯು ಎಸ್ 1000 ಆರ್ ಭಾರತದಲ್ಲಿ ಬಿಡುಗಡೆ

ಹೊಸ ಬೈಕಿನಲ್ಲಿ ಕಂಪನಿಯು ಸ್ಟ್ಯಾಂಡರ್ಡ್ ಆಕ್ಸೆಸರಿಸ್ ಹೊರತುಪಡಿಸಿ ಇನ್ನು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್‌ ಮತ್ತು ಸ್ಪೋರ್ಟಿ ಲುಕ್ ಬಯಸುವ ಗ್ರಾಹಕರಿಗಾಗಿ ಎಂ ಸ್ಪೋರ್ಟ್ ಪ್ಯಾಕ್ ಆಫರ್ ಮಾಡುತ್ತಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲೂ ಹಲವಾರು ಫೀಚರ್ಸ್‌ಗಳಿವೆ.

Most Read Articles

Kannada
English summary
2021 BMW S 1000 R Launched In India At Rs 17.90 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X