Just In
- 44 min ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 1 hr ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 2 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 2 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ABP-CNX ಚುನಾವಣಾಪೂರ್ವ ಸಮೀಕ್ಷೆ: ಪಶ್ಚಿಮ ಬಂಗಾಳದಲ್ಲಿ ಹೇಗಿದೆ ಜನಾಭಿಪ್ರಾಯ?
- Sports
ಐಪಿಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Movies
ಬಿಗ್ಬಾಸ್: ಎರಡನೇ ವಾರಕ್ಕೆ ಐದು ಮಂದಿ ಮೇಲೆ ನಾಮಿನೇಷನ್ ಕತ್ತಿ
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರ ಹೋಂಡಾ ಸಿಬಿಆರ್150ಆರ್ ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ತನ್ನ 2021ರ ಸಿಬಿಆರ್150ಆರ್ ಬೈಕನ್ನು ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ ಪ್ರಮುಖ ನವೀಕರಣಗಳೊಂದಿಗೆ ಬಿಡುಗಡೆಯಾಗಿದೆ.

ಹೋಂಡಾ ಸಿಬಿಆರ್250ಆರ್‌ಆರ್ ಸ್ಪೋರ್ಟ್ಸ್ ಬೈಕಿನಿಂದ ಈ ಹೊಸ ಸಿಬಿಆರ್150ಆರ್ ಮಾದರಿಯು ಸ್ಟೈಲಿಂಗ್ ಅಂಶಗಳನ್ನು ಎರವಲು ಪಡೆದುಕೊಂಡಿದೆ. ಈಗ ಫ್ರಂಟ್ ಎಂಡ್ ಆಲ್-ಎಲ್ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ಬರುತ್ತದೆ, ಆದರೆ ಫೇರಿಂಗ್ ಮತ್ತು ಅಪ್‌ಸ್ವೆಪ್ಟ್ ಟೈಲ್ ವಿಭಾಗವು ತೀಕ್ಷ್ಣವಾಗಿದ್ದು, ಹೊಸ ಸಿಬಿಆರ್150ಆರ್ ಬೈಕ್ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಕಾಸ್ಮೆಟಿಕ್ ನವೀಕರಿಕಣಗಳ ಜೊತೆಗೆ 2021ರ ಹೋಂಡಾ ಸಿಬಿಆರ್150ಆರ್ ಬೈಕ್ ಶೋವಾದಿಂದ ಪಡೆದ ಹೊಸ ಗೋಲ್ಡನ್-ಪಿನಿಶ್ ಅಪ್ ಸೈಡ್ ಫೋರ್ಕ್‌ಗಳನ್ನು ಸಹ ಹೊಂದಿದೆ. ಭಾರತದಲ್ಲಿ ಮಾರಾಟವಾಗುವ ಹೋಂಡಾ ಹಾರ್ನೆಟ್ 2.0 ಸಹ ಇದೇ ರೀತಿಯ ಫೋರ್ಕ್‌ಗಳನ್ನು ಒಳಗೊಂಡಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಹೋಂಡಾ ಸಿಬಿಆರ್150ಆರ್ ಬೈಕಿನಲ್ಲಿರುವ ಯುನಿಟ್ ಪ್ರೀಮಿಯಂ ಎಸ್‌ಎಫ್‌ಎಫ್-ಬಿಪಿ ಪ್ರತ್ಯೇಕ ಕಾರ್ಯ ಬಿಗ್-ಪಿಸ್ಟನ್ ಫೋರ್ಕ್‌ಗಳು ಕವಾಸಕಿ ನಿಂಜಾ ಝಡ್ಎಕ್ಸ್ -25 ಆರ್ ನಲ್ಲಿ ಕಂಡುಬರುತ್ತವೆ.

ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕಿನಲ್ಲಿ 149ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 17.3 ಬಿಹೆಚ್‌ಪಿ ಪವರ್ ಮತ್ತು 14.4 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದರೊಂದಿಗೆ ಮೋಟಾರು ಈಗ ಸ್ಲಿಪ್ಪರ್ ಕ್ಲಚ್ ಅನ್ನು ಪಡೆದುಕೊಂಡಿದೆ, ಇದು ಲಿವರ್ ಪಕ್ರಿಯೆಯನ್ನು ಶೇ.15 ರಷ್ಟು ಕಡಿಮೆ ಮಾಡುತ್ತದೆ ಎಂದು ಹೋಂಡಾ ಹೇಳಿಕೊಂಡಿದೆ.

ಇನ್ನು ಹೊಸ ಹೋಂಡಾ ಸಿಬಿಆರ್150ಆರ್ ಬೈಕಿನಲ್ಲಿ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದು ಎಬಿಎಸ್ ವೆರಿಯೆಂಟ್ ನೊಂದಿಗೆ ಆಯ್ಕೆಯಾಗಿ ಲಭ್ಯವಿರುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೋಂಡಾ ತನ್ನ ಹೊಸ ಸಿಬಿಆರ್250ಆರ್‌ಆರ್ ಸ್ಪೋರ್ಟ್ಸ್ ಬೈಕನ್ನು ಮಲೇಷ್ಯಾದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿತ್ತು. ಈ ಬೈಕ್ ವರ್‌ಫುಲ್ ಎಂಜಿನ್ ಮತ್ತು ಹೊಸ ತಂತ್ರಜ್ಞಾನವನ್ನು ಹೊಂದಿದೆ. ಈ ಹೋಂಡಾ ಸಿಬಿಆರ್ 250 ಆರ್‌ಆರ್ ಮಾದರಿಯು ಯಮಹಾ ವೈಝೆಡ್-ಆರ್ 25 ಮತ್ತು ಕವಾಸಕಿ ನಿಂಜಾ 250 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ನವೀಕರಣದೊಂದಿಗೆ, ಹೊಸ ಹೋಂಡಾ ಸಿಬಿಆರ್150ಆರ್ ಮಾರುಕಟ್ಟೆಯಲ್ಲಿ ಯಮಹಾ ಆರ್15 ವಿ3 ಬೈಕಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಹೋಂಡಾ ಸಿಬಿಆರ್150ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.