ಹೊಸ ನವೀಕರಣಗಳೊಂದಿಗೆ ಅನಾವರಣವಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್

ಸುಜುಕಿ ಮೋಟಾರ್ ಕಾರ್ಪೊರೇಷನ್ ಕಂಪನಿಯು ತನ್ನ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕನ್ನು ಅನಾವರಣಗೊಳಿಸಿದೆ. ಈ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್ ನವೀಕರಿಸಿದ ಎಂಜಿನ್, ಸಂಪೂರ್ಣ ಮರುವಿನ್ಯಾಸ ಮತ್ತು ಹಲವಾರು ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣವಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್

ಈ ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಈ ಅವರ್ಷದ ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್ ವಿಶ್ವದ ಜನಪ್ರಿಯ 1,000ಸಿಸಿ ಬೈಕ್ ಗಳಲ್ಲಿ ಒಂದಾಗಿದೆ. ಇದು ಆರಾಮದಾಯಕ ಮತ್ತು ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ. ಅಲ್ಲದೇ ಹಿಂದಿನ ಮಾದರಿಗೆ ಹೋಲಿಸಿದರೆ ಈ ಹೊಸ ಬೈಕ್ ಹಲವಾರು ನವೀಕರಣಗಳನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣವಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್

ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕಿನ ನವೀಕರಿಸಿದ ವಿನ್ಯಾಸ ಮತ್ತು ಸ್ಟೈಲಿಂಗ್ ಆಕರ್ಷಕವಾಗಿದೆ. ಈ ಬೈಕಿನಲ್ಲಿ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್‌ಗೆ ಹೊಚ್ಚಹೊಸ ಲುಕ್ ಅನ್ನು ನೀಡುತ್ತದೆ. ಇನ್ನು ಇದು ಲಂಬವಾಗಿ ಜೋಡಿಸಲಾದ ಎಲ್ಇಡಿಗಳನ್ನು ಪಡೆಯುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ನವೀಕರಣಗಳೊಂದಿಗೆ ಅನಾವರಣವಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್

ಹಿಂದಿನ ಮಾದರಿಯ ಕ್ರೀಸ್‌ಗಳನ್ನು ತೀಕ್ಷ್ಣವಾದ ಮತ್ತು ಶಾರ್ಪ್ ಆದ ಸ್ಟೈಲಿಂಗ್‌ನಿಂದ ಬದಲಾಯಿಸಲಾಗಿದೆ. ಇನ್ನು ಇದರ ಫ್ಯೂಯಲ್ ಟ್ಯಾಂಕ್ ಮೊದಲಿಗಿಂತಲೂ ವಿಭಿನ್ನ ವಿನ್ಯಾಸದಲ್ಲಿದೆ. ಇದರ ಪರಿಣಾಮವಾಗಿ ಈ ಬೈಕ್ ದೊಡ್ಡದಾಗಿ ಕಾಣುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣವಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್

ಹಿಂಭಾಗದ ಕೊನೆಯಲ್ಲಿ ಹೊಸ ಕೌಲಿಂಗ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ತುಂಬಾ ಸ್ಟೈಲಿಶ್ ಆಗಿದೆ. ಇನ್ನು ಇದರ ಎಕ್ಸಾಸ್ಟ್ ಎಂಡ್-ಕ್ಯಾನ್ ಬೈಕಿಗೆ ಸ್ಟೈಲಿಂಗ್ ಅಂಶವಾಗಿ ಸೇರಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ನವೀಕರಣಗಳೊಂದಿಗೆ ಅನಾವರಣವಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್

ಈ 2021ರ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕಿನ ಹಿಂದಿನ ಮಾದರಿಲ್ಲಿ ಇರುವ ಅದೇ , 999 ಸಿಸಿ, ಇನ್-ಲೈನ್ ನಾಲ್ಕು-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 11,000 ಆರ್‌ಪಿಎಂನಲ್ಲಿ 150.19 ಬಿಹೆಚ್‌ಪಿ ಮತ್ತು 9,250 ಆರ್‌ಪಿಎಂನಲ್ಲಿ 105 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣವಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್

ಈ ಬೈಕಿನಲ್ಲಿ ಸುಜುಕಿ ಇಂಟೆಲಿಜೆಂಟ್ ರೈಡ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಎಲೆಕ್ಟ್ರಾನಿಕ್ ಥ್ರೊಟಲ್ ಕಂಟ್ರೋಲ್ ನೊಂದಿಗೆ ಎಕ್ಸಾಸ್ಟ್ ಇನ್ ಟೆಕ್ ಸಿಸ್ಟಂ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ನವೀಕರಣಗಳೊಂದಿಗೆ ಅನಾವರಣವಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್

ಹಿಂದಿನ ಮಾದರಿಗಿಂತ ಈ ಬೈಕಿನ ಥ್ರೊಟಲ್ ರೆಸ್ಪಾನ್ ಹೆಚ್ಚಿಸಿದೆ. ಇನ್ನು ಈ ಬೈಕಿನ ಎಂಜಿನ್ ಅನ್ನು ಬಿಎಸ್-6 ಮತ್ತು ಯುರೋ 5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಈ ಬೈಕಿನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಎಲ್ಸಿಡಿ ಇನ್ಸ್ ಟ್ರೂಮೆಂಟ್ ಮತ್ತು ಇನ್ನಿತರ ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣವಾಯ್ತು ಹೊಸ ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್

ಹೊಸ ನವೀಕರಣಗಳೊಂದಿಗೆ, ಸುಜುಕಿ ಜಿಎಸ್ಎಕ್ಸ್-ಎಸ್1000 ಬೈಕ್ ಆಕರ್ಷಕ ಲುಕ್ ಮತ್ತು ನೂತನ ತಂತ್ರಜ್ಙಾನಗಳೊಂದಿಗೆ ರೈಡರ್ ಸ್ನೇಹಿಯಾಗಿ ಮುಂದುವರಿಯುತ್ತದೆ. ಸುಜುಕಿ ಈ ವರ್ಷದ ಕೊನೆಯಲ್ಲಿ ಹೊಸ ನವೀಕರಿಸಿದ ಜಿಎಸ್ಎಕ್ಸ್-ಎಸ್ 1000 ಬೈಕನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ.

Most Read Articles

Kannada
English summary
All-New Suzuki GSX-S1000 Unveiled. Read In Kannada.
Story first published: Tuesday, April 27, 2021, 9:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X