ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಬೊನೆವೆಲ್ಲಿ ಸರಣಿಯಲ್ಲಿರುವ ಬೈಕುಗಳನ್ನು ಅನಾವರಣಗೊಳಿಸಿದೆ. ಬೊನೆವೆಲ್ಲಿ ಸರಣಿಯಲ್ಲಿರುವ ಬೈಕುಗಳನ್ನು ಯುರೋ 5 ಮತ್ತು ಬಿಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ.

ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಟ್ರಯಂಫ್ ತನ್ನ ಬೊನೆವೆಲ್ಲಿ ಸರಣಿಯಲ್ಲಿರುವ ಬೈಕುಗಳ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಹೆಚ್ಚಿನ ವಿಶೇಷಣಗಳನ್ನು ಒಳಗೊಂಡಂತೆ ಒಟ್ಟಾರೆ ಸುಧಾರಣೆಗಳನ್ನು ನಡೆಸಿದೆ. ಇನ್ನು ಬೊನೆವೆಲ್ಲಿ ಸ್ಕ್ರ್ಯಾಂಬ್ಲರ್ ಸರಣಿಯನ್ನು ಟ್ರಯಂಫ್ ಏಪ್ರಿಲ್ ತಿಂಗಳಲ್ಲಿ ಅನಾವಣಗೊಳಿಸಿದೆ. ಇದೀಗ ಬೊನೆವೆಲ್ಲಿ ಸರಣಿಯ ಬೊನೆವೆಲ್ಲಿ ಟಿ100, ಟಿ120, ಸ್ಟ್ರೀಟ್ ಟ್ವಿನ್, ಟ್ವಿನ್ ಗೋಲ್ಡ್ ಲೈನ್, ಸ್ಪೀಡ್ ಮಾಸ್ಟರ್ ಮತ್ತು ಬೊನೆವೆಲ್ಲಿ ಬಾಬ್ಬರ್ ಒಳಗೊಂಡಿದೆ.

ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಟ್ರಯಂಫ್ ಬೊನೆವೆಲ್ಲಿ ಟಿ120

ಈ ಹೊಸ ಟ್ರಯಂಫ್ ಬೊನೆವೆಲ್ಲಿ ಟಿ120 ಕ್ಲಾಸಿಕ್ ರೆಟ್ರೊ-ರೋಡ್ಸ್ಟರ್ ಆಗಿದ್ದು, ಇದರಲ್ಲಿ 1,200 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6,550 ಆರ್‌ಪಿಎಂನಲ್ಲಿ 78 ಬಿಹೆಚ್‌ಪಿ ಮತ್ತು 3,500 ಆರ್‌ಪಿಎಂನಲ್ಲಿ 150 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಬೊನೆವೆಲ್ಲಿ ಟಿ120 ಬೈಕ್ ಬ್ರ್ಯಾಂಡಿಂಗ್ ಮತ್ತು ಸ್ಟ್ಯಾಂಡರ್ಡ್ ಕ್ರೂಸ್ ಕಂಟ್ರೋಲ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಇನ್ನು ಈ ಬೈಕಿನಲ್ಲಿ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಂಯೋಜಿಸಲಾಗಿದೆ.

ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಟ್ರಯಂಫ್ ಬೊನೆವೆಲ್ಲಿ ಟಿ100

ಹೊಸ ಟ್ರಯಂಫ್ ಬೊನೆವೆಲ್ಲಿ ಟಿ100 ಹೆಚ್ಚು ಪವರ್ ಫುಲ್ ಆಗಿದೆ. ಈ ಬೈಕಿನಲ್ಲಿ 900 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 64 ಬಿಹೆಚ್‌ಪಿ ಪವರ್ ಮತ್ತು 80 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಟ್ರಯಂಫ್ ಬೊನೆವೆಲ್ಲಿ ಸ್ಟ್ರೀಟ್ ಟ್ವಿನ್

2021ರ ಟ್ರಯಂಫ್ ಸ್ಟ್ರೀಟ್ ಟ್ವಿನ್ ಸಹ ಗಮನಾರ್ಹವಾಗಿ ನವೀಕರಿಸಲ್ಪದೆ. ಈ ಹೊಸ ಬೈಕಿನಲ್ಲಿ 900 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 64 ಬಿಹೆಚ್‌ಪಿ ಪವರ್ ಮತ್ತು 3,800 ಆರ್‌ಪಿಎಂನಲ್ಲಿ 80 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಇನ್ನು ಟ್ರಯಂಫ್ ಬೊನೆವೆಲ್ಲಿ ಸ್ಟ್ರೀಟ್ ಟ್ವಿನ್ ಬೈಕಿನ ಸೀಟ್ 765 ಎಂಎಂ ಎತ್ತರವಿದೆ. ಹೊಸ ಸ್ಟ್ರೀಟ್ ಟ್ವಿನ್ ಎರಡು ರೈಡಿಂಗ್ ಮೋಡ್‌ಗಳನ್ನು ಪಡೆಯುತ್ತದೆ. ಈ ಬೈಕ್ ಎಲ್ಇಡಿ ರಿಯರ್ ಲೈಟ್, ಎಬಿಎಸ್ ಮತ್ತು ಸ್ವಿಚ್ ಮಾಡಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನುಒಳಗೊಂಡಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಟ್ರಯಂಫ್ ಬೊನೆವೆಲ್ಲಿ ಸ್ಟ್ರೀಟ್ ಟ್ವಿನ್ ಗೋಲ್ಡ್ ಲೈನ್

ಸ್ಟ್ರೀಟ್ ಟ್ವಿನ್ ಗೋಲ್ಡ್ ಲೈನ್ ಸೀಮಿತ ಆವೃತ್ತಿಯು ಸೊಗಸಾದ ಚಿನ್ನದ ಪಿನ್ ಪಟ್ಟೆ, ಕಸ್ಟಮ್ ಸ್ಟ್ರೀಟ್ ಟ್ವಿನ್ ಲೋಗೊವನ್ನು ಒಳಗೊಂಡಿರುವ ಹೊಸ ಸೈಡ್ ಪ್ಯಾನೆಲ್‌ನಂತೆ. ಸ್ಟ್ರೀಟ್ ಟ್ವಿನ್ ಗೋಲ್ಡ್ ಲೈನ್ ಅಂದವಾದ ಕಸ್ಟಮ್ ಆವೃತ್ತಿಯಾಗಿದ್ದು, ಇದು 1,000 ಯುನಿಟ್ ಗಳಿಗೆ ಸಿಮಿತಗೊಳಿಸಲಾಗುತ್ತದೆ.

ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಟ್ರಯಂಫ್ ಬೊನೆವೆಲ್ಲಿ ಸ್ಪೀಡ್‌ಮಾಸ್ಟರ್

ಈ ಹೊಸ ಟ್ರಯಂಫ್ ಬೊನೆವೆಲ್ಲಿ ಸ್ಪೀಡ್‌ಮಾಸ್ಟರ್ 1,200 ಸಿಸಿ ಪ್ಯಾರೆಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 77 ಬಿಹೆಚ್‌ಪಿ ಮತ್ತು 106 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು 2021ರ ಟ್ರಯಂಫ್ ಬೊನೆವೆಲ್ಲಿ ಸರಣಿಯ ಬೈಕುಗಳು

ಟ್ರಯಂಫ್ ಬೊನೆವೆಲ್ಲಿ ಬಾಬ್ಬರ್

ಈ ಹೊಸ ಬೈಕ್ 47 ಎಂಎಂ ಶೋವಾ ಕಾರ್ಟ್ರಿಡ್ಜ್ ಫೋರ್ಕ್‌ಗಳನ್ನು ಮತ್ತು ಹಿಂಭಾಗ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಎಬಿಎಸ್ ಮತ್ತು ಬದಲಾಯಿಸಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ನೀಡಲಾಗಿದೆ.

Most Read Articles

Kannada
English summary
2021 Triumph Bonneville Range Unveiled. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X