Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 3 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 4 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಬೈಕ್ ಬಿಡುಗಡೆ
ಟ್ರಯಂಫ್ ಮೋಟಾರ್ಸೈಕಲ್ ಕಂಪನಿಯು ತನ್ನ ಜನಪ್ರಿಯ ಬೈಕ್ ಸರಣಿಯ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಮಾದರಿಯ 2021ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಬೈಕ್ ಮಾದರಿಯು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 16.95 ಲಕ್ಷ ಬೆಲೆ ಹೊಂದಿದೆ.

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಮಾದರಿಯು ಈ ಬಾರಿ ಹಲವಾರು ಉನ್ನತೀಕರಿಸಿದ ತಾಂತ್ರಿಕ ಅಂಶಗಳೊಂದಿಗೆ ಹೊಸ ವಿನ್ಯಾಸ ಪಡೆದುಕೊಂಡಿದ್ದು, ಹೊಸ ಮೋಟಾರ್ಸೈಕಲ್ ಖರೀದಿಗಾಗಿ ಕಂಪನಿಯು ಈಗಾಗಲೇ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದೆ. ಮುಂಬರುವ ಕೆಲವೇ ದಿನಗಳಲ್ಲಿ ಹೊಸ ಬೈಕ್ ವಿತರಣೆಯು ಆರಂಭವಾಗಲಿದ್ದು, ಹೊಸ ಬೈಕ್ ಮಾದರಿಯು ಟ್ರಯಂಫ್ ಕಂಪನಿಯ ರೋಡ್ಸ್ಟರ್ ಸರಣಿಯೊಂದಿಗೆ ಹಲವಾರು ತಾಂತ್ರಿಕ ಅಂಶಗಳನ್ನು ಹಂಚಿಕೊಂಡಿದೆ.

ಲಗ್ಷುರಿ ಫೀಚರ್ಸ್ಗಳೊಂದಿಗೆ ಪರ್ಫಾಮೆನ್ಸ್ಗೂ ಹೆಚ್ಚಿನ ಒತ್ತು ನೀಡಿರುವ ಟ್ರಯಂಫ್ ಕಂಪನಿಯು 2021ರ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಬೈಕ್ ಮಾದರಿಯನ್ನು ಹೊಸದಾಗಿ ಅಲ್ಯುಮಿನಿಯಂ ಚಾರ್ಸಿಸ್ ಮೇಲೆ ಅಭಿವೃದ್ದಿಗೊಳಿಸಿದೆ.

ಹೊಸ ಅಲ್ಯುಮಿನಿಯಂ ಚಾರ್ಸಿಸ್ನಿಂದಾಗಿ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಬೈಕ್ ಮಾದರಿಯ ತೂಕದಲ್ಲಿ ಹಳೆಯ ಮಾದರಿಗಿಂತ 10 ಕೆಜಿ ತಗ್ಗಿದ್ದು, ಹೊಸ ಬೈಕ್ ಮಾದರಿಯು ಒಟ್ಟು 198 ಕೆಜಿ ತೂಕ ಹೊಂದಿದೆ.

ಹೊಸ ಬೈಕಿಗೆ ಮತ್ತಷ್ಟು ಬಲಿಷ್ಠತೆ ನೀಡಲು ಹೊಸ ಚಾರ್ಚಿಸ್ ಜೊತೆ ಸ್ಪೋರ್ಟಿ ಲುಕ್ ಹೆಚ್ಚಿಸಲಾಗಿದ್ದು, ಆರ್ಎಸ್ ಗ್ರಾಫಿಕ್ಸ್ ಬ್ಯಾಡ್ಜ್ ಮತ್ತಷ್ಟು ಆಕರ್ಷಕವಾಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಶಾರ್ಪ್ ಲುಕ್ ಹೊಂದಿರುವ ಬೆಲ್ಲಿ ಪಾನ್, ಹಿಂಬದಿಯಲ್ಲಿ ಸೀಟ್ ಕೌಲ್, ಕಾರ್ಬನ್ ಫೈಬರ್ ಫೆಂಡರ್, ಎಲ್ಇಡಿ ಹೆಡ್ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್ಎಲ್ಎಸ್, ಎಲ್ಇಡಿ ಟೈಲ್ಲೈಟ್ಸ್ ನೀಡಲಾಗಿದೆ.

2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಮಾದರಿಯಲ್ಲಿ ಈ ಬಾರಿ ಹೊಸದಾಗಿ ಸಫೈರ್ ಬ್ಲ್ಯಾಕ್ ಮತ್ತು ಮ್ಯಾಟೆ ಸಿಲ್ವರ್ ಐಸ್ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಮೈ ಟ್ರಯಂಫ್ ಕನೆಕ್ಟೆಡ್ ಫೀಚರ್ಸ್ ಹೊಂದಿರುವ 5 ಇಂಚಿನ ಟಿಎಫ್ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬೈಕ್ ರೈಡಿಂಗ್ ಅನ್ನು ಮತ್ತಷ್ಟು ಸುರಕ್ಷಿತವಾಗಿಸಲಿದೆ.

ಹೊಸ ಕನೆಕ್ಟೆಡ್ ಫೀಚರ್ಸ್ ಮೂಲಕ ಕೀ ಲೆಸ್ ಇಗ್ನಿಷನ್, ಗೊ ಪ್ರೊ ಕಂಟ್ರೋಲ್, ಎಲೆಕ್ಟ್ರಾನಿಕ್ ಮೂಲಕ ನಿಯಂತ್ರಿತ 6 ಆಕ್ಸಿಸ್ ಐಎಂಯು, ಕಾರ್ನರಿಂಗ್ ಎಬಿಎಸ್, ಲಾಂಚ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ನಿಯಂತ್ರಿಸಬಹುದಾಗಿದೆ.

ಇದಲ್ಲದೆ ಹೊಸ ಬೈಕಿನಲ್ಲಿ ರೋಡ್, ರೈನ್, ಸ್ಪೋರ್ಟ್, ಟ್ರ್ಯಾಕ್ ಮತ್ತು ರೈಡರ್ ಮೋಡ್ಗಳನ್ನು ನೀಡಲಾಗಿದ್ದು, ಮಂಭಾಗದ ಚಕ್ರದಲ್ಲಿ 43ಎಂಎಂ ಎನ್ಐಎಕ್ಸ್30 ಅಪ್ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದ ಚಕ್ರದಲ್ಲಿ ಟಿಟಿಎಕ್ಸ್36 ಮೊನೊ ಶಾಕ್ ಸಸ್ಷೆಷನ್ ನೀಡಲಾಗಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್
ಸ್ಪೀಡ್ ಟ್ರಿಪಲ್ 1200 ಆರ್ಎಸ್ ಬೈಕ್ನಲ್ಲಿ ಟ್ರಯಂಫ್ ಕಂಪನಿಯು 1160 ಸಿಸಿ ತ್ರಿ ಸಿಲಿಂಡರ್ ಎಂಜಿನ್ ಹೊಂದಿದ್ದು, ಆರು ಸ್ಪೀಡಿನ ಕ್ವಿಕ್ ಶಿಫ್ಟರ್ ಗೇರ್ಬಾಕ್ಸ್ನೊಂದಿಗೆ 178-ಬಿಎಚ್ಪಿ, 125-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಇನ್ನು ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದ್ದು, ಬಿಎಂಡಬ್ಲ್ಯು ಎಸ್1000ಆರ್, ಕೆಟಿಎಂ 1290 ಸೂಪರ್ ಡ್ಯೂಕ್ ಸೇರಿದಂತೆ ಹಲವು ಬೈಕ್ ಮಾದರಿಗಳಿಗೆ ಸ್ಪೀಡ್ ಟ್ರಿಪಲ್ 1200 ಆರ್ಎಸ್ ಪ್ರಬಲ ಪೈಪೋಟಿ ನೀಡಲಿದೆ.