ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಟೈಗರ್ 850 ಸ್ಪೋರ್ಟ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೊರೂಂ ಪ್ರಕಾರ ರೂ.11.95 ಲಕ್ಷಗಳಾಗಿದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಟ್ರಯಂಫ್ ಟೈಗರ್ 850 ಸ್ಪೋರ್ಟ್ ಕಂಪನಿಯ ಎಂಟ್ರಿ-ಲೆವೆಲ್ ಅಡ್ವೆಂಚರ್-ಟೂರರ್ ಬೈಕ್ ಆಗಿದೆ. ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಇದರ ದೊಡ್ಡಣ್ಣ ಟೈಗರ್ 900 ಮಾದರಿಯ ಕೆಳಗಿನ ಸ್ಥಾನದಲ್ಲಿರುತ್ತದೆ. ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ರಸ್ತೆ ಆಧಾರಿತ ಮಾದರಿಯಾಗಿದೆ. ಟೈಗರ್ 900 ಮಾದರಿಯ ಎಂಜಿನ್‌ನ ಡಿ-ಟ್ಯೂನ್ಡ್ ಆವೃತ್ತಿಯನ್ನು ಈ ಹೊಸ ಬೈಕಿನಲ್ಲಿ ಅಳವಡಿಸಲಾಗಿದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನಲ್ಲಿ ಅದೇ 888ಸಿಸಿ ಇನ್-ಲೈನ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8500 ಆರ್‌ಪಿಎಂನಲ್ಲಿ 85 ಬಿಹೆಚ್‌ಪಿ ಪವರ್ ಮತ್ತು 6500 ಆರ್‌ಪಿಎಂನಲ್ಲಿ 82 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಇನ್ನು ಎಂಜಿನ್ ಅನ್ನು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.ಹೊಸ ಟೈಗರ್ 850 ನಲ್ಲಿನ ಎಂಜಿನ್ ಅದೇ ಟಿ-ಪ್ಲೇನ್ ಕ್ರ್ಯಾಂಕ್ ಅನ್ನು 1-3-2 ಫೈರಿಂಗ್ ಆರ್ಡರ್ ನೊಂದಿಗೆ ಮುಂದಕ್ಕೆ ಸಾಗಿಸುತ್ತದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ರೈನ್ ಮತ್ತು ರೋಡ್ ಎಂಬ ರೈಡಿಂಗ್ ಮೋಡ್‌ಗಳನ್ನು ಸಹ ಒಳಗೊಂಡಿದೆ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳಲು ಇದು ಥ್ರೊಟಲ್ ರೆಸ್ಪಾನ್ಸ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸೆಟ್ಟಿಂಗ್‌ಗಳನ್ನು ಮತ್ತಷ್ಟು ಬದಲಾಯಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಟ್ರಯಂಫ್ ಟೈಗರ್ 850 ಸ್ಪೋರ್ಟ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡುವ ಆಯ್ಕೆಯನ್ನು ಹೊಂದಿದೆ .ಈ ಸೆಟ್ಟಿಂಗ್‌ಗಳನ್ನು ಹ್ಯಾಂಡಲ್‌ಬಾರ್‌ನಲ್ಲಿರುವ ಸ್ವಿಚ್‌ಗಳ ಮೂಲಕ 5.0-ಇಂಚಿನ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನಿಯಂತ್ರಿಸಬಹುದು, ರೈಡರಿಗೆ ಈ ಕ್ಲಸ್ಟರ್ ಇತರ ಮಾಹಿತಿಯನ್ನು ಸಹ ನೀಡುತ್ತದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಮಾದರಿಯು ಟೈಗರ್ 900 ರಂತೆಯೇ ಅದೇ ಚಾಸಿಸ್ ಮತ್ತು ಫ್ರೇಮ್ ಅನ್ನು ಸಹ ಹೊಂದಿರುತ್ತದೆ. ಇದು ಬೋಲ್ಟ್-ಆನ್ ಅಲ್ಯೂಮಿನಿಯಂ ಹಿಂಭಾಗದ ಸಬ್-ಫ್ರೇಮ್ ಅನ್ನು ಒಳಗೊಂಡಿದೆ, ಇದು ಹಗುರವಾದ ಎಂಜಿನ್ ಜೊತೆಗೆ ಬೈಕಿನ ಒಟ್ಟಾರೆ ತೂಕದಲ್ಲಿ 7 ಕೆಜೆ ಯಷ್ಟು ಇಳಿಕೆಗೆ ಕಾರಣವಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 45 ಎಂಎಂ ಅಪ್ ಸೈಡ್ ಡೌನ್ ಫೋರ್ಕ್‌ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿರುತ್ತದೆ.ಇನ್ನು ಹಿಂಭಾಗವು 170 ಎಂಎಂ ಅನ್ನು ಮ್ಯಾನುವಲ್ ಪ್ರಿ ಲೋಡ್ ಹೊಂದಾಣಿಕೆಯೊಂದಿಗೆ ನೀಡುತ್ತದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡಬಲ್ 320ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 255ಎಂಎಂ ಡಿಸ್ಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಜೋಡಿಸಲಾಗುತ್ತದೆ.

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

850 ಮತ್ತು 900 ಮಾದರಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು, ಹೊಸ ಎಂಟ್ರಿ ಲೆವೆಲ್ ಬೈಕಿನ ಬಾಡಿ ಗ್ರಾಫಿಕ್ಸ್ ಜೊತೆಗೆ ವಿಭಿನ್ನ ಬಣ್ಣದ ಆಯ್ಕೆಗಳನ್ನು ನೀಡಿದೆ. ಈ ಹೊಸ ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಗ್ರ್ಯಾಫೈಟ್/ಡೈಯಬಲ್ ರೆಡ್ ಮತ್ತು ಗ್ರ್ಯಾಫೈಟ್/ಕ್ಯಾಸ್ಪಿಯನ್ ಬ್ಲೂ ಎಂಬ ಎರಡು ಡ್ಯುಯಲ್-ಟೋನ್ ಆಯ್ಕೆಗಳನ್ನು ಒಳಗೊಂಡಿದೆ:

ಹೊಸ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಬಿಡುಗಡೆ

ಟ್ರಯಂಫ್ ಟೈಗರ್ 850 ಸ್ಪೋರ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಎಂಟ್ರಿ-ಲೆವೆಲ್ ಅಡ್ವೆಂಚರ್-ಟೂರರ್ ಮಾದರಿಯಾಗಿದೆ. ಈ ಟ್ರಯಂಫ್ ಟೈಗರ್ 850 ಸ್ಪೋರ್ಟ್ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಫ್ 900 ಎಕ್ಸ್‌ಆರ್ ಬೈಕಿಗೆ ಪೈಫೋಟಿ ನೀಡುತ್ತದೆ.

Most Read Articles

Kannada
English summary
Triumph Tiger 850 Sport Adventure-Tourer Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X