ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಏರಾಕ್ಸ್ 155 ಸ್ಕೂಟರ್

ಜನಪ್ರಿಯ ದ್ವಿಚಕ್ರ ಉತ್ಪಾದನಾ ಕಂಪನಿಯಾದ ಯಮಹಾ ತನ್ನ 2021ರ ಏರಾಕ್ಸ್ 155 ಸ್ಕೂಟರ್ ಅನ್ನು ಥೈಲ್ಯಾಂಡ್‌ನಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಯಮಹಾ ಏರಾಕ್ಸ್ 155 ಸ್ಕೂಟರ್ ಕಾಸ್ಮೆಟಿಕ್ ಅಪ್ದೇಟ್ ಅನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಏರಾಕ್ಸ್ 155 ಸ್ಕೂಟರ್

2021ರ ಯಮಹಾ ಸ್ಕೂಟರ್ ತೀಕ್ಷ್ಣವಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಶಾರ್ಪ್ ಆಗಿ ಇಂಡಿಕೇಟರ್ ಅನ್ನು ಸಂಯೋಜಿಸಲಾಗಿದೆ. ಇನ್ನು ಟೈಲ್ ಗೇಟ್ ಅನ್ನು ಸಹ ಮರುವಿನ್ಯಾಸಗೊಳಿಸಲಾಗಿದೆ, ಸ್ಕೂಟರ್ ಹೊಸ ಸ್ಲಿಮ್ ಎಲ್ಇಡಿ ಟೈಲೈಟ್ ಅನ್ನು ಪಡೆಯುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಏರಾಕ್ಸ್ 155 ಸ್ಕೂಟರ್

ಇದಲ್ಲದೆ, ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ ನಲ್ಲಿ ಹೊಸ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಸಂಯೋಜಿಸಲಾಗಿದೆ. ಈ ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಏರಾಕ್ಸ್ 155 ಸ್ಕೂಟರ್

ಇನ್ನು ವಾಹನಗಳ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ. ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್‌ನಲ್ಲಿ ಯಮಹಾ ಆರ್15 ವಿ3.0 ಮಾದರಿಯಲ್ಲಿರುವ ಅದೇ 155ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಏರಾಕ್ಸ್ 155 ಸ್ಕೂಟರ್

ಈ ಎಂಜಿನ್ 15.4 ಬಿಹೆಚ್‍ಪಿ ಪವರ್ ಮತ್ತು 13.8 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆರ್15 ಮಾದರಿಯಲ್ಲಿ ಕಂಡುಬರುವ 6-ಸ್ಪೀಡ್ ಗೇರ್‌ಬಾಕ್ಸ್‌ಗಿಂತ ಭಿನ್ನವಾಗಿ, ಸ್ಕೂಟರ್ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಪಡೆಯುತ್ತದೆ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಏರಾಕ್ಸ್ 155 ಸ್ಕೂಟರ್

ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್‌ನ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು 4.6 ಲೀಟರ್‌ನಿಂದ 5.5 ಲೀಟರ್‌ಗೆ ಹೆಚ್ಚಿಸಲಾಗಿದೆ. ಇನ್ನು ಈ ಏರೋಕ್ಸ್ 155 ಸ್ಕೂಟರ್‌ನಲ್ಲಿ 14 ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಏರಾಕ್ಸ್ 155 ಸ್ಕೂಟರ್

ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಟ್ವಿನ್ ಗ್ಯಾಸ್-ಚಾರ್ಜ್ಡ್ ಶಾಕರ್‌ಗಳನ್ನು ಪಡೆಯುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಏರಾಕ್ಸ್ 155 ಸ್ಕೂಟರ್

ಇನ್ನು ಈ ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಉತ್ತಮವಾಗಿದೆ. ಬ್ರೇಕಿಂಗ್ ಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಆಳವಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಏರಾಕ್ಸ್ 155 ಸ್ಕೂಟರ್

ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ 25 ಲೀಟರ್ ಅಂಡರ್-ಸೀಟ್ ಸ್ಟೋರೇಜ್, ಯುಎಸ್ಬಿ ಮೊಬೈಲ್ ಚಾರ್ಜರ್ ಮತ್ತು ಸ್ಮಾರ್ಟ್ ಕೀ ಅನ್ನು ಒಳಗೊಂಡಿದೆ. ಇನ್ನು ವೈ-ಕನೆಕ್ಟ್ ಟೆಕ್ ನೀಡಿದ್ದು, ಇದು ಸವಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಸ್ಕೂಟರ್‌ಗೆ ಕನೆಕ್ಟ್ ಮಾಡಲು ನೆರವಾಗುತ್ತದೆ.

Most Read Articles

Kannada
Read more on ಯಮಹಾ yamaha
English summary
Updated 2021 Yamaha Aerox 155 Launched. Read In Kannada.
Story first published: Tuesday, February 9, 2021, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X