ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

ಯಮಹಾ ಕಂಪನಿಯು ತನ್ನ 2021ರ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ ಅನ್ನು ತಾಯಿನಾಡು ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ 2021ರ ಯಮಹಾ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ ಸಾಕಷ್ಟು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

2021ರ ಯಮಹಾ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ನಲ್ಲಿ ಪರಿಷ್ಕೃತ 124 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಪಡೆಯುತ್ತದೆ, ಇದು ಈಗ ಯುರೋ 5 ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಈ ಎಂಜಿನ್ 11.8 ಬಿಹೆಚ್‍ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇದು ಮೊದಲಿನಂತೆಯೇ ಪವರ್ ಅನ್ನು ಉತ್ಪಾದಿಸುತ್ತಿದೆ. ಇನ್ನು ಈ ಎಂಜಿನ್ 11 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

ಹೊಸ ಯಮಹಾ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ ವಿವಿಎ (ವೇರಿಯಬಲ್ ವಾಲ್ವ್ ಆಕ್ಟಿವೇಷನ್) ತಂತ್ರಜ್ಞಾನವನ್ನು ಸಹ ಪಡೆಯುತ್ತದೆ, ಇದು ಇಂಧನ ದಕ್ಷತೆಯನ್ನು ಸುಧಾರಿಸಲು ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಜೊತೆಗೆ ಪವರ್ ಡೆಲಿವಿರಿ ಸುಧಾರಿಸುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

ಹೊಸ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ಡ್ಯುಯಲ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್ ಮತ್ತು ಎಲ್ಇಡಿ ಟೈಲ್‌ಲೈಟ್ ಇದೆ. ಇನ್ನು ಈ ಸ್ಕೂಟರ್ ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿದೆ,

ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

ಇನ್ನು ಈ ಹೊಸ ಯಮಹಾ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ ಪಿಲಿಯನ್ ಗ್ರ್ಯಾಬ್ ರೈಲ್ ಹೊಂದಿರುವ ಸಿಂಗಲ್-ಪೀಸ್ ಸೀಟನ್ನು ಪಡೆಯುತ್ತದೆ. ಇನ್ನು ಈ ಸ್ಕೂಟರ್ ನಲ್ಲಿ .4 ಲೀಟರ್ ಗಳಷ್ಟು ದೊಡ್ಡದಾದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

ಈ ಸ್ಕೂಟರ್ 13 ಇಂಚಿನ ಬ್ಲ್ಯಾಕ್-ಔಟ್ ಅಲಾಯ್ ವ್ಹೀಲ್ಕ್ ಗಳನ್ನು ಎರಡೂ ಕಡೆಗೆಗಳಲ್ಲಿ ನೀಡಲಾಗಿದೆ. ವಿಶೇಷವಾಗಿ ಈ ಹೊಸ ಸ್ಖೂಟರ್ ನಲ್ಲಿ ಬದಲಾಯಿಸಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಸಹ ಇಲ್ಲಿ ನೀಡಲಾಗಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

ಯಮಹಾ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಒಂದು ಜೋಡಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳ ಸೆಟಪ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

ಇನ್ನು ಸ್ಕೂಟರ್ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಈ ಮ್ಯಾಕ್ಸಿ-ಸ್ಕೂಟರ್ ಉತ್ತಮ ಬ್ರೇಕಿಂಗ್ ಸೆಟಪ್ ಅನ್ನು ಹೊಂದಿದೆ. ಇನ್ನು ಸಂಪೂರ್ಣ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ.

ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

ಇದು ಸ್ಮಾರ್ಟ್‌ಫೋನ್‌ಗಳಿಗೆ ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದು. ಯಮಹಾ ಮೈರೈಡ್ ಅಪ್ಲಿಕೇಶನ್ ಬಳಸಿ ಸವಾರನು ತಮ್ಮ ಫೋನ್‌ಗಳಲ್ಲಿ ಬ್ಯಾಟರಿ ಸ್ಥಿತಿ, ಇಂಧನ ಸ್ಥಿತಿ, ಇಂಧನ ಬಳಕೆಯ ಅಂಕಿ ಅಂಶಗಳು ಇತ್ಯಾದಿ ಮಾಹಿತಿಗಳನ್ನು ನೋಡಬಹುದು.

ಹೊಸ ತಂತ್ರಜ್ಞಾನಗಳೊಂದಿಗೆ ಬಿಡುಗಡೆಗೊಂಡ 2021ರ ಯಮಹಾ ಎನ್‌ಮ್ಯಾಕ್ಸ್ 125 ಸ್ಕೂಟರ್

2021ರ ಯಮಹಾ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಒಂದೇ ಮುಂಬರುವ ವರ್ಷಗಳಲ್ಲಿ ಈ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾದರೆ ಫ್ಯಾಸಿನೊ 125 ಸ್ಕೂಟರ್'ಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
2021 Yamaha Nmax 125 Launched With A Host Of Updates. Read In Kannada.
Story first published: Tuesday, May 25, 2021, 21:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X