67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಮಂಕಿ ಬೈಕ್ ಅನಾವರಣ

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ತನ್ನ ರೆಟ್ರೊ ಶೈಲಿಯ 2022ರ ಮಂಕಿ ಮಿನಿ-ಬೈಕ್ ಅನ್ನು ಅನಾವರಣಗೊಳಿಸಿದೆ. ಈ ಹೊಸ ಮಂಕಿ ಮಿನಿ-ಬೈಕ್ ಎಂಜಿನ್ ಮತ್ತು ವಿನ್ಯಾಸದಲ್ಲಿ ಕೆಲವು ಹೊಸ ನವೀಕರರಣಗಳನ್ನು ಪಡೆದುಕೊಂಡಿದೆ.

67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೊಂಡಾ ಮಂಕಿ ಬೈಕ್ ಅನಾವರಣ

ಹೋಂಡಾ ಮಂಕಿಯನ್ನು ಮೊದಲ ಬಾರಿಗೆ 1960ರ ದಶಕದಲ್ಲಿ ಪರಿಚಯಿಸಲಾಯಿತು, ಇದೀಗ ಮಾರ್ಡನ್ ಮಂಕಿ ಮಿನಿ ಬೈಕ್ ಹೊಸ 124 ಸಿಸಿ ಎಂಜಿನ್ ನೊಂದಿಗೆ ಬರುತ್ತದೆ. ಹೊಸ ಮಂಕಿ ಬೈಕಿನಲ್ಲಿ ಹಳೆಯ ಮಾದರಿಗೆ ಹೋಲುತ್ತದೆಯಾದರೂ, ಹೊಸ ಬಣ್ಣಗಳ ಆಯ್ಕೆಗಳನ್ನು ಮತ್ತು ಕೆಲವು ಸಣ್ಣ ಬದಲಾವಣೆಗಳನ್ನು ಪಡೆಯುತ್ತದೆ. ಇನ್ನು ಸವಾರರು ತಮ್ಮ ಆದ್ಯತೆಗೆ ಅನುಗುಣವಾಗಿ ಕಸ್ಟಮೈಸ್ ಮಾಡಲು ಅಕ್ಸೆಸರೀಸ್ ಸಹ ನೀಡಲಾಗುತ್ತದೆ. ಈ ಮಿನಿ ಬೈಕ್ ಹೆಚ್ಚಾಗಿ ಯುವ ಗಾಹಕರನ್ನು ಸೆಳೆಯುತ್ತದೆ.

67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೊಂಡಾ ಮಂಕಿ ಬೈಕ್ ಅನಾವರಣ

ಹೊಸ ಮಂಕಿ ಬೈಕ್ ಫುಲ್ ಎಲ್ಇಡಿ ಲೈಟಿಂಗ್ ನೊಂದಿಗೆ ಬರುತ್ತದೆ ಮತ್ತು ಬಟನ್ ಒತ್ತುವ ಸಮಯದಲ್ಲಿ ಲೈಟ್ ಫ್ಯ್ಲಾಶ್ ಆಗುವಂತಹ ಪುಶ್ ಬಟನ್ ಅನ್ನು ಪಡೆಯುತ್ತದೆ. ಹೊಂಡಾ ಪ್ರಕಾರ, ಈ ಮಿನಿ ಬೈಕ್ 107 ಕೆಜಿಯಿಂದ 104 ಕೆಜಿಗೆ ಇಳಿದಿದೆ,

67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೊಂಡಾ ಮಂಕಿ ಬೈಕ್ ಅನಾವರಣ

ಇನ್ನು ಹೊಂಡಾ ಮಂಕಿ ಬೈಕಿನ ಎಲೆಕ್ಟ್ರಾನಿಕ್ಸ್ ನಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇದರಲ್ಲಿ ಅದೇ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ. ಇನ್ನು ಐಎಂಯು ಯುನಿಟ್ ಅನ್ನು ಕೂಡ ಹೊಂದಿದೆ.

67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೊಂಡಾ ಮಂಕಿ ಬೈಕ್ ಅನಾವರಣ

ಈ ಹೊಸ ಹೊಂಡಾ ಮಂಕಿ ಬೈಕ್ 1,145 ಎಂಎಂ ವ್ಹೀಲ್ ಬೇಸ್ ನೀಡುತ್ತದೆ ಮತ್ತು 775 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಈ ಬೈಕಿನಲ್ಲಿ ಬ್ಲಾಕ್ ಪ್ಯಾಟರ್ನ್ ಟೈರ್ ಗಳನ್ನು ಹೊಂದಿದೆ.

67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೊಂಡಾ ಮಂಕಿ ಬೈಕ್ ಅನಾವರಣ

ಈ ಮಿನಿ ಬೈಕಿನಲ್ಲಿ 124 ಸಿಸಿ ಎಸ್‌ಒಹೆಚ್‌ಸಿ ಏರ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 6,750 ಆರ್‌ಪಿಎಂನಲ್ಲಿ 9.4 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 11 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೊಂಡಾ ಮಂಕಿ ಬೈಕ್ ಅನಾವರಣ

ಈ ಎಂಜಿನ್ ನೊಂದಿಗೆ ಹೊಸ 5-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಈ ಹೊಸ ಹೊಂಡಾ ಮಂಕಿ ಬೈಕ್ 91 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಬೈಕ್ 67 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೊಂಡಾ ಮಂಕಿ ಬೈಕ್ ಅನಾವರಣ

ಹೊಸ ಹೊಂಡಾ ಮಂಕಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಯುಎಸ್‌ಡಿ ಫೋರ್ಕ್‌ಗಳೊಂದಿಗೆ 100 ಎಂಎಂ ಟ್ರ್ಯಾವೆಲ್ ನೊಂದಿಗೆ ಪ್ರೀಮಿಯಂ ಅಲ್ಯೂಮೈಟ್ ಫಿನಿಶ್ ಮತ್ತು ಹಿಂಭಾಗದಲ್ಲಿ ಎರಡು ಹಂತದ ರಿಷ್ಕೃತ ಡ್ಯಾಂಪರ್ ರಬ್ಬರ್‌ಗಳೊಂದಿಗೆ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿವೆ.

67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೊಂಡಾ ಮಂಕಿ ಬೈಕ್ ಅನಾವರಣ

ಈ ಮಿನಿ ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 190 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇವುಗಳೊಂದಿಗೆ ಐಎಂಯು ಆಧಾರಿತ ಎಬಿಎಸ್ ಅನ್ನು ನೀಡಲಾಗಿದೆ.

67 ಕಿ.ಮೀ ಮೈಲೇಜ್, ಆಕರ್ಷಕ ವಿನ್ಯಾಸದ ಹೊಸ ಹೊಂಡಾ ಮಂಕಿ ಬೈಕ್ ಅನಾವರಣ

ಹೋಂಡಾ ಮಂಕಿ ಬೈಕ್ 1970ರ ದಶಕದ ಐಕಾನ್ ಆಗಿತ್ತು, ಹೊಸ ನವೀಕತರಣಗಳೊಂದಿಗೆ ಮಂಕಿ ಬೈಕ್ ಶೀಘ್ರದಲ್ಲೇ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇನ್ನು ಈ ಹೊಸ ಹೋಂಡಾ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

Most Read Articles

Kannada
English summary
2022 Honda Monkey Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X