ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ತನ್ನ ಹೊಸ ಸೂಪರ್ ಕಬ್ 125 ಮಾದರಿಯನ್ನು ಅನಾವರಣಗೊಳಿಸಿದೆ. ಈ 2022ರ ಹೋಂಡಾ ಸೂಪರ್ ಕಬ್ 125 ಕೆಲವು ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಹೊಸ ಹೋಂಡಾ ಸೂಪರ್ ಕಬ್ 125 ಮೊಪೆಡ್ ಮಾದರಿಯು ಎಂಜಿನ್ ಅನ್ನು ಯುರೋ5 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. 2022ರ ಹೋಂಡಾ ಸೂಪರ್ ಕಬ್ 125 ಮಾದರಿಯಲ್ಲಿ ನಲ್ಲಿ ಸಿಂಗಲ್ ಓವರ್‌ಹೆಡ್ ಕ್ಯಾಮ್, ಎರಡು-ವಾಲ್ವ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 9.6 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 10.4 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಇನ್ನು ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಈ ಹೊಸ ಸೂಪರ್ ಕಬ್ 125 ನಲ್ಲಿ ಸ್ಮಾರ್ಟ್ ಕೀ ಸಿಸ್ಟಂ ಅನ್ನು ಹೊಂದಿದೆ. ಇದರಲ್ಲಿ ಆನ್ಸರ್ ಬ್ಯಾಕ್ ಫಂಕ್ಷನ್ ಅನ್ನು ಹೊಂದಿದೆ. ಇದು ದೊಡ್ಡ ಪಾರ್ಕಿಂಗ್ ಲಾಟ್ ನಲ್ಲಿ ವಾಹನವನ್ನು ಪತ್ತೆ ಹಚ್ಚಲು ಇದು ಸಹಾಯಮಾಡುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಹೋಂಡಾ ಕಂಪನಿಯು ಸೂಪರ್ ಕಬ್ 125 ಮಾದರಿಯನ್ನು 1958 ರಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟಿತ್ತು. ಹೋಂಡಾ ಸೂಪರ್ ಕಬ್ ಅನ್ನು ಸಾರ್ವಕಾಲಿಕ ಹೋಂಡಾದ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನಗಳಲ್ಲಿ ಒಂದಾಗಿದೆ,

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಇದು 2017ರ ವೇಳೆಗೆ 100 ಮಿಲಿಯನ್ ಯೂನಿಟ್‌ಗಳನ್ನು ಮಾರಾಟ ಮಾಡಿದೆ. ಪ್ರಸ್ತುತ ಸೂಪರ್ ಕಬ್ ಅದೇ ಕ್ಲಾಸಿಕ್ ಶೈಲಿ ಮತ್ತು ಮೂಲದ ಸರಳ ಮೆಕ್ಯಾನಿಕಲ್‌ ಅಂಶಗಳನ್ನು ಒಳಗೊಂಡಿದೆ. ಆದರೆ ಆಧುನಿಕ ತಂತ್ರಜ್ಞಾನವನ್ನು ಸೇರಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ತನ್ನ ಸೂಪರ್ ಕಬ್ ಅನ್ನು ಎಂದಿಗೂ ಮಾರಾಟ ಮಾಡಿಲ್ಲ, ಆದರೆ 1980ರ ದಶಕದ ಹೀರೋ ಹೋಂಡಾ ಕಂಪನಿಯ ಎಲ್ಲಾ ಆವೃತ್ತಿಗಳು, ಹೆಚ್ಚು ಮಾರಾಟವಾಗುವ ಹೀರೋ ಹೋಂಡಾ ಸಿಡಿ 100 ಸೇರಿದಂತೆ 100 ಸಿಸಿ ಎಂಜಿನ್ ಹೊಂದಿದ್ದು, ಅದರ ಮೂಲವನ್ನು ಹೋಂಡಾ ಕಬ್ ನಿಂದ ಎರವಲು ಪಡೆಯಲಾಗಿದೆ

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಹೀರೋ ಕ್ಲಚ್ ಇಲ್ಲದೆ ಸ್ಟೆಪ್-ಥ್ರೂ ಮಾದರಿಯನ್ನು ಪರಿಚಯಿಸಿದರು, ಇದನ್ನು ಹೋಂಡಾ ಕಬ್ ಅನ್ನು ಆಧರಿಸಿದ ಹೀರೋ ಹೋಂಡಾ ಸ್ಟ್ರೀಟ್ ಎಂದು ಕರೆಯಲಾಗುತ್ತಿತ್ತು, ಆದರೆ ಆ ಮಾದರಿಯು ಭಾರತದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ವಿಫಲವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಭಾರತದಲ್ಲಿ ಬಜಾಜ್ ಆಟೋ 1980ರ ದಶಕದಲ್ಲಿ ಹೋಂಡಾ ಕಬ್ ಮಾದರಿಯಂತೆ ಇರುವ ಎಂ -50 ಎಂದು ಕರೆಯಲ್ಪಡುವ ಸ್ಟೆಪ್-ಥ್ರೂ ಅನ್ನು ಪರಿಚಯಿಸಲಾಗಿತ್ತು. ಆದರೆ ತಾಂತ್ರಿಕವಾಗಿ ಬಜಾಜ್ ಎಂ-50 ಹೋಂಡಾ ಕಬ್ ಅನ್ನು ಆಧರಿಸಿಲ್ಲ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಎರಡು-ಸ್ಟ್ರೋಕ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಾಯಿತು. ಕೆಲವು ವರ್ಷಗಳ ನಂತರ, ಬಜಾಜ್ 80ಸಿಸಿ ಎಂಜಿನ್ ಹೊಂದಿರುವ ಎಂ-80 ಅನ್ನು ಬಿಡುಗಡೆ ಮಾಡಿತು ಮತ್ತು ಶೀಘ್ರದಲ್ಲೇ ಇದು ನೆಚ್ಚಿನ ದ್ವಿಚಕ್ರ ವಾಹನವಾಯಿತು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ 2022ರ ಹೋಂಡಾ ಸೂಪರ್ ಕಬ್ 125

ಕಡಿಮೆ ನಿರ್ವಹಣೆ ಮತ್ತು ಉತ್ತಮ ಮೈಲೇಜ್ ನಿಂದ 1980ರ ದಶಕದಲ್ಲಿ ಬಜಾಜ್ ಎಂ-80 ಅನ್ನು ಹೆಚ್ಚು ಮಾರಾಟವಾದವು. ಆದರೆ ಈ 2022ರ ಹೋಂಡಾ ಸೂಪರ್ ಕಬ್ 125 ಮೊಪೆಡ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ. ಈ ಮದರಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
2022 Honda Super Cub 125 Unveiled. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X