350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

Royal Enfield Classic 350, Meteor 350, Bullet 350, Electra 350 ಹಾಗೂ Honda CB 350 ಬೈಕುಗಳು ದೇಶಿಯ ಮಾರುಕಟ್ಟೆಯ 350 cc ಸೆಗ್ ಮೆಂಟಿನಲ್ಲಿ ಮಾರಾಟವಾಗುತ್ತಿವೆ. ಈ ಸೆಗ್ ಮೆಂಟಿನಲ್ಲಿ ಕಳೆದ ತಿಂಗಳು ಒಟ್ಟು 36,543 ಯುನಿಟ್ ಬೈಕುಗಳು ಮಾರಾಟವಾಗಿವೆ.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಈ ಮಾರಾಟ ಪ್ರಮಾಣವು 2020 ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ 20.86% ನಷ್ಟು ಕಡಿಮೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 350 ಸಿಸಿ ಬೈಕ್ ಸೆಗ್ ಮೆಂಟಿನಲ್ಲಿ 46,177 ಯುನಿಟ್ ಬೈಕುಗಳು ಮಾರಾಟವಾಗಿದ್ದವು. ಅದೇ ರೀತಿ ಈ ವರ್ಷದ ಜುಲೈ ತಿಂಗಳ ಮಾರಾಟ ಪ್ರಮಾಣಕ್ಕೆ ಹೋಲಿಸಿದರೆ ಆಗಸ್ಟ್ ತಿಂಗಳ ಮಾರಾಟ ಪ್ರಮಾಣವು 6.38% ರಷ್ಟು ಕಡಿಮೆಯಾಗಿದೆ.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಈ ವರ್ಷದ ಜುಲೈ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯ 350 ಸಿಸಿ ಬೈಕ್ ಸೆಗ್ ಮೆಂಟಿನಲ್ಲಿ 39,034 ಯುನಿಟ್ ಬೈಕ್ ಗಳು ಮಾರಾಟವಾಗಿದ್ದವು. Royal Enfield 350 ಸಿಸಿ ಸೆಗ್ ಮೆಂಟಿನಲ್ಲಿ ಅತೀ ಹೆಚ್ಚು ಮಾರಾಟವಾಗುವ ಬೈಕ್ ಆಗಿದೆ. ಚೆನ್ನೈ ಮೂಲದ Royal Enfield ಕಂಪನಿಯು 350 ಸಿಸಿ ಸೆಗ್ ಮೆಂಟಿನ ಒಟ್ಟು ಮಾರಾಟದಲ್ಲಿ 95% ನಷ್ಟು ಪಾಲನ್ನು ಹೊಂದಿದೆ.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

Classic 350 ಬೈಕ್ Royal Enfield ಕಂಪನಿಯ ಪ್ರಮುಖ ಮಾದರಿಯಾಗಿದೆ. Classic 350 ಬೈಕ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. Royal Enfield ಕಳೆದ ಆಗಸ್ಟ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ Classic 350 ಬೈಕಿನ ಒಟ್ಟು 23,453 ಯುನಿಟ್ ಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು 350 ಸಿಸಿ ಬೈಕ್ ಸೆಗ್ ಮೆಂಟಿನಲ್ಲಿ ಮಾರಾಟವಾದ ಒಟ್ಟು ಬೈಕ್ ಮಾರಾಟದ 64.18% ರಷ್ಟು ಆಗಿದೆ.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಆದರೆ Classic 350 ಬೈಕಿನ ಈ ಅಂಕಿ ಅಂಶವು 2020ರ ಆಗಸ್ಟ್ ತಿಂಗಳಿಗಿಂತೆ 32.59% ನಷ್ಟು ಕಡಿಮೆಯಾಗಿದೆ. ಆ ತಿಂಗಳು ಸುಮಾರು 35,000 Classic 350 ಬೈಕ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಪಟ್ಟಿಯಲ್ಲಿ Meteor 350 ಬೈಕ್ ಎರಡನೇ ಸ್ಥಾನದಲ್ಲಿದೆ. ಈ ಬೈಕ್ ಅನ್ನು Royal Enfield ಕಂಪನಿಯು ಕೆಲವು ತಿಂಗಳ ಹಿಂದಷ್ಟೇ ಬಿಡುಗಡೆಗೊಳಿಸಿತ್ತು.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಹೊಸ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾದ Meteor 350 ಕಳೆದ ವರ್ಷದ ಕೊನೆಯಲ್ಲಿ ಮಾರಾಟಕ್ಕೆ ಬಂದಿತು. ಮೂರನೇ ಸ್ಥಾನದಲ್ಲಿರುವ Bullet 350 ಬೈಕಿನ ಒಟ್ಟು 3,699 ಯುನಿಟ್ ಗಳು ಕಳೆದ ತಿಂಗಳು ಮಾರಾಟವಾಗಿವೆ. 2020ರ ಆಗಸ್ಟ್ ತಿಂಗಳಿನಲ್ಲಿ ಈ ಬೈಕಿನ ಒಟ್ಟು 7,257 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಇದರಿಂದ ಈ ಬೈಕಿನ ಮಾರಾಟ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಕೆಲ ತಿಂಗಳ ಹಿಂದಷ್ಟೇ ಮಾರಾಟಕ್ಕೆ ಬಂದ Meteor 350 ಬೈಕ್ ಮಾರಾಟದಲ್ಲಿ Bullet 350 ಬೈಕ್ ಅನ್ನು ಹಿಂದಿಕ್ಕಿದೆ ಎಂಬುದು ಗಮನಾರ್ಹ. ನಾಲ್ಕನೇ ಸ್ಥಾನದಲ್ಲಿರುವ Electra 350 ಬೈಕಿನ ಮಾರಾಟವು ಕಳೆದ ವರ್ಷದ ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಅರ್ಧದಷ್ಟು ಕುಸಿದಿದೆ. ಕಳೆದ ತಿಂಗಳು ಒಟ್ಟು 1,963 ಯುನಿಟ್ Electra ಬೈಕ್‌ಗಳನ್ನು ಮಾರಾಟ ಮಾಡಲಾಗಿದೆ.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

Royal Enfield ಕಂಪನಿ ಮಾತ್ರ 350 ಸಿಸಿ ಬೈಕ್ ಸೆಗ್ ಮೆಂಟಿನಲ್ಲಿ ಬೈಕುಗಳನ್ನು ಮಾರಾಟ ಮಾಡುವುದಿಲ್ಲ. Honda ಟೂ ವ್ಹೀಲರ್ ಕಂಪನಿಯು ತನ್ನ CB 350 ಬೈಕ್ ಅನ್ನು ಈ ಸೆಗ್ ಮೆಂಟಿನಲ್ಲಿ ಮಾರಾಟ ಮಾಡುತ್ತದೆ. Honda ಟೂ ವ್ಹೀಲರ್ ಕಂಪನಿಯ CB 350 ಹಾಗೂ CB 350 RS ಬೈಕುಗಳು Royal Enfield Meteor 350 ಬೈಕ್ ಗಳಿಗೆ ಪೈಪೋಟಿ ನೀಡುತ್ತವೆ.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಕಳೆದ ತಿಂಗಳು Honda ಟೂ ವ್ಹೀಲರ್ ಕಂಪನಿಯು ಈ ಬೈಕುಗಳ 1,047 ಯುನಿಟ್ ಗಳನ್ನು ಮಾರಾಟ ಮಾಡಿದೆ. ಕಳೆದ ತಿಂಗಳು Royal Enfield ಕಂಪನಿಯ Meteor 350 ಬೈಕುಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಲಾಗಿದೆ. ಈ ಮೂಲಕ Meteor ಬೈಕ್ 350 ಸಿಸಿ ಬೈಕ್ ಸೆಗ್ ಮೆಂಟಿನಲ್ಲಿ ಅತಿ ದೊಡ್ಡ ರಫ್ತುದಾರ ಬೈಕ್ ಆಗಿದೆ.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

ಕಳೆದ ತಿಂಗಳು Meteor 350 ಬೈಕಿನ ಒಟ್ಟು 2,378 ಯುನಿಟ್ ಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ. Honda CB 350 ರಫ್ತು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. Honda CB 350 ಬೈಕಿನ ಒಟ್ಟು 822 ಯುನಿಟ್ ಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ. ಭಾರತದಲ್ಲಿ ಹೆಚ್ಚು ಮಾರಾಟವಾಗುವ Royal Enfield Classic 350 ದೊಡ್ಡ ಪ್ರಮಾಣದಲ್ಲಿ ರಫ್ತಾಗುತ್ತಿಲ್ಲ ಎಂಬುದು ಗಮನಾರ್ಹ.

350 ಸೆಗ್'ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಬೈಕುಗಳಿವು

2020ರ ಆಗಸ್ಟ್ ತಿಂಗಳಿನಲ್ಲಿ Royal Enfield Classic 350 ಬೈಕಿನ ಒಟ್ಟು 178 ಯುನಿಟ್ ಗಳನ್ನು ರಫ್ತು ಮಾಡಲಾಗಿತ್ತು. ಇನ್ನು ಕಳೆದ ತಿಂಗಳು ಈ ಬೈಕಿನ ಒಟ್ಟು 730 ಯುನಿಟ್ ಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ. ಈ ಮೂಲಕ ರಫ್ತು ಪ್ರಮಾಣವು 303% ನಷ್ಟು ಹೆಚ್ಚಾಗಿದೆ.ಇತ್ತೀಚೆಗೆ ಬಿಡುಗಡೆಯಾದ ಹೊಸ ತಲೆಮಾರಿನ ಮಾದರಿ ಈ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಈ ಸೆಗ್ ಮೆಂಟಿನಲ್ಲಿರುವ ಬೈಕುಗಳು ಯಾವ ಪ್ರಮಾಣದಲ್ಲಿ ಮಾರಾಟವಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
350cc motorcycle sales in domestic market during august 2021 details
Story first published: Friday, September 17, 2021, 14:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X