Just In
- 59 min ago Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 13 hrs ago ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- 16 hrs ago Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- 16 hrs ago ಈ ಬೈಕ್ಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾಗಲೇ ಬೆಲೆ ಏರಿಕೆ ಮಾಡಿ ಶಾಕ್ ಕೊಟ್ಟ ಟ್ರಯಂಫ್
Don't Miss!
- News Karnataka Weather: ಮೈಸೂರು, ಬಾಗಲಕೋಟೆ ಸೇರಿ ಎಂಟು ಜಿಲ್ಲೆಗಳಿಗೆ ತಂಪಿನ ಸುದ್ದಿ ಕೊಟ್ಟ ಹವಾಮಾನ ಇಲಾಖೆ
- Finance Zero Shadow Day: ಬೆಂಗಳೂರಿನಲ್ಲಿ ಇಂದು ಪ್ರಕೃತಿಯ ಅಚ್ಚರಿ
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ 2021ರ ಡುಕಾಟಿ ಮಾನ್ಸ್ಟರ್ ಬೈಕ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ 2021ರ ಮಾನ್ಸ್ಟರ್ ಬೈಕನ್ನು ಈಗಾಗಲೇ ಜಾಗತಿಕವಾಗಿ ಪರಿಚಯಿಸಿದ್ದರು. ಈ ಹೊಸ ಡುಕಾಟಿ ಮಾನ್ಸ್ಟರ್ ಬೈಕ್ ವಿನ್ಯಾಸದ ವಿಷಯದಲ್ಲಿ ಮಾತ್ರವಲ್ಲದೆ ಹೊಸ ಫೀಚರ್, ರೈಡರ್ ಏಡ್ಸ್ ಮತ್ತು ಹೆಚ್ಚು ಪವರ್ ಫುಲ್ ಎಂಜಿನ್ ಅನ್ನು ಸಹ ಒಳಗೊಂಡಿದೆ.
2021ರ ಡುಕಾಟಿ ಮಾನ್ಸ್ಟರ್ ಬೈಕ್ ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂದು ವರದಿಯಾಗಿದೆ. ಕೊರೋನಾದಿಂದ ಡುಕಾಟಿಯ ಥೈಲ್ಯಾಂಡ್ ಸ್ಥಾವರದಲ್ಲಿ ಮಾನ್ಸ್ಟರ್ ಉತ್ಪಾದನೆಗೆ ಅಡ್ಡಿಯಾಗಿದೆ, ತ್ಪಾದನೆ ಪುನರಾರಂಭವಾದ ತಕ್ಷಣ ದನ್ನು ಭಾರತದಲ್ಲಿ ಪ್ರಾರಂಭಿಸಲಾಗುತ್ತದ. 2021ರ ಡುಕಾಟಿ ಮಾನ್ಸ್ಟರ್ ಬೈಕ್ ದೈತ್ಯಾಕಾರದ ಹಗುರವಾದ ನೇಕೆಡ್ ಸ್ಟ್ರೀಟ್ ಫೈಟರ್ ಆಗಿದೆ.
ಹೊಸ ಡುಕಾಟಿ ಮಾನ್ಸ್ಟರ್ ಬೈಕ್ ಸ್ಪೋರ್ಟಿಯರ್ ಮತ್ತು ಸ್ಕಪಲಡಡ್ ವಿನ್ಯಾಸದೊಂದಿಗೆ ಬರುತ್ತದೆ. 2021ರ ಡುಕಾಟಿ ಮಾನ್ಸ್ಟರ್ ಹೊಚ್ಚ ಹೊಸ ಎಲ್ಇಡಿ ಹೆಡ್ಲ್ಯಾಂಪ್ಗಳನ್ನು ಹೊಂದಿದೆ. ಅದರ ಸುತ್ತಲಿನ ವೃತ್ತಾಕಾರದ ಎಲ್ಇಡಿ ಡಿಆರ್ಎಲ್ಗಳಿಂದ ಎದ್ದು ಕಾಣುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್
2021ರ ಮಾನ್ಸ್ಟರ್ ಹೊಸ ಮಾನ್ಸ್ಟರ್ ಸ್ಕಪಲಡಡ್ ಟ್ಯಾಂಕ್ ವಿನ್ಯಾಸ, ಡೈನಾಮಿಕ್ ಟರ್ನ್ ಇಂಡಿಕೇಟರ್ಸ್ ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ಲೈಟ್ಗಳನ್ನು ಸಹ ಒಳಗೊಂಡಿದೆ. ಈ ಹೊಸ ಬೈಕಿನಲ್ಲಿ ಹ್ಯಾಂಡಲ್ಬಾರ್ ಮತ್ತು ಫುಟ್ಪೆಗ್ ಸ್ಥಾನಗಳಿಗೆ ಬದಲಾಯಿಸಲಾಗಿದೆ.
ಹೊಸ ಡುಕಾಟಿ ಮಾನ್ಸ್ಟರ್ ಸ್ಟೈಲಿಂಗ್ ಅಪ್ಡೇಟ್ನೊಂದಿಗೆ, ಡುಕಾಟಿ ಹೊಸ ಮಾನ್ಸ್ಟರ್ ಇನ್ನೂ ಹಗುರವಾದ ಆವೃತ್ತಿಯಾಗಿದೆ ಎಂದು ಖಚಿತಪಡಿಸಿದೆ. ಇಟಲಿ ಸೂಪರ್ಬೈಕ್ ತಯಾರಕರು ಈ ಬೈಕಿನ ತೂಕವನ್ನು ಕಡಿಮೆ ಮಾಡಲು ಯಶಸ್ವಿಯಾಗಿದ್ದಾರೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್
ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಡುಕಾಟಿ ಮಾನ್ಸ್ಟರ್ ಬೈಕಿಗೆ 18 ಕೆಜಿ ಕಡಿಮೆಯಾಗಿದೆ. ಈ ಹೊಸ ಡುಕಾಟಿ ಮಾನ್ಸ್ಟರ್ ಬೈಕ್ ದೊಡ್ಡ ಪ್ಯಾನಿಗಲೆ ಒಡಹುಟ್ಟಿದವರಿಂದ ಕಾನ್ಸೆಪ್ಟ್ ಅನ್ನು ಎರವಲು ಪಡೆಯುತ್ತದೆ.
2021ರ ಡುಕಾಟಿ ಮಾನ್ಸ್ಟರ್ ಬೈಕಿನಲ್ಲಿ ಪವರ್ ಫುಲ್ 937 ಸಿಸಿ ಎಲ್-ಟ್ವಿನ್ ಟೆಸ್ಟಾಸ್ಟ್ರೆಟಾ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9250 ಆರ್ಪಿಎಂನಲ್ಲಿ 111 ಬಿಹೆಚ್ಪಿ ಮತ್ತು 6500 ಆರ್ಪಿಎಂನಲ್ಲಿ 93 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ.
MOST READ: ಹೊಸ ಹೀರೋ ಎಕ್ಸ್ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ
ಇದರೊಂದಿಗೆ ಟೋ-ವೇ ಕ್ವೀಕ್ ಶಿಫ್ಟರ್ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. 2021ರ ಡುಕಾಟಿ ಮಾನ್ಸ್ಟರ್ ಬೈಕಿನಲ್ಲಿನ ಇತರ ಫೀಚರ್ ಗಳಾದ, ಎಲೆಕ್ಟ್ರಾನಿಕ್ ರೈಡರ್ ಅಸಿಸ್ಟ್ ಗಳು ಮತ್ತು 4.3-ಇಂಚಿನ ಪೂರ್ಣ-ಬಣ್ಣದ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರೊಂದಿಗೆ ಸ್ಪೋರ್ಟ್, ಅರ್ಬನ್ ಮತ್ತು ಟೂರಿಂಗ್ ಎಂಬ ಮೂರು ರೈಡಿಂಗ್ ಮೋಡ್ಗಳನ್ನು ಕೂಡ ಹೊಂದಿವೆ.
ಇನ್ನು ಈ ಬೈಕಿನಲ್ಲಿ ಐಷಾರಾಮಿ ಮಾದರಿಗಳಲ್ಲಿರುವಂತ ಟ್ಯಾಕ್ಷನ್ ಕಂಟ್ರೀಲ್, ವ್ಹೀಲಿ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಗಳನ್ನು ಹೊಂದಿವೆ. ಇನ್ನು ಈ ಹೊಸ 2021ರ ಡುಕಾಟಿ ಮಾನ್ಸ್ಟರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಇದೇ ವರ್ಷದಲ್ಲಿ ಬಿಡುಗಡೆಯಾಗಲಿದೆ.