ಗ್ರಾಹಕರ ಕೈಸೇರಲು ಸಜ್ಜಾಗಿರುವ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಹೀಗಿರಲಿದೆ ನೋಡಿ..

ಬಜಾಜ್ ಆಟೋ ಕಂಪನಿಯು ಪಲ್ಸರ್ ಸರಣಿಯಲ್ಲಿ ಹೊಸದಾಗಿ ಪಲ್ಸರ್ ಎನ್ಎಸ್ 125 ಎಂಟ್ರಿ ಲೆವಲ್ ಪ್ರೀಮಿಯಂ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಶೀಘ್ರದಲ್ಲೇ ಗ್ರಾಹಕರ ಕೈಸೇರಲು ಸಿದ್ದವಾಗುತ್ತಿದೆ.

ಗ್ರಾಹಕರ ಕೈಸೇರಲು ಸಜ್ಜಾಗಿರುವ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಹೀಗಿರಲಿದೆ ನೋಡಿ..

ಪ್ರೀಮಿಯಂ ಫೀಚರ್ಸ್ ಹೊಂದಿರುವ ಎಂಟ್ರಿ ಲೆವಲ್ ಬೈಕ್‌ಗಳ ಬೇಡಿಕೆ ಆಧಾರದ ಮೇಲೆ ಬಜಾಜ್ ಆಟೋ ಕಂಪನಿಯು ಪಲ್ಸರ್ ಎನ್ಎಸ್ 125 ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಎನ್ಎಸ್ ಮಾದರಿಗಳು ಪ್ರೀಮಿಯಂ ಬೈಕ್ ಸರಣಿಯಲ್ಲಿ ತಮ್ಮದೆ ಆದ ಜನಪ್ರಿಯತೆ ಹೊಂದಿರುವುದೇ ಹೊಸ ಬೈಕ್ ಮಾದರಿಯನ್ನು ಎಂಟ್ರಿ ಲೆವಲ್‌ನಲ್ಲಿ ಇದೀಗ ಎನ್ಎಸ್ 125 ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿದೆ.

ಗ್ರಾಹಕರ ಕೈಸೇರಲು ಸಜ್ಜಾಗಿರುವ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಹೀಗಿರಲಿದೆ ನೋಡಿ..

ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌‌ಶೋರೂಂ ಪ್ರಕಾರ ರೂ. 93,690 ಬೆಲೆ ಹೊಂದಿದ್ದು, ಪಲ್ಸರ್ ಎನ್ಎಸ್ 160 ಮಾದರಿಯನ್ನು ಆಧರಿಸಿ ಹೊಸ ಎಂಟ್ರಿ ಲೆವಲ್ ಮಾದರಿಯ್ನು ಅಭಿವೃದ್ದಿಪಡಿಸಲಾಗಿದೆ.

ಗ್ರಾಹಕರ ಕೈಸೇರಲು ಸಜ್ಜಾಗಿರುವ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಹೀಗಿರಲಿದೆ ನೋಡಿ..

ಬಜಾಜ್ ಆಟೋ ಕಂಪನಿಯು ಹೊಸ ಪಲ್ಸರ್ ಎನ್ಎಸ್ 125 ಮಾದರಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಜೊಡಿಸಿದ್ದು, ಫೀಚರ್ಸ್ ಮತ್ತು ಪರ್ಫಾಮೆನ್ಸ್‌ನಲ್ಲಿ ಹೊಸ ಬೈಕ್ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಗ್ರಾಹಕರ ಕೈಸೇರಲು ಸಜ್ಜಾಗಿರುವ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಹೀಗಿರಲಿದೆ ನೋಡಿ..

ಸ್ಪೋರ್ಟಿ ವಿನ್ಯಾಸ ಹೊಂದಿರುವ ಹೊಸ ಬೈಕಿನಲ್ಲಿ ಬಜಾಜ್ ಕಂಪನಿಯು ಅತ್ಯುತ್ತಮ ನಿರ್ವಹಣೆ ಮತ್ತು ಸ್ಥಿರತೆಗಾಗಿ ಸೆಗ್ಮೆಂಟ್ ಇನ್ ಫಸ್ಟ್ ಫೀಚರ್ಸ್‌ಗಳಾದ ಪೆರಿಮೀಟರ್ ಫ್ರೆಮ್ ಮತ್ತು ನೈಟ್ರಾಕ್ಸ್ ಮೊನೊ-ಶಾಕ್ ಅಬ್ಸಾರ್ಬರ್‌ನಂತಹ ಪ್ರಮುಖ ತಾಂತ್ರಿಕ ಅಂಶಗಳನ್ನು ಜೋಡಣೆ ಮಾಡಿದೆ. ನೈಟ್ರಾಕ್ಸ್ ಮೊನೊ-ಶಾಕ್ ಅಬ್ಸಾರ್ಬರ್‌ ಸೌಲಭ್ಯವು ಹೈ ಸ್ಪೀಡ್ ಸಂದರ್ಭದಲ್ಲೂ ಬೈಕಿಗೆ ಉತ್ತಮ ಸ್ಥಿರತೆ ನೀಡಲಿದ್ದು, ಶಾರ್ಪ್ ಹ್ಯಾಡ್ಲಿಂಗ್ ಮತ್ತು ಉತ್ತಮ ಆಸನ ಸೌಲಭ್ಯವು ಅರಾಮದಾಯಕ ಬೈಕ್ ಸವಾರಿಗೆ ಪೂರಕವಾಗಿವೆ.

ಹಾಗೆಯೇ ಹೊಸ ಬೈಕಿನಲ್ಲಿ ಸಿಗ್ನಿಚರ್ ಹೆಡ್‌ಲ್ಯಾಂಪ್ ಜೊತೆ ಟ್ವಿನ್ ಪೈಲೆಟ್ ಲ್ಯಾಂಪ್ಸ್, ಟ್ವಿನ್ ಸ್ಟ್ರೀಪ್ ಎಲ್ಇಡಿ ಟೈಲ್‌ಲ್ಯಾಂಪ್, ಸ್ಪ್ಲಿಟ್ ಗ್ರ್ಯಾಬ್ ರೈಲ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಆಕರ್ಷಕ ಬೆಲ್ಲಿ ಪ್ಯಾನ್ ಪಡೆದುಕೊಂಡಿರುವುದನ್ನು ಈ ವಿಡಿಯೋದಲ್ಲಿ ನೀವು ವೀಕ್ಷಿಸಬಹುದು.

ಗ್ರಾಹಕರ ಕೈಸೇರಲು ಸಜ್ಜಾಗಿರುವ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಹೀಗಿರಲಿದೆ ನೋಡಿ..

ಇನ್ನು ಬಜಾಜ್ ಆಟೋ ಕಂಪನಿಯು ಹೊಸ ಪಲ್ಸರ್ ಎನ್ಎಸ್ 125 ಬೈಕ್ ಮಾದರಿಯಲ್ಲಿ ಹೊಸ ಎಮಿಷನ್ ಪ್ರೇರಿತ ಡಿಟಿಎಸ್-ಐ 125 ಸಿಸಿ ಎಂಜಿನ್ ಮಾದರಿಯನ್ನು ಜೋಡಣೆ ಮಾಡಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 12-ಬಿಎಚ್‌ಪಿ ಮತ್ತು 11-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಉತ್ತಮ ಮಾದರಿಯಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಗ್ರಾಹಕರ ಕೈಸೇರಲು ಸಜ್ಜಾಗಿರುವ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಹೀಗಿರಲಿದೆ ನೋಡಿ..

ಇದರೊಂದಿಗೆ ಹೊಸ ಬೈಕ್ ಮಾದರಿಯು 125 ಸಿಸಿ ವಿಭಾಗದ ಇತರೆ ಬೈಕ್ ಮಾದರಿಗಳಿಂತಲೂ ಉತ್ತಮ ಎಂಜಿನ್ ಆಯ್ಕೆ ಹೊಂದಿರುವುದು ಖಚಿತವಾಗಿದ್ದು, ಹೊಸ ಬೈಕ್ ಮಾದರಿಯಲ್ಲಿ ಸಾಮಾನ್ಯ ಮಾದರಿಯ 150 ಸಿಸಿ ಬೈಕ್ ಮಾದರಿಯಲ್ಲಿರುವ ಫೀಚರ್ಸ್‌ಗಳಿರುವುದು ಗ್ರಾಹಕರ ಆಯ್ಕೆ ಹೆಚ್ಚಿಸಲಿದೆ.

ಗ್ರಾಹಕರ ಕೈಸೇರಲು ಸಜ್ಜಾಗಿರುವ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಹೀಗಿರಲಿದೆ ನೋಡಿ..

ಹೊಸ ಬೈಕ್ ಮೂಲಕ ಬೆಲೆ ಮತ್ತು ಫೀಚರ್ಸ್ ಎರಡು ಕಡೆಗಳಲ್ಲೂ ಗಮನಹರಿಸಿರುವ ಬಜಾಜ್ ಕಂಪನಿಯು ಉತ್ತಮ ಬೇಡಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಬೈಕಿನಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ನಾಲ್ಕು ಬಣ್ಣಗಳ ಆಯ್ಕೆ ನೀಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಗ್ರಾಹಕರ ಕೈಸೇರಲು ಸಜ್ಜಾಗಿರುವ ಬಜಾಜ್ ಪಲ್ಸರ್ ಎನ್ಎಸ್125 ಬೈಕ್ ಹೀಗಿರಲಿದೆ ನೋಡಿ..

ಪಲ್ಸರ್ ಎನ್ಎಸ್ 125 ಬೈಕ್ ಮಾದರಿಯು ಬೀಚ್ ಬ್ಲ್ಯೂ, ಫ್ಲೆರಿ ಆರೇಂಜ್, ರೆಡ್ ಮತ್ತು ಗ್ರೆ ಬಣ್ಣಗಳಲ್ಲಿ ಲಭ್ಯವಿದ್ದು, ಹೊಸ ಬೈಕ್ ಮಾದರಿಯ ಮೂಲಕ 150 ಸಿಸಿ ಮತ್ತು 160 ಬೈಕ್ ವಿಭಾಗದಲ್ಲಿನ ಗ್ರಾಹಕರನ್ನು ಸೆಳೆಯಲು ಬಜಾಜ್ ಕಂಪನಿಯು ಬೃಹತ್ ಪ್ಲ್ಯಾನ್ ರೂಪಿಸಿದೆ.

Most Read Articles

Kannada
English summary
Bajaj Pulsar NS 125 First Look Walkaround Video. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X