Just In
- 9 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 10 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 11 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 11 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಯಮಹಾ ಎಫ್ಝಡ್-ಎಕ್ಸ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ
ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎಫ್ಝಡ್-ಎಕ್ಸ್ ಎಂಬ ಹೊಸ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಯಮಹಾ ಎಫ್ಝಡ್-ಎಕ್ಸ್ ಬೈಕ್ ಭಾರತದಲ್ಲಿ ಇದೇ ತಿಂಗಳ 18ರಂದು ಬಿಡುಗಡೆಯಾಗಲಿದೆ.
ವರದಿಗಳ ಪ್ರಕಾರ ಹೊಸ ಯಮಹಾ ಎಫ್ಝಡ್-ಎಕ್ಸ್ ಬೈಕ್ ಖರೀದಿಗಾಗಿ ಅನಧಿಕೃತವಾಗಿ ಆಯ್ದ ಯಮಹಾ ಡೀಲರುಗಳು ಬುಕ್ಕಿಂಗ್ ಪ್ರಾರಂಭಿಸಿದ್ದಾರೆ, ಈ ಹೊಸ ಯಮಹಾ ಎಫ್ಝಡ್-ಎಕ್ಸ್ ಬೈಕಿನ ಟಿವಿಸಿ ಚಿತ್ರೀಕರಣ ನಡೆಸುವಾಗ ಇದರ ಸ್ಪೈ ಚಿತ್ರಗಳು ಬಹಿರಂಗವಾಗಿತ್ತು. ಈ ಎಫ್ಝಡ್-ಎಕ್ಸ್ ಬೈಕ್ ಭಾರತದಲ್ಲಿ ಹಲವು ಬಾರಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಹೊಸ ಎಫ್ಝಡ್-ಎಕ್ಸ್ ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ಟಿಯರ್ ಐ ಆಕಾರದ ಫ್ಯೂಯಲ್ ಟ್ಯಾಂಕ್ನೊಂದಿಗೆ ಆಧುನಿಕ-ರೆಟ್ರೊ ಲುಕ್ ಅನ್ನು ಹೊಂದಿದೆ.
ಹೊಸ ಯಮಹಾ ಎಫ್ಝಡ್-ಎಕ್ಸ್ ಬೈಕ್ ರೋಡ್ಸ್ಟರ್ ವಿನ್ಯಾಸದಿಂದಾಗಿ ಟ್ಯಾಂಕ್ ಯಾವುದೇ ಫೇರಿಂಗ್ ಅಥವಾ ಟ್ರಿಮ್ ಅನ್ನು ಹೊಂದಿಲ್ಲ. ಬದಲಾಗಿ ಇದು ಡ್ಯುಯಲ್-ಟೋನ್ ಫ್ಯೂಯಲ್ ಟ್ಯಾಂಕ್ ಅನ್ನು ಬ್ಲ್ಯಾಕ್ ಔಟ್ ಸ್ಟ್ರಿಪ್ನೊಂದಿಗೆ ಮಧ್ಯದಲ್ಲಿ ಇರಿಸಲಾಗಿದೆ.
ಇನ್ನು ಈ ಎಫ್ಝಡ್-ಎಕ್ಸ್ ಬೈಕಿನಲ್ಲಿ ಇಂಟಿಗ್ರೇಟೆಡ್ ಡಿಆರ್ಎಲ್ಗಳೊಂದಿಗೆ ದುಂಡಗಿನ ಆಕಾರದ ಹೆಡ್ಲ್ಯಾಂಪ್, ಬ್ಲ್ಯಾಕ್ ಔಟ್ ಫೆಂಡರ್ಗಳು, ಎಕ್ಸಾಸ್ಟ್, ರಿಬ್ಬಡ್ ಸಿಂಗಲ್-ಪೀಸ್ ಸೀಟ್, ರಿಯರ್ ಗ್ರ್ಯಾಬ್ ರೈಲ್, ಟೈರ್ ಹಗ್ಗರ್, ಸಿಂಗಲ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಒಳಗೊಂಡಿದೆ.
ಇದರ ಕ್ಲಸ್ಟರ್ ಸ್ಟ್ಯಾಂಡರ್ಡ್ ಮಾದರಿಯಿಂದ ಎರವಲು ಪಡೆದುಕೊಂಡಿದೆ. ಉತ್ತಮ ಸವಾರಿ ಅನುಭವ ನೀಡುವಂತಹ ಸೀಟಿಂಗ್ ಪೋಸಿಶನ್ ಅನ್ನು ಹೊಂದಿದೆ. ವಿಶಾಲವಾದ ಹ್ಯಾಂಡಲ್ಬಾರ್ ಅನ್ನು ಹೊಂದಿದ್ದು, ಇದರೊಂದಿಗೆ ಫುಟ್ಪೆಗ್ ಅನ್ನು ಕೂಡ ಹೊಂದಿದೆ.
ಈ ಎಫ್ಝಡ್-ಎಕ್ಸ್ ಬೈಕ್ 2020 ಎಂಎಂ ಉದ್ದ, 785 ಎಂಎಂ ಅಗಲ ಮತ್ತು 1115 ಎಂಎಂ ಎತ್ತರವನ್ನು ಹೊಂದಿರುತ್ತದೆ. ಇನ್ನು ಈ ಯಮಹಾ ಎಫ್ಝಡ್-ಎಕ್ಸ್ ಬೈಕ್ 1330 ಎಂಎಂ ವ್ಹೀಲ್ಬೇಸ್ ಅನ್ನು ಹೊಂದಿರಲಿದೆ. ಇದೇ ಸರಣಿಯ ಎಫ್ಜೆಡ್ -150 ಬೈಕ್ ಕೂಡ ಇದೇ ರೀತಿಯ ವ್ಹೀಲ್ಬೇಸ್ ಅನ್ನು ಹೊಂದಿದೆ.
ಈ ಯಮಹಾ ಎಫ್ಝಡ್-ಎಕ್ಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ನೊಂದಿಗೆ ಪ್ರಿ-ಲೋಡ್ ಹೊಂದಾಣಿಕೆಯನ್ನು ಒಳಗೊಂಡಿದೆ.
ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಹೊಂದಿರಲಿದೆ.
ಯಮಹಾ ಎಫ್ಝಡ್-ಎಕ್ಸ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿರುವ ಕವಾಸಕಿ ಡಬ್ಲ್ಯು 175 ಬೈಕಿಗೆ ಪ್ಪ್ರತಿಸ್ಪರ್ಧಿಯಾಗಬಹುದು. ಈ ಯಮಹಾ ಎಫ್ಝಡ್-ಎಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ನಿಂದ ವಿಶಿಷ್ಟವಾದ ಕೊಡುಗೆಯಾಗಿದೆ. ಈ ಬೈಕ್ ಸರಳವಾದ ವಿನ್ಯಾಸವನ್ನು ಹೊಂದಿದೆ.