ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಆಂಪಿಯರ್

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಆರಂಭಿಸಿ ಸುಮಾರು 13 ವರ್ಷಗಳ ಅನುಭವ ಹೊಂದಿರುವ ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯು ಸುಧೀರ್ಘ ಅವಧಿಯ ಪ್ರಯಾಣದಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ತನ್ನ ವಾಹನ ಮಾರಾಟದಲ್ಲಿ ಹಲವು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.

ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಆಂಪಿಯರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚುತ್ತಿರುವ ಪರಿಣಾಮ ಹೊಸ ವಾಹನ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ಎಲೆಕ್ಟ್ರಿಕ್ ವಾಹನ ಮಾರಾಟಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಇವಿ ಉತ್ಪನ್ನಗಳ ಬಿಡುಗಡೆಗೆ ಸಿದ್ದವಾಗಿರುವ ಆಂಪಿಯರ್ ಕಂಪನಿಯು ಉತ್ಪಾದನಾ ಘಟಕದ ವಿಸ್ತರಣೆಗೂ ಸಿದ್ದತೆ ನಡೆಸಿದೆ.

ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಆಂಪಿಯರ್

ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿರುವ ಆಂಪಿಯರ್ ಕಂಪನಿಗೆ ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆಯು ಮತ್ತಷ್ಟು ಬೆಂಬಲ ನೀಡಿದ್ದು, ಪ್ರಮುಖ ಸ್ಕೂಟರ್‌ಗಳ ಬೆಲೆ ಇಳಿಕೆಯೊಂದಿಗೆ ಗ್ರಾಹಕರ ಸೆಳೆಯುವ ನೀರಿಕ್ಷೆಯಲ್ಲಿದೆ.

ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಆಂಪಿಯರ್

ಕೇಂದ್ರ ಸರ್ಕಾರದ ಫೇಮ್ 2 ತಿದ್ದುಪಡಿಯ ಪರಿಣಾಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿಯಾಗಿ ಇದೀಗ ರೂ. 5 ಸಾವಿರದಿಂದ ರೂ.30 ಸಾವಿರ ತನಕ ಹೆಚ್ಚುವರಿ ಸಬ್ಸಡಿ ದೊರೆಯುತ್ತಿದ್ದು, ಹೊಸ ಸಬ್ಸಡಿ ತಿದ್ದುಪಡಿ ಘೋಷಣೆಯ ನಂತರ ಆಂಪಿಯರ್ ಸ್ಕೂಟರ್‌ಗಳ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿರುವುದು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಆಂಪಿಯರ್

ಕೇಂದ್ರ ಸರ್ಕಾರದ ಹೊಸ ಸಬ್ಸಡಿ ನಂತರ ಆಂಪಿಯರ್ ಕಂಪನಿಯು ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆಯನ್ನು ರೂ.59,990 ಮತ್ತು ರೂ.65,990ಕ್ಕೆ ನಿಗದಿಪಡಿಸಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ರೂ.9 ಸಾವಿರ ಬೆಲೆ ಇಳಿಕೆ ಮಾಡಲಾಗಿದೆ.

ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಆಂಪಿಯರ್

ಫೇಮ್ 2 ಮಾನದಂಡಗಳಿಗೆ ಅನುಗುಣವಾಗಿ ಆಂಪಿಯರ್ ಇವಿ ಸ್ಕೂಟರ್‌ಗಳು ಹೊಸ ವೈಶಿಷ್ಟ್ಯತೆ ಹೊಂದಿದ್ದು, ಬ್ಯಾಟರಿ ಪ್ಯಾಕ್ ಜೋಡಣೆಯ ಆಧಾರದ ಮೇಲೆ ಸಬ್ಸಡಿ ವಿನಾಯ್ತಿಯನ್ನು ಘೋಷಣೆ ಮಾಡಲಾಗಿದೆ.

ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಆಂಪಿಯರ್

ಇನ್ನು ಆಂಪಿಯರ್ ಕಂಪನಿಯ ಗ್ರಾಹಕರ ಬೇಡಿಕೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಮಾರಾಟ ಜಾಲ ವಿಸ್ತರಿಸುತ್ತಿದ್ದು, ಹೊಸ ಘಟಕದ ನಿರ್ಮಾಣ ಮತ್ತು ಆಧುನಿಕ ವಾಹನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸುಮಾರು ರೂ. 700 ಕೋಟಿ ಹೂಡಿಕೆಗೆ ಸಿದ್ದವಾಗಿದೆ.

ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಆಂಪಿಯರ್

ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳೊಂದಿಗೆ ಈಗಾಗಲೇ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಆಂಪಿಯರ್ ಕಂಪನಿಯು ಹೊಸ ಯೋಜನೆ ಅಡಿ ಮತ್ತಷ್ಟು ಹೊಸ ಮಾದರಿಯ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಪರಿಚಯಿಸುತ್ತಿದ್ದು, 10.40 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಆಂಪಿಯರ್ ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವು ತಮಿಳುನಾಡಿನಲ್ಲಿ ಇದೇ ವರ್ಷಾಂತ್ಯಕ್ಕೆ ಆರಂಭವಾಗುವ ಸಿದ್ದತೆಯಲ್ಲಿದೆ.

ಝೀಲ್ ಮತ್ತು ಮ್ಯಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇಳಿಕೆ ಮಾಡಿದ ಆಂಪಿಯರ್

ಆಂಪಿಯರ್ ಕಂಪನಿಯ ರಿಯೋ ಪ್ಲಸ್, ರಿಯೋ ಎಲೈಟ್, ವಿ48 ಪ್ಲಸ್, ಮ್ಯಾಗ್ನಸ್ 60 ಸ್ಲೋ ಸ್ಪೀಡ್ ಮತ್ತು ಜೀಲ್ ಇಎಕ್ಸ್ ಮಾದರಿಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಇವಿ ಸ್ಕೂಟರ್ ವೆರಿಯೆಂಟ್‌ಗಳಲ್ಲಿ ಮೈಲೇಜ್ ಹೆಚ್ಚಳಕ್ಕಾಗಿ ಲೀಥಿಯಂ ಮತ್ತು ಲೀಡ್ ಆ್ಯಸಿಡ್ ಬ್ಯಾಟರಿ ಮಾದರಿಗಳ ಆಯ್ಕೆ ನೀಡಲಾಗಿದೆ.

Most Read Articles

Kannada
English summary
Ampere EV Scooters Prices Drop By Rs 9,000 After FAME 2 Subsidy. Read in Kannada.
Story first published: Saturday, June 19, 2021, 0:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X