ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್

ದೇಶದಲ್ಲಿ ಇಂಧನ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಇದರ ಮಧ್ಯೆ ಆಂಪಿಯರ್ ಕಂಪನಿಯು ಎಂಪವರ್ಯಿಂಗ್ ಚೇಂಜ್ ಎಂಬ ವಿಶೇಷ ಗ್ರಾಹಕ ಶಿಕ್ಷಣ ಅಭಿಯಾನವನ್ನು ಆರಂಭಿಸುವುದಾಗಿ ತಿಳಿಸಿದೆ.

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್

ಈ ಅಭಿಯಾನದ ಭಾಗವಾಗಿ ಕಂಪನಿಯು ತನ್ನ 500ಕ್ಕೂ ಹೆಚ್ಚು ಕಸ್ಟಮರ್ ಟಚ್‌ಪಾಯಿಂಟ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದರ ಪ್ರಯೋಜನಗಳನ್ನು ಜನರಿಗೆ ತಿಳಿಸಲಿದೆ. ಎಲೆಕ್ಟ್ರಿಕ್ ವಾಹನದ ವೆಚ್ಚ ಹಾಗೂ ಅವುಗಳು ಹೇಗೆ ಪರಿಸರ ಸ್ನೇಹಿಯಾಗಿವೆ ಎಂಬ ಬಗ್ಗೆ ಕಂಪನಿಯು ಜನರಿಗೆ ತಿಳಿಸಲಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳು ಇಂಧನ-ಚಾಲಿತ ಸ್ಕೂಟರ್‌ಗಳಷ್ಟೇ ಸಮರ್ಥವಾಗಿದ್ದು, ಅವುಗಳನ್ನು ಚಲಾಯಿಸುವ ವೆಚ್ಚವೂ ತುಂಬಾ ಕಡಿಮೆ ಎಂದು ಕಂಪನಿಯು ಈ ಅಭಿಯಾನದ ಮೂಲಕ ಜನರಿಗೆ ತಿಳಿಸಲಿದೆ.

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್

ಏರುತ್ತಿರುವ ಇಂಧನ ಬೆಲೆಗಳು ದೇಶಾದ್ಯಂತ ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿವೆ. ಈ ಪರಿಸ್ಥಿತಿಯಲ್ಲಿ, ಎಲೆಕ್ಟ್ರಿಕ್ ವಾಹನಗಳನ್ನು ಇಂಧನ-ಚಾಲಿತ ವಾಹನಗಳಿಗೆ ಪರ್ಯಾಯವೆಂದು ಪರಿಗಣಿಸಲಾಗುತ್ತಿದೆ. ಖಾಸಗಿ ವಾಹನಗಳನ್ನು ಖರೀದಿಸುತ್ತಿರುವ ಗ್ರಾಹಕರು ಇಂಧನ ಬೆಲೆ ಏರಿಕೆಯ ಬಗ್ಗೆ ಆತಂಕಗೊಂಡಿದ್ದಾರೆ ಎಂದು ಆಂಪಿಯರ್ ಎಲೆಕ್ಟ್ರಿಕ್ ಮೊಬಿಲಿಟಿಯ ಸಿಇಒ ಸಂಜೀವ್ ಪಿ ಹೇಳಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್

ಭಾರತವು ದ್ವಿಚಕ್ರ ವಾಹನಗಳ ದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿ ಹೆಚ್ಚು ಇಂಧನವನ್ನು ಬಳಸಲಾಗುತ್ತದೆ. ಇಂಧನ ಚಾಲಿತ ವಾಹನಗಳನ್ನು ದ್ವಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸುವ ಮೂಲಕ ಇಂಧನದ ಮೇಲಿನ ವೆಚ್ಚವನ್ನು ಹಾಗೂ ವಾಯು ಮಾಲಿನ್ಯವನ್ನು ತಪ್ಪಿಸಬಹುದು.

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್

ಈ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ನಿಖರ ಮಾಹಿತಿಯನ್ನು ಜನರಿಗೆ ಒದಗಿಸುವುದು ಮುಖ್ಯವಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರ ಮನಸ್ಸಿನಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಈಗ ಅವುಗಳನ್ನು ಹೋಗಲಾಡಿಸುವ ಸಮಯ ಬಂದಿದೆ. ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಬಳಸಬೇಕು ಎಂದು ಅವರು ಹೇಳಿದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್‌ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹಾಗೂ ತ್ರಿಚಕ್ರ ವಾಹನಗಳು ಇಂಧನ ವಾಹನಗಳಿಗೆ ಪರ್ಯಾಯವಾಗಿವೆ. ಅವುಗಳನ್ನು ಚಲಾಯಿಸಲು ಬಹಳ ಕಡಿಮೆ ವೆಚ್ಚವಾಗುತ್ತದೆ. ಜೊತೆಗೆ ಆಂಪಿಯರ್ ವಾಹನಗಳು ವಾಣಿಜ್ಯ ಬಳಕೆಯಿಂದಲೂ ತುಂಬಾ ಪ್ರಯೋಜನಕಾರಿ ಎಂದು ಸಂಜೀವ್ ಹೇಳಿದರು.

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್

ಇಂಧನ ಬೆಲೆ ಏರಿಕೆಯ ನಂತರ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಕಂಪನಿ ಸಂಶೋಧನೆಯೊಂದನ್ನು ಉಲ್ಲೇಖಿಸಿದೆ. ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರ ಒಲವು ಖಾಸಗಿ ವಾಹನಗಳ ಕಡೆಗೆ ಹೆಚ್ಚಾಗಿದೆ. ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವೆಚ್ಚವು ಪ್ರತಿ ಕಿ.ಮೀಗೆ 15 ಪೈಸೆ ಮಾತ್ರ ಎಂದು ಕಂಪನಿ ಹೇಳಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವಿಶೇಷ ಅಭಿಯಾನ ನಡೆಸಲಿದೆ ಆಂಪಿಯರ್ ಎಲೆಕ್ಟ್ರಿಕ್

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ರೂ.35,000ಗಳಿಂದ ಆರಂಭವಾಗುತ್ತದೆ. ಆಂಪಿಯರ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಫೇಮ್ -2 ಯೋಜನೆಯಡಿ ಸಬ್ಸಿಡಿ ನೀಡಲಾಗುತ್ತದೆ. ಗ್ರಾಹಕರು ತಿಂಗಳಿಗೆ 1,000 ಕಿ.ಮೀ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡಿದರೆ ಇಂಧನದ ಮೇಲೆ ವ್ಯಯಿಸುವ ರೂ.2,000 ಉಳಿಸಬಹುದು. ಎಲೆಕ್ಟ್ರಿಕ್ ಸ್ಕೂಟರ್‌ಗಳ ನಿರ್ವಹಣೆಯೂ ಸಹ ಕಡಿಮೆ.

Most Read Articles

Kannada
English summary
Ampere electric to educate people about electric vehicles through special campaign. Read in Kannada.
Story first published: Friday, February 26, 2021, 20:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X