ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಇಟಾಲಿಯನ್ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಪಿಯಾಜಿಯೋ ತನ್ನ ಅಂಗಸಂಸ್ಥೆಯಾದ ಎಪ್ರಿಲಿಯಾ ನಿರ್ಮಾಣದ ಪ್ರೀಮಿಯಂ ಸ್ಕೂಟರ್‌ಗಳ ಮಾರಾಟ ವ್ಯಾಪ್ತಿಯನ್ನು ಹೆಚ್ಚಿಸಲು ನಿರ್ಧರಿಸಿದ್ದು, ಮಾರಾಟ ವ್ಯಾಪ್ತಿ ಹೆಚ್ಚಿಸಲು ಮೊಟೊಪ್ಲೇಕ್ಸ್ ಮಲ್ಟಿ ಬ್ರಾಂಡ್ ಸ್ಪೋರ್ ಜೊತೆ ಕೈಜೋಡಿಸಿದೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿನ ಮಾರಾಟ ವ್ಯಾಪ್ತಿಯನ್ನು ಹೆಚ್ಚಿಸಲು ನಿರ್ಧರಿಸಿರುವ ಎಪ್ರಿಲಿಯಾ ಕಂಪನಿಯು ಮಲ್ಟಿ ಬ್ರಾಂಡ್ ಸ್ಟೋರ್ ಮೊಟೊಪ್ಲೇಕ್ಸ್ ಜೊತೆಗೂಡಿ ಹೊಸ ಪಾಲುದಾರಿಕೆ ಪ್ರಕಟಿಸಿದ್ದು, ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ನೂರಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿರುವ ಮೊಟೊಪ್ಲೇಕ್ಸ್‌ನಲ್ಲಿ ಇನ್ಮುಂದೆ ಎಪ್ರಿಲಿಯಾ ನಿರ್ಮಾಣದ ಪ್ರಮುಖ ಸ್ಕೂಟರ್‌ಗಳು ಖರೀದಿಗೆ ಲಭ್ಯವಿರಲಿವೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಎಪ್ರಿಲಿಯಾ ಕಂಪನಿಯ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.45 ರಷ್ಟು ಬೇಡಿಕೆಯು ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಗಳಿಂದಲೇ ಹರಿದುಬರುತ್ತಿದ್ದು, ವಿವಿಧ ಪ್ರೀಮಿಯಂ ಸ್ಕೂಟರ್‌ಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಭಾರತದಲ್ಲಿ ಸದ್ಯ ಎಪ್ರಿಲಿಯಾ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಟ್ರೋಮ್ 125, ಎಸ್ಆರ್ 125, ಎಸ್ಆರ್ 160, ಎಸ್ಆರ್ 160 ಕಾರ್ಬನ್ ಎಡಿಷನ್, ಎಸ್ಆರ್ 160 ರೇಸ್, ಎಸ್ಎಕ್ಸ್ಆರ್ 125 ಮತ್ತು ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡಲಿದ್ದು, ದುಬಾರಿ ಬೆಲೆ ನಡುವೆಯೂ ಹೊಸ ಸ್ಕೂಟರ್ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಉತ್ತಮ ಬೇಡಿಕೆ ಹೊಂದಿವೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಎಪ್ರಿಲಿಯಾ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಎಸ್ಎಕ್ಸ್ಆರ್ 125 ಮತ್ತು ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್ ಮಾದರಿಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಸ್ಟ್ರೋಮ್ 125, ಎಸ್ಆರ್ 125, ಎಸ್ಆರ್ 160 ಮಾದರಿಗಳು ಸಹ ಹೆಚ್ಚಿನ ಆದಾಯ ತಂದುಕೊಡುತ್ತಿವೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ಇತ್ತೀಚೆಗೆ ಹೊಸ ನವೀಕರಣಗಳನ್ನು ಪಡೆದುಕೊಂಡಿದ್ದು, ಎಸ್ಆರ್ 125 ಸ್ಕೂಟರ್ ಬೆಲೆಯು ರೂ. 1.07 ಲಕ್ಷಗಳಾದರೆ ಎಸ್ಆರ್ 160 ಸ್ಕೂಟರ್ ಬೆಲೆಯು ರೂ.1.17 ಲಕ್ಷಗಳಾಗಿದೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಹೊಸ ಎಪ್ರಿಲಿಯಾ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಮತ್ತು ಸಾಕಷ್ಟು ಸ್ಟೈಲಿಂಗ್ ನವೀಕರಣಗಳನ್ನು ಪಡೆದುಕೊಂಡಿದ್ದು, ಪ್ರಿ ಫೇಸ್‌ಲಿಫ್ಟ್ ಮಾದರಿಯಂತೆ ಹೊಸ ಎಸ್ಆರ್ 160 ಸ್ಟ್ಯಾಂಡರ್ಡ್, ಕಾರ್ಬನ್ ಮತ್ತು ರೇಸ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಹೊಸ ಎಸ್ಆರ್ 125 ಮತ್ತು ಎಸ್ಆರ್ 160 ಸ್ಕೂಟರ್‌ಗಳು ವಿನ್ಯಾಸವು ಆರ್‌ಎಸ್‌ವಿ4 ಸೂಪರ್‌ಬೈಕ್‌ನಿಂದ ಪ್ರೇರಿತವಾಗಿದ್ದು, ಸ್ಕೂಟರ್‌ಗಳ 'ರೇಸ್' ಟ್ರಿಮ್ ಆರ್‌ಎಸ್-ಜಿಪಿ-ಪ್ರೇರಿತ ಬಾಡಿ ಗ್ರಾಫಿಕ್ಸ್ ಮತ್ತು ಹ್ಯಾಂಡ್ ಗಾರ್ಡ್‌ಗಳನ್ನು ಹೊಂದಿದೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಎರಡೂ ಹೊಸ ಮಾದರಿಗಳು ಹೊಸ ವಿ-ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ನಂತಹ ಅಂಶಗಳೊಂದಿಗೆ ಅಗ್ರೇಸಿವ್ ಆಗಿ ಕಾಣುತ್ತವೆ. ಈ ಸ್ಕೂಟರ್‌ಗಳಲ್ಲಿ ಗ್ರ್ಯಾಬ್ ರೈಲ್‌ಗಳು ಮತ್ತು ಏಪ್ರನ್‌ಗಳನ್ನು ಸಹ ಪರಿಷ್ಕರಿಸಲಾಗಿದೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಹೊಸ ಮಾದರಿಗಳಲ್ಲಿ ಹಳೆಯ ಎಂಆರ್‌ಎಫ್ ಟೈರ್‌ಗಳ ಬದಲಾಗಿ ಸೀಟ್ ಟೈರ್ ಯುನಿಟ್‌ಗಳೊಂದಿಗೆ ಬದಲಾಯಿಸಿದ್ದು, ಸೀಟ್ ಸ್ಪ್ಲಿಟ್ ವಿನ್ಯಾಸದೊಂದಿಗೆ ಸ್ಕೂಟರ್‌ಗಳಿಗೆ ನಕಲು ಗಾರ್ಡ್‌ಗಳೂ ಇರುತ್ತವೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ನವೀಕರಿಸಿದ ಎಸ್‌ಆರ್ ಸ್ಕೂಟರ್‌ಗಳು ಬ್ಲೂ, ಮ್ಯಾಟ್ ಬ್ಲ್ಯಾಕ್, ಗ್ರೇ, ವೈಟ್ ಮತ್ತು ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಎರಡೂ ಮಾದರಿಗಳು 14-ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು 6-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಒಳಗೊಂಡಿವೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಹೊಸ ಎಸ್ಆರ್ 160 ಸ್ಕೂಟರ್‌ನಲ್ಲಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಹೊಂದಿದ್ದರೆ ಎಸ್ಆರ್ 125 ಸ್ಕೂಟರ್‌ನಲ್ಲಿ ಸಿಬಿಎಸ್ (ಕಾಂಬೈಡ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದ್ದು, ಎಸ್ಆರ್‌ಎಕ್ಸ್ 160 ನಿಂದ ಎರವಲು ಪಡೆದ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌, ಟ್ಯಾಕೋ ಮೀಟರ್, ಸ್ಫೀಡ್, ಪ್ರಯಾಣ ಮತ್ತು ಇಂಧನ ಬಳಕೆಗಾಗಿ ರೀಡ್‌ ಔಟ್‌ಗಳನ್ನು ಪ್ರದರ್ಶಿಸುತ್ತಿದೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಇನ್ನು ಎಸ್ಎಕ್ಸ್ಆರ್ 160 ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್ ಮಾದರಿಯು ಉತ್ತಮ ಬೇಡಿಕೆ ಹೊಂದಿದ್ದು, ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್‌ ಮಾದರಿಯು ಎಸ್ಎಕ್ಸ್ಆರ್ 160 ಮ್ಯಾಕ್ಸಿ ಸ್ಕೂಟರ್‌ಗಿಂತಲೂ ತುಸು ಕಡಿಮೆ ವೀಲ್ಹ್‌ಬೆಸ್ ಹೊಂದಿದೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಎಸ್ಎಕ್ಸ್ಆರ್ 160 ಮಾದರಿಯಲ್ಲಿ 160ಸಿಸಿ ಎಂಜಿನ್ ಆಯ್ಕೆ ಹೊಂದಿದ್ದರೆ ಎಸ್ಎಕ್ಸ್ಆರ್ 125 ಮಾಕ್ಸಿ ಸ್ಕೂಟರ್ ಮಾದರಿಯು 125ಸಿಸಿ ಎಂಜಿನ್ ಹೊಂದಿದ್ದು, ಗ್ರಾಹಕರು ಹೊಸ ಸ್ಕೂಟರ್‌ಗಳನ್ನು ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿ ಮಾಡಬಹುದಾಗಿದೆ.

ಮೊಟೊಪ್ಲೇಕ್ಸ್ ಸ್ಟೋರ್‌ಗಳ ಮೂಲಕ ಪ್ರೀಮಿಯಂ ಸ್ಕೂಟರ್ ಮಾರಾಟ ಮಾಡಲಿದೆ ಎಪ್ರಿಲಿಯಾ

ಎಸ್ಎಕ್ಸ್ಆರ್ 160 ಸ್ಕೂಟರ್ ಮಾದರಿಯು 160ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 10.5-ಬಿಎಚ್‌ಪಿ, 11.6-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಎಸ್ಎಕ್ಸ್ಆರ್ 125 ಮ್ಯಾಕ್ಸಿ ಸ್ಕೂಟರ್‌ ಮಾದರಿಯು 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 9.3-ಬಿಎಚ್‌ಪಿ, 9.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles

Kannada
English summary
Aprilia scooters to be sold at motoplex stores details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X